AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಪ್ಲ್ಯಾಟ್​ಫಾರ್ಮ್​ ಮತ್ತು ಹಳಿಗಳ ನಡುವೆ ಬಿದ್ದ ಈತ ಬದುಕಿದ!

Train Passes Over Man : ಚಲಿಸುತ್ತಿರುವ ರೈಲು ಏರಲು ಹೋಗಿ ಈ ಮನುಷ್ಯ ಪ್ಲ್ಯಾಟ್​ಫಾರ್ಮ್​ ಮತ್ತು ರೈಲುಹಳಿಗಳ ಮಧ್ಯೆ ಉರುಳಿ ಬಿದ್ದಿದ್ದಾನೆ. ಅದೃಷ್ಟ ಎಂದರೆ ಇದು!

Viral Video : ಪ್ಲ್ಯಾಟ್​ಫಾರ್ಮ್​ ಮತ್ತು ಹಳಿಗಳ ನಡುವೆ ಬಿದ್ದ ಈತ ಬದುಕಿದ!
ಸ್ವಲ್ಪದರಲ್ಲೇ ಪಾರಾದಾಗ...
TV9 Web
| Edited By: |

Updated on: Sep 06, 2022 | 5:11 PM

Share

Viral Video : ರೈಲು ಚಲಿಸುತ್ತಿರುವಾಗ ಪ್ಲ್ಯಾಟ್​ಫಾರ್ಮ್​ ಮತ್ತು ಹಳಿಗಳ ನಡುವಿನ ಅಂತರದಲ್ಲಿ ಬಿದ್ದ ವ್ಯಕ್ತಿಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಭರತನಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈ ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪಾರಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಗ್ರಾದಿಂದ ಹೊರಟ ಸೂಪರ್ ಫಾಸ್ಟ್​ ಇಂಟರ್​ಸಿಟಿ ಎಕ್ಸ್​ಪ್ರೆಸ್​ ಭರತನಾ ರೈಲು ನಿಲ್ದಾಣದ ಪ್ಲ್ಯಾಟ್​ಫಾರ್ಮ್​ ನಂ. 2 ಕ್ಕೆ ಬಂದು ಪುನಾ ಚಲಿಸುವಾಗ ಈ ಘಟನೆ ನಡೆದಿದೆ. ಆಗ ಸಮಯ ಬೆಳಗ್ಗೆ 9.45 ಆಗಿತ್ತು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವ್ಯಕ್ತಿ ಚಲಿಸುತ್ತಿರುವ ರೈಲನ್ನು ಹತ್ತಲು ಯತ್ನಿಸಿದ ಪರಿಣಾಮವೇ ಈ ಘಟನೆ ಸಂಭವಿಸಿದೆ ಎಂದು ವರದಿ ತಿಳಿಸಿದೆ. ಪ್ಲ್ಯಾಟ್​ಫಾರ್ಮ್​ನಲ್ಲಿ ನೆರೆದ ಜನರ ಪೈಕಿ ಕೆಲವರು ಈ ಘಟನೆಯನ್ನು ಸೆರೆಹಿಡಿದಿದೆ. ಬಿದ್ದು ಪಾರಾದ ನಂತರ ಚೆಲ್ಲಾಪಿಲ್ಲಿಯಾದ ತನ್ನ ವಸ್ತುಗಳನ್ನು ಎತ್ತಿಕೊಂಡು, ಸದ್ಯ ಬದುಕಿದೆ. ನೀವು ಬದುಕಿಸಿದಿರಿ ಎಂಬರ್ಥದಲ್ಲಿ ಅಲ್ಲಿದ್ದ ಎಲ್ಲರಿಗೂ ಕೈಮುಗಿದು ಕೃತಜ್ಞತೆ ಸಲ್ಲಿಸಿದ್ದಾನೆ.

ಅವಸರವೇ ಅಪಾಯಕ್ಕೆ ಕಾರಣ ಎನ್ನುವುದನ್ನು ಅರಿತು ಈತ ಮುಂದಿನ ರೈಲಿಗೆ ಹೋಗಿದ್ದರೆ ಇಂಥ ಅಪಾಯ ಸಂಭವಿಸುತ್ತಿರುಲಿಲ್ಲ. ಸಂಭವಿಸಿದರೂ ಬದುಕುಳಿಯುವ ಅದೃಷ್ಟ ಇವರಿಗೆ ಲಭಿಸಿದೆ. ಸದ್ಯ!

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ