AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oatmeal for Diabetics: ಓಟ್ಸ್ ಸೇವನೆ ಮಧುಮೇಹಿಗಳಿಗೆ ಎಷ್ಟು ಉತ್ತಮ? ತಜ್ಞರು ಹೇಳುವುದೇನು?

ಓಟ್ಸ್ ಅಥವಾ ಓಟ್ ಮೀಲ್ ಆರೋಗ್ಯಕ್ಕೆ ಅತ್ಯುತ್ತಮವಾದ ಧಾನ್ಯವಾಗಿದೆ. ಆದರೆ ಮಧುಮೇಹ ಇರುವವರಿಗೆ ಇದು ಉಪಯುಕ್ತವಾಗಿದೆಯೇ? ಇದರ ಕುರಿತ ಮಾಹಿತಿ ಇಲ್ಲಿದೆ.

Oatmeal for Diabetics: ಓಟ್ಸ್ ಸೇವನೆ ಮಧುಮೇಹಿಗಳಿಗೆ ಎಷ್ಟು ಉತ್ತಮ? ತಜ್ಞರು ಹೇಳುವುದೇನು?
ಸಾಂದರ್ಭಿಕ ಚಿತ್ರImage Credit source: Healthline
ಅಕ್ಷತಾ ವರ್ಕಾಡಿ
|

Updated on:Feb 15, 2023 | 10:51 AM

Share

ಪ್ರಪಂಚದಾದ್ಯಂತ ಹೆಚ್ಚಿನ ಜನರು ಮಧುಮೇಹ(Diabetics) ದಿಂದ ಬಳಲುತ್ತಿದ್ದಾರೆ. ಇದು ಗ್ಲೂಕೋಸ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತದೆ ಮತ್ತು ಸಾಕಷ್ಟು ಇನ್ಸುಲಿನ್‌ನ್ನು ಉತ್ಪಾದಿಸುತ್ತದೆ. ಹೀಗಾಗಿ ಈ ಸ್ಥಿತಿಯನ್ನು ಹೊಂದಿರುವ ಜನರು ಸಾಮಾನ್ಯವಾಗಿ ರಕ್ತದಲ್ಲಿ ಹೆಚ್ಚಿನ ಸಕ್ಕರೆ ಮಟ್ಟವನ್ನು ಹೊಂದಿರುತ್ತಾರೆ. ಅದು ಆರೋಗ್ಯಕ್ಕೆ ಹಾನಿಕಾರವಾಗುವುದರ ಜೊತೆಗೆ ಕೆಲವೊಮ್ಮೆ ಅವುಗಳು ದೇಹದ ಅಂಗಗಳ ಮೇಲು ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಸರಿಯಾದ ರೀತಿಯ ಜೀವನಶೈಲಿ ಮತ್ತು ಆರೋಗ್ಯಕರ ಆಹಾರ ಪದ್ಧತಿಯೊಂದಿಗೆ ಮಧುಮೆಹವನ್ನು ನಿಯಂತ್ರಿಸಬಹುದು. ಮಧುಮೇಹವನ್ನು ಹೊಂದಿರುವವರಿಗೆ ಹಲವಾರು ಪತ್ಯಾಹಾರಗಳಿವೆ. ಅದರಂತೆ ಓಟ್‌ಮೀಲ್ ಮಧುಮೇಹಿಗಳಿಗೆ ಉತ್ತಮವಾದ ಆಹಾರವೇ ಎಂಬುದರ ಬಗ್ಗೆ ಹೇಳುತ್ತೇವೆ.

ಮಧುಮೇಹಿಗಳಿಗೆ ಓಟ್‌ಮೀಲ್ ಆರೋಗ್ಯಕರವೇ?

ಓಟ್‌ಮೀಲ್‌ನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು ಎಂದು ಪೌಷ್ಟಿಕ ತಜ್ಞರು ಕಂಡುಕೊಂಡಿದ್ದಾರೆ. ಮಧುಮೇಹವನ್ನು ನಿಯಂತ್ರಿಸಲು ಓಟ್ಸ್ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಓಟ್ಸ್ ಕರಗುವ ಪೈಬರ್ ಅಂಶಗಳಿಂದ ಸಮೃದ್ಧವಾಗಿದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಕರಗುವ ಫೈಬರ್‌ಗಳು ಗ್ಲೋಕೋಸ್ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಪೌಷ್ಟಿಕ ತಜ್ಞೆ ಗಾರ್ಗಿ ಶರ್ಮ ಹೇಳುತ್ತಾರೆ.

ಓಟ್ಸ್ ಮಧುಮೇಹಿಗಳಿಗೆ ಏಕೆ ಒಳ್ಳೆಯದು ಎಂಬುದಕ್ಕೆ ಕಾರಣಗಳು ಇಲ್ಲಿವೆ:

ಫೈಬರ್ ಅಂಶ:

ಓಟ್ ಮೀಲ್ ನಮ್ಮ ಕರುಳಿನಿಂದ ನೇರವಾಗಿ ಹೀರಲ್ಪಡುವ ಬೀಟಾ-ಗ್ಲುಕನ್ ಎಂದು ಕರೆಯಲ್ಪಡುವ ಸಾಕಷ್ಟು ಕರಗುವ ಫೈಬರ್ ಅಂಶಗಳನ್ನು ಹೊಂದಿರುತ್ತದೆ. ಇದು ರಕ್ತ ಚಲನೆಗೆ ಗ್ಲೂಕೋಸ್‌ನ ನಿಧಾನಗತಿಯ ಬಿಡುಗಡೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಉತ್ತಮ ಕರುಳಿನ ಆರೋಗ್ಯ:

ಓಟ್ಸ್​​​​ನಲ್ಲಿರುವ ಫೈಬರ್ ಅಂಶದಿಂದ ಉತ್ತಮವಾದ ಬ್ಯಾಕ್ಟೀರಿಯಾದ ಬೆಳವಣಿಗೆಯು ಆರೋಗ್ಯಕರ ಕರುಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಹೀಗಾಗಿ ಮಧುಮೇಹಿಗಳು ಪೋಷಕಾಂಶಗಳ ನಿಧಾನ ಮತ್ತು ಹೀರಿಕೊಳ್ಳುವಿಕೆಯನ್ನು ಅನುಭವಿಸಬಹುದು.

ಪೋಷಣೆ:

ಓಟ್ಸ್ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್ ಮತ್ತು ಫೈಬರ್‌ನಿಂದ ಸಮೃದ್ಧವಾಗಿದೆ. ಅದು ನಮ್ಮನ್ನು ಹೆಚ್ಚು ಕಾಲ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಹೀಗಾಗಿ ನಾವು ಕಡಿಮೆ ತಿನ್ನುತ್ತೇವೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದನ್ನು ತಡೆಯುತ್ತೇವೆ.

ಆರೋಗ್ಯಕರ ಹೃದಯ:

ಓಟ್ಸ್ ಮಧುಮೇಹಿಗಳ ಹೃದಯದ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ ಮತ್ತು ದೇಹದಲ್ಲಿ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಹಾಲಿನೊಂದಿಗೆ ಎಲ್ಲಾ ರೀತಿಯ ಮಾತ್ರೆಗಳನ್ನು ತೆಗೆದುಕೊಳ್ಳಬಹುದೇ, ವಿಜ್ಞಾನ ಹೇಳುವುದೇನು?

ಮಧುಮೇಹಿಗಳು  ಆಹಾರ ಕ್ರಮದಲ್ಲಿ ಓಟ್ಸ್ ಸೇವಿಸುವಾಗ ತಿಳಿದುಕೊಳ್ಳಬೇಕಾದ ಸಂಗತಿಗಳು:

ಏನು ಮಾಡಬೇಕು:

  • ಸಂಸ್ಕರಿಸಿದ ಓಟ್ಸ್ ಬದಲಿಗೆ ಸ್ಟೀಲ್ ಕಟ್ ಓಟ್ಸ್ ಅಥವಾ ರೋಲ್ಡ್ ಓಟ್ಸ್ ಬಳಸಿ. ಏಕೆಂದರೆ ಸಂಸ್ಕರಿಸಿದ ಓಟ್ಸ್ ಹೆಚ್ಚು ಸಕ್ಕರೆಯನ್ನು ಹೊಂದಿರುತ್ತದೆ ಮತ್ತು ಇದು ಮಧುಮೇಹಿಗಳಿಗೆ ಹಾನಿಕಾರಕವಾಗಿದೆ.
  • ಕ್ಯಾಲೋರಿ ಅಂಶವನ್ನು ಕಡಿಮೆ ಮಾಡಲು ನೀವು ಕಡಿಮೆ ಕೊಬ್ಬಿನ ಹಾಲು ಅಥವಾ ಸಸ್ಯ ಆಧಾರಿತ ಹಾಲನ್ನು ಓಟ್ಸ್ ಬಳಸಬೇಕು.
  • ಬಾದಾಮಿ, ಕುಂಬಳಕಾಯಿ ಬೀಜಗಳು, ಅಗಸೆಬೀಜಗಳು, ಚಿಯಾ ಸೀಡ್ಸ್ ಸೇರಿದಂತೆ ಡ್ರೈ ಫ್ರೂಟ್ಸ್​ ಹಾಗೂ ಬೆರಿಹಣ್ಣು ಹಾಗೂ ಸೇಬುಗಳನ್ನು ಕೂಡಾ ಸೇರಿಸಬಹುದು.
  • ಚೆನ್ನಾಗಿ ಜಗಿದು ತಿನ್ನಬೇಕು ಮತ್ತು ನಿಧಾನವಾಗಿ ತಿನ್ನಬೇಕು.

ಏನನ್ನು ಸೇವಿಸಬಾರದು:

  • ಈಗಾಗಲೇ ಹೇಳಿದಂತೆ ಸಂಸ್ಕರಿಸಿದ ಓಟ್ಸ್ ಸೇವಿಸಬಾರದು.
  • ಓಟ್ ಮೀಲ್‌ಗೆ ಹೆಚ್ಚು ಸಿಹಿಕಾರಕ ಅಥವಾ ಸಕ್ಕರೆಯನ್ನು ಸೇರಿಸಬಾರದು. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು.
  • ಓಟ್ಸ್ ಜೊತೆಗೆ ಹೆವಿ ಕ್ರೀಮ್, ಬೆಣ್ಣೆ ಹಾಗೂ ತುಪ್ಪದಂತಹ ಇತರ ಕೊಬ್ಬಿನ ಅಂಶಗಳನ್ನು ಸೇವಿಸಬಾರದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:50 am, Wed, 15 February 23

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್