ಬೇಕೇಬೇಕು ಬಾರೇಹಣ್ಣು ಬೇಕು; ಕಾವೇರಿದ ಆನ್ಲೈನ್ ಚಳವಳಿ
Ber Fruit : ಜುಜುಬೆ ಇದು, ಕ್ರ್ಯಾನ್ಬೆರ್ರಿ ತಾನೆ? ಇದು ನಮ್ಮಲ್ಲಿ ಫಲ್ಸಾ, ಇದಕ್ಕೆ ಧಮ್ನಾ ಅಂತೀವಿ... ಪುಟ್ಟಪುಟ್ಟ ಹುಳಿಸಿಹಿ ಬಾರೇಹಣ್ಣಿಗೆ ಜಗತ್ತಿನ ಮಂದಿಯೆಲ್ಲಾ ಮುಗಿಬಿದ್ದು ಬಾಯಲ್ಲಿ ನೀರೂರಿಸಿಕೊಳ್ಳುತ್ತಿದ್ದಾರೆ. ನೋಡಿ ವಿಡಿಯೋ.
Viral Video : ಸಿಹಿಹುಳಿಯಾದ ಈ ಬಾರೇಹಣ್ಣು, ಬೋರೆಹಣ್ಣಿನ (Ber Fruit) ಋತುಮಾನವೀಗ. ಎರಡು ವಾರಗಳ ಹಿಂದೆಯಷ್ಟೇ ಸಂಕ್ರಾಂತಿ ಸಮಯದಲ್ಲಿ ಮಾರುಕಟ್ಟೆ ತುಂಬಾ ಇವುಗಳದೇ ಸುರಿಮಳೆ. ಕಂದುಬಣ್ಣದ ಪುಟ್ಟಪುಟ್ಟ ಈ ಹಣ್ಣುಗಳು ಮುಟ್ಟಿದರೆ ಪುಳುಪುಳು ಎನ್ನುವಷ್ಟು ಮೃದು. ಈ ವಿಡಿಯೋ ನೋಡುತ್ತಿದ್ದಂತೆ ಬಾಲ್ಯದಲ್ಲಿ ಜೇಬಿನಲ್ಲಿಟ್ಟುಕೊಂಡು ಟೀಚರ್ ಕಣ್ತಪ್ಪಿಸಿ ಮೆಲ್ಲಗೆ ತಿನ್ನುತ್ತಿದ್ದ ಆ ದಿನಗಳು ನಿಮ್ಮ ಕಣ್ಣಮುಂದೆ ಖಂಡಿತ ಬರುತ್ತವೆ. ಅಷ್ಟೇ ಯಾಕೆ ಬಾಯಲ್ಲಿ ಚಿಲ್ ಎಂದು ನೀರು ಚಿಮ್ಮದೇ ಇರದು.
ಇದನ್ನೂ ಓದಿView this post on Instagram
ಈಗಾಗಲೇ ಈ ವಿಡಿಯೋ ಅನ್ನು ನಾಲ್ಕು ಮಿಲಿಯನ್ ಜನರು ನೋಡಿದ್ದಾರೆ. 2.5 ಲಕ್ಷಕ್ಕಿಂತಲೂ ಹೆಚ್ಚು ಜನರು ವಿಡಿಯೋ ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಬಾಯಲ್ಲಿ ನೀರೂರುತ್ತಿದೆ, ನನ್ನ ಬಾಲ್ಯದ ಜಗತ್ತಿಗೆ ಕರೆದೊಯ್ದಿದ್ದಕ್ಕೆ ಧನ್ಯವಾದ. ಈ ಹಣ್ಣು ಎಲ್ಲಿ ಸಿಗುತ್ತವೆ ಎಂದಿದ್ದಾರೆ ಹಲವಾರು ಜನರು.
ಇದನ್ನೂ ಓದಿ : ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್
ಈ ಹಣ್ಣನ್ನು ನಮ್ಮ ಕಾಶ್ಮೀರದಲ್ಲಿ ಫಲ್ಸಾ ಎನ್ನುತ್ತಾರೆ ಎಂದಿದ್ದಾರೆ ಒಬ್ಬರು. ಅದಕ್ಕೆ ಅವರು ಅಲ್ಲ ಫಲ್ಸಾ ಜಾಂಬಳಿ ಬಣ್ಣದ್ದಿರುತ್ತವೆ ಎಂದಿದ್ದಾರೆ. ಮರಾಠಿಯಲ್ಲಿ ಧಮ್ನಾ ಎನ್ನುತ್ತಾರೆ ಇವಕ್ಕೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಇದು ಧಮ್ನಾ ಅಲ್ಲ, ಬೋರ್ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ : ‘ಚಂದ್ರನ ಬಳಿ ಸಿಲುಕಿಕೊಂಡಿದ್ದೇನೆ’; ಇದು ನಮ್ಮ ಅಧಿಕಾರ ವ್ಯಾಪ್ತಿಯಲ್ಲಿಲ್ಲ ಎಂದ ಮುಂಬೈ ಪೊಲೀಸರು
ಇದು ಕ್ರ್ಯಾನ್ಬೆರ್ರಿ? ಎಂದು ಮತ್ತೊಬ್ಬರು ಕೇಳಿದ್ದಾರೆ. ಇಲ್ಲ ಇದು ಜುಜುಬೆ ಎಂದು ಹೇಳಿದ್ದಾರೆ ಇನ್ನೊಬ್ಬರು. ಹೌದು ಇದು ಇಂಡಿಯನ್ ಜುಜುಬೆ ಹಣ್ಣು ಎಂದು ಮತ್ತೂ ಒಬ್ಬರು ಹೇಳಿದ್ದಾರೆ. ಪಹೇಲಿ ಸಿನೆಮಾದಲ್ಲಿ ಈ ಹಣ್ಣು ನೋಡಿದಾಗಿನಿಂದ ನನಗೆ ತಿನ್ನಬೇಕು ಎನ್ನಿಸುತ್ತಿದೆ. ಆದರೆ ಉತ್ತರ ಪ್ರದೇಶದಲ್ಲಿ ಸಿಗುತ್ತಿಲ್ಲ ಎಂದು ಬೇಸರಿಸಿಕೊಂಡಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : ವೃದ್ಧರೊಬ್ಬರು ಕೋತಿಗೆ ರೊಟ್ಟಿ ಕೊಡಲು ಪ್ರಯತ್ನಿಸುತ್ತಿರುವ ಆಪ್ತವಾದ ವಿಡಿಯೋ ವೈರಲ್
ಎಲ್ಲಿ ಸಿಗುತ್ತದೆ ಅಡ್ರೆಸ್ ಹೇಳಿ ಎಂದು ಮತ್ತೊಬ್ಬರು. ಇದು ನನ್ನ ಬಾಲ್ಯದ ಸಿಹಿಯಾದ ನೆನಪು ಎಂದು ಮಗದೊಬ್ಬರು. ನಮ್ಮ ತೋಟದಲ್ಲಿ ನೂರು ಗಿಡಗಳಿವೆ ಎಂದು ಒಬ್ಬರು. ದಯವಿಟ್ಟು ಕಳಿಸಿಕೊಡಿ ಎಂದು ಅನೇಕರು ಅವರಿಗೆ ಮುಗಿಬಿದ್ದಿದ್ದಾರೆ. ಒಟ್ಟಿನಲ್ಲಿ ಭಾರತದಲ್ಲಿ ಬೇರೆ ಬೇರೆ ಭಾಷೆಯಲ್ಲಿ ಈ ಹಣ್ಣಿಗೆ ಏನೆನ್ನುತ್ತಾರೆ ಎನ್ನುವುದರ ಚರ್ಚೆ ಸಾಕಷ್ಟು ಜೋರಾಗಿ ನಡೆದಿದೆ. ಆಹಾ ಎಷ್ಟೊಂದು ವೈವಿಧ್ಯತೆ!
ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:36 pm, Tue, 31 January 23