Viral Video : ‘ರಾಂಚೋ’ ಎಲ್ಲಿದ್ದೀಯಾ? ಸೆಪ್ಟೆಂಬರ್ 5 ಬಂದಿದೆ!

Teachers Day : ರಾಂಚೋ ಪಾತ್ರಧಾರಿ ಅಮೀರ್​ ಖಾನ್​ ಅವರಿಗೆ ಶಿಕ್ಷಕರ ದಿನಾಚರಣೆ ನಿಮಿತ್ತ ವಿಡಿಯೋ ಸಂದೇಶ ಕಳಿಸಿದ್ಧಾರೆ ಚತುರ್​ ರಾಮಲಿಂಗಂ ಪಾತ್ರಧಾರಿ ಓಮಿ ವೈದ್ಯ. ಏನಿದೆ ವಿಡಿಯೋದಲ್ಲಿ?

Viral Video : ‘ರಾಂಚೋ’ ಎಲ್ಲಿದ್ದೀಯಾ? ಸೆಪ್ಟೆಂಬರ್ 5 ಬಂದಿದೆ!
ಚತುರ್​ ರಾಮಲಿಂಗಮ್ ಖ್ಯಾತಿಯ ನಟ ಓಮಿ ವೈದ್ಯ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 06, 2022 | 4:41 PM

Viral Video : ತ್ರೀ ಈಡಿಯಟ್ಸ್​ನಂಥ ಉತ್ತಮ ಸಿನೆಮಾ ನೋಡಿದ ಯಾರೂ ಅಲ್ಲಿರುವ ಎಲ್ಲ ಪಾತ್ರಧಾರಿಗಳನ್ನೂ ಮರೆಯಲು ಸಾಧ್ಯವೇ ಇಲ್ಲ. ಅಮೀರ್ ಖಾನ್, ಕರೀನಾ ಕಪೂರ್ ಖಾನ್, ಮಾಧವನ್ ಮತ್ತು ಬೊಮನ್ ಇರಾನಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಲನಚಿತ್ರವನ್ನು ವೀಕ್ಷಿಸದೇ ಇರುವವರು ಕಡಿಮೆಯೇ. ಈ ಪಾತ್ರವೃಂದದೊಂದಿಗೆ ಗಮನ ಸೆಳೆದ ಚತುರ ನಟನೇ ಚತುರ್ ರಾಮಲಿಂಗಂ ಪಾತ್ರಧಾರಿ ಓಮಿ ವೈದ್ಯ. ಪಂಚಿಂಗ್ ಡೈಲಾಗ್​ ಮತ್ತು ಆಕರ್ಷಕ ಅಭಿನಯದ ಮೂಲಕ ಜನಮನ ಸೆಳೆದ ಓಮಿ ಈಗ, ರಾಂಚೋ ಪಾತ್ರಧಾರಿ ಅಮೀರ್​ ಖಾನ್​ ಅವರಿಗೆ ಶಿಕ್ಷಕರ ದಿನಾಚರಣೆ ನಿಮಿತ್ತ ವಿಡಿಯೋ ಸಂದೇಶ ಕಳಿಸಿದ್ಧಾರೆ. ಈ ವಿಡಿಯೋ ಅನ್ನು ಅವರ ಇನ್​ಸ್ಟಾಗ್ರಾಂ ಖಾತೆಯಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ರಾಂಚೋ ಪಾತ್ರವನ್ನು ಹತ್ತು ವರ್ಷಗಳ ನಂತರ ಭೇಟಿಯಾಗುವೆನೆಂದು ಚತುರ್ ಸವಾಲು ಹಾಕಿದ್ದರು. ಹೀಗೆ ಸವಾಲು ಹಾಕಿದ ದಿನವೂ ಸೆಪ್ಟೆಂಬರ್ 5 ಆಗಿತ್ತು. ಈ ಕ್ಲಿಪ್ ಸಿನೆಮಾದಲ್ಲಿದೆ.

ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದರೂ ಚತುರ್ ಪಾತ್ರವೇ ಓಮಿ ಅವರಿಗೆ ಬ್ರೇಕ್​ ತಂದುಕೊಟ್ಟಿದ್ದು. 52, 500 ಕ್ಕೂ ಹೆಚ್ಚು ಫಾಲೋವರ್ಸ್​ ಹೊಂದಿರುವ ನಟ ಓಮಿ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ಕ್ಲಿಪ್ ಹಂಚಿಕೊಂಡಿದ್ದಾರೆ. ಈತನಕ 1,29,000 ಲೈಕ್ಸ್​ಗಳನ್ನು ಈ ವಿಡಿಯೋ ಪಡೆದಿದೆ.

ಈ ಮನುಷ್ಯ ಬಂಗಾರದಂತೆ ಎಂದು ಇನ್​ಸ್ಟಾಗ್ರಾಂ ಖಾತೆದಾರರೊಬ್ಬರು ಮರುಹಂಚಿಕೆ ಮಾಡುವಾಗ ಶೀರ್ಷಿಕೆ ಬರೆದಿದ್ದಾರೆ. ಸೆಪ್ಟೆಂಬರ್ 5ನೇ ತಾರೀಖನ್ನು ನೆನಪಿಡಿ ಎಂದು ಹೇಳುತ್ತ ಮತ್ತೊಬ್ಬರು ಮರುಹಂಚಿಕೆ ಮಾಡಿಕೊಂಡಿದ್ದಾರೆ. ನೀವೊಬ್ಬ ದಂತಕಥೆ ಎಂದು ಮಗದೊಬ್ಬರು ಮರುಹಂಚಿಕೆ ಮಾಡಿಕೊಳ್ಳುತ್ತ ಹೊಗಳಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:32 pm, Tue, 6 September 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ