Updated on:Feb 08, 2023 | 2:44 PM
ಕಾರ್ಡಿ ಬಿ: ಅಮೇರಿಕಾದ ಜನಪ್ರಿಯ ಗಾಯಕಿ ಕಾರ್ಡಿ ಬಿ ಭಾರತೀಯ ಕಾಸ್ಟೂಮ್ ಡಿಸೈನರ್ ಗೌರವ್ ಗುಪ್ತಾ ವಿನ್ಯಾಸಗೊಳಿಸಿದ ಗೌನ್ ತೊಟ್ಟು ರೆಡ್ ಕಾರ್ಪೆಟ್ ಕಾಣಿಸಿಕೊಂಡಿದ್ದಾರೆ.
ಜೆನ್ನಿಫರ್ ಲೋಪೆಜ: ಹಾಲಿವುಡ್‌ನ ಜನಪ್ರಿಯ ನಟಿ, ಗಾಯಕಿ ಜೆನ್ನಿಫರ್ ಲೋಪೆಜ ಗಾಢ ನೀಲಿ ಬಣ್ಣದ ಗೌನ್‌ನಲ್ಲಿ ಗ್ರ್ಯಾಮಿ ಅವಾರ್ಡ್ ನ ರೆಡ್ ಕಾರ್ಪೆಟ್ನಲ್ಲಿ ಕಾಣಿಸಿಕೊಂಡಿದ್ದು ಹೀಗೆ.
ಬೆಯೋನ್ಸ್ : ಜನಪ್ರಿಯ ಗಾಯಕಿ ಬೆಯೋನ್ಸ್ ಕಪ್ಪು ಬಣ್ಣದ ಕೈ ಗವಚ ಹಾಗೂ ಸಿಲ್ವರ್ ಬಟ್ಟೆಯಲ್ಲಿ ಮಿಂಚಿದ್ದಾರೆ. ಇದಲ್ಲದೇ ಅತೀ ಹೆಚ್ಚು ಅಂದರೆ 32 ಗ್ರ್ಯಾಮಿ ಪ್ರಶಸ್ತಿ ಗೆಲ್ಲುವ ಮೂಲಕ ಬೆಯೋನ್ಸ್ ಇತಿಹಾಸ ನಿರ್ಮಿಸಿದ್ದಾರೆ.
ಮೇಗನ್ ಫಾಕ್ಸ್: ನೀಳವಾದ ಬಿಳಿ ಬಣ್ಣದ ಮಣಿಗಳಿಂದ ಕೂಡಿದ ಗೌನ್ ಧರಿಸಿ, 2023ರ ಗ್ರ್ಯಾಮಿ ಅವಾರ್ಡ್ ನ ರೆಡ್ ಕಾರ್ಪೆಟ್ನಲ್ಲಿ ಹಾಟ್ ಲುಕ್ ನೀಡಿದ್ದಾರೆ.
ಕ್ಯಾಮಿಲಾ ಕ್ಯಾಬೆಲ್ಲೊ : ಅಮೇರಿಕಾದ ಜನಪ್ರಿಯ ಸಾಹಿತಿ ಹಾಗೂ ಗಾಯಕಿಯಾಗಿರುವ ಕ್ಯಾಮಿಲಾ ಕ್ಯಾಬೆಲ್ಲೊ ಕಪ್ಪು ಬಣ್ಣದ ಸ್ಕರ್ಟ್ ಹಾಗೂ ಮತ್ತುಗಳಿಂದ ಪೋಣಿಸಿದ ಉಡುಪನ್ನು ಧರಿಸಿ ಹಾಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಡೋಜಾ ಕ್ಯಾಟ್ : ಅಮೇರಿಕಾದ ಪ್ರಸಿದ್ಧ ಗಾಯಕಿ ಡೋಜಾ ಕ್ಯಾಟ್ ಇತ್ತೀಚೆಗಷ್ಟೇ ಕೆಂಪು ಹರಳುಗಳ ಬಟ್ಟೆಯಿಂದ ಸಾಕಷ್ಟು ಸುದ್ದಿಯಲ್ಲಿದ್ದರು. ಇದೀಗಾ 2023ರ ಗ್ರ್ಯಾಮಿ ಅವಾರ್ಡ್ ನ ರೆಡ್ ಕಾರ್ಪೆಟ್ನಲ್ಲಿ ಕಪ್ಪು ಬಣ್ಣದ ಬಟ್ಟೆಯಲ್ಲಿ ಹಾಟ್ ಲುಕ್ ನೀಡಿದ್ದಾರೆ.
ಸ್ಯಾಮ್ ಸ್ಮಿತ್: ಜನಪ್ರಿಯ ಪಾಪ್ ಗಾಯಕ ಸ್ಯಾಮ್ ಸ್ಮಿತ್ ಕೆಂಪು ಬಣ್ಣದ ವ್ಯಾಲೆಂಟಿನೋ ಗೌನ್‌ನಲ್ಲಿ 2023ರ ಗ್ರ್ಯಾಮಿ ಅವಾರ್ಡ್ ನ ರೆಡ್ ಕಾರ್ಪೆಟ್ನಲ್ಲಿ ಹಾಟ್ ಲುಕ್ ನೀಡಿದ್ದಾರೆ.
Published On - 2:44 pm, Wed, 8 February 23