ನೋಡಲು ಪಕ್ಷಿಯಂತಿದೆ, ಆದ್ರೆ ಪಕ್ಷಿಯಲ್ಲ, ಹಾಗಾದ್ರೆ ಏನಿದು? ಇದರ ವಿಶೇಷತೆ ಏನು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ​​​​​

Yulan Magnolia Flower: ಪರಿಸರದಲ್ಲಿನ ಕೆಲವೊಂದು ಅಚ್ಚರಿಯ ಸಂಗತಿಗಳನ್ನು ನೋಡಿದಾಗ ದೇವರ ಸೃಷ್ಟಿಯೇ ಅಧ್ಬುತ ಎಂದೆನಿಸುತ್ತದೆ. ಇಲ್ಲೊಂದು ಹೂವು ನೋಡಿದಾಕ್ಷಣ ಗುಬ್ಬಿ ಮರಿಯೊಂದು ಮರದ ರೆಂಬೆಯ ಮೇಲೆ ಕುಳಿತು ಕೊಂಡಂತೆ ಕಾಣುತ್ತದೆ.

ನೋಡಲು ಪಕ್ಷಿಯಂತಿದೆ, ಆದ್ರೆ ಪಕ್ಷಿಯಲ್ಲ, ಹಾಗಾದ್ರೆ ಏನಿದು? ಇದರ ವಿಶೇಷತೆ ಏನು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ​​​​​
ಯುಲಾನ್ ಅಥವಾ ಮ್ಯಾಗ್ನೋಲಿಯಾ ಹೂವುImage Credit source: CGTN
Follow us
|

Updated on:Feb 16, 2023 | 5:32 PM

ಪರಿಸರದಲ್ಲಿನ ಕೆಲವೊಂದು ಅಚ್ಚರಿಯ ಸಂಗತಿಗಳನ್ನು ನೋಡಿದಾಗ ದೇವರ ಸೃಷ್ಟಿಯೇ ಅಧ್ಬುತ ಎಂದೆನಿಸುತ್ತದೆ. ಇಲ್ಲೊಂದು ಹೂವನ್ನು ನೋಡಿದಾಕ್ಷಣ ಗುಬ್ಬಿ ಮರಿಯೊಂದು ಮರದ ರೆಂಬೆಯ ಮೇಲೆ ಕುಳಿತು ಕೊಂಡಂತೆ ಕಾಣುತ್ತದೆ. ಆದರೆ ಈ ಗುಬ್ಬಿ ಮರಿ ಎಲ್ಲೂ ಹಾರಿ ಹೋಗಲ್ಲ, ನೀವಿದನ್ನು ಮುಟ್ಟಬಹುದಾಗಿದೆ. ಹೌದು ಚೀನಾದ ಉತ್ತರ ಭಾಗದ ಬೀಜಿಂಗ್​​ ನಗರದಲ್ಲಿ ಮಾರ್ಚ್​ ತಿಂಗಳಲ್ಲಿ ಈ ಹೂವು ಅಂದರೆ ಯುಲಾನ್ ಅಥವಾ ಮ್ಯಾಗ್ನೋಲಿಯಾ ಹೂವುಗಳನ್ನು ಕಾಣಬಹುದು. ಮ್ಯಾಗ್ನೋಲಿಯದ ವಿಶೇಷತೆ ಏನೆಂದರೆ, ಎಲೆಗಳು ಕೊಂಬೆಗಳಿಂದ ಚಾಚುವ ಮೊದಲೇ ಹೂವುಗಳು ಪೂರ್ಣವಾಗಿ ಅರಳುತ್ತವೆ. ಇದರಿಂದಾಗಿ ಹೂವುಗಳು ಎಲೆಗಳಿಂದ ಮರೆಮಾಚದೆ ಸುಂದರವಾಗಿ ಕಾಣುತ್ತದೆ.

ಬೀಜಿಂಗ್‌ನ ಬೀದಿಗಳಲ್ಲಿ ಅನೇಕ ಉದ್ಯಾನವನಗಳಲ್ಲಿ ನೀವು ಪಕ್ಷಿಯನ್ನು ಹೋಲುವ ಸುಂದರ ಹೂವುಗಳನ್ನು ಕಾಣಬಹುದು. ಈ ಹೂವಿನ ದಳಗಳು ವಿವಿಧ ಬಣ್ಣಗಳು, ಛಾಯೆಗಳು ಮತ್ತು ಆಕಾರಗಳನ್ನು ಹೊಂದಿರುತ್ತವೆ. ನೀವು ಈ ಹೂವುನ್ನು ಸಾಕಷ್ಟು ಎಚ್ಚರಿಕೆಯಿಂದ ನೋಡಿದರೆ, ಈ ಹೂವುಗಳಲ್ಲಿ ಕೆಲವು ಸುಂದರವಾದ ಚಿಕ್ಕ ಹಕ್ಕಿಗಳಂತೆ ಕಾಣುತ್ತವೆ.ಈ ಹೂವುಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

ಮಾರ್ಚ್​ ತಿಂಗಳಲ್ಲಿ ವಸಂತ ಋತುವಿನ ಆಗಮನದೊಂದಿಗೆ, ತಾಪಮಾನವೂ ಏರುತ್ತಿದೆ. ಆದರೆ ಗುಲಾಬಿ ಮತ್ತು ಸುಂದರವಾದ ಮ್ಯಾಗ್ನೋಲಿಯಾ ಹೂವನ್ನು ನೀವು ದೂರದಿಂದ ನೋಡಿದಾಗ, ಯಾವುದೋ ಸುಂದರವಾದ ಗುಲಾಬಿ ಬಣ್ಣದ ಹಕ್ಕಿ ಮರದ ಮೇಲೆ ಕುಳಿತಿರುವ ಭಾವನೆಯನ್ನು ಸಹ ನೀವು ಪಡೆಯುತ್ತೀರಿ.ಇತ್ತೀಚಿನ ದಿನಗಳಲ್ಲಿ ಮ್ಯಾಗ್ನೋಲಿಯಾ ಹೂವುಗಳ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಚಿತ್ರವನ್ನು ನೋಡುವಾಗ, ಉದ್ಯಾನವನದ ಮರಗಳ ಕೊಂಬೆಗಳ ಮೇಲೆ ಹಕ್ಕಿಗಳ ಹಿಂಡು ಕುಳಿತಿದೆ ಎಂದು ತೋರುತ್ತದೆ. ಗುಲಾಬಿ ಹೂವುಗಳ ಈ ಚಿತ್ರವು ತುಂಬಾ ಮುದ್ದಾಗಿದೆ.

Yulan flower

ಇದನ್ನೂ ಓದಿ: ಇನ್ಸ್ಟಾಗ್ರಾಮ್, ಫೇಸ್​​ಬುಕ್​​ಗಳಲ್ಲಿ ಕಡಿಮೆ ಬೆಲೆಗೆ ಬಟ್ಟೆಗಳು ಸಿಗುತ್ತದೆ ಎಂದು ಆರ್ಡರ್​​ ಮಾಡಿ ಮೋಸಹೋಗದಿರಿ

ಮ್ಯಾಗ್ನೋಲಿಯಾ ಮರವು ಚೀನಾದ ಉತ್ತರ ಭಾಗದಲ್ಲಿ ಮಾತ್ರವಲ್ಲದೇ, ಅಮೆರಿಕದ ದಕ್ಷಿಣ ಭಾಗದಲ್ಲೂ ಕಂಡುಬರುತ್ತದೆ. ಇದು ಒಂದು ಪರಿಮಳಯುಕ್ತ ಹೂವಾಗಿದ್ದು, ಅದರ ಸಸ್ಯದ ಎತ್ತರವು 1 ರಿಂದ 20 ಮೀಟರ್ ವರೆಗೆ ಇರುತ್ತದೆ. ಸಾಮಾನ್ಯವಾಗಿ, ಯುಲನ್ ಮ್ಯಾಗ್ನೋಲಿಯಾದ ಹೂವಿನ ಮೊಗ್ಗು ಮೊಟ್ಟೆಯಾಕಾರದಲ್ಲಿ ಇರುತ್ತದೆ. 10-16 ಸೆಂ.ಮೀ ಹಾಗೂ ಸುಮಾರು 9 ದಳಗಳು ಇದರಲ್ಲಿದೆ. ಆದ್ದರಿಂದ ಯುಲನ್ ಮ್ಯಾಗ್ನೋಲಿಯಾದಲ್ಲಿ ಹಕ್ಕಿಯ ಕೊಕ್ಕಿನ ರೀತಿಯಲ್ಲಿ ಮೊಗ್ಗಗಳನ್ನು ಕಾಣಬಹುದು. ಈ ಮೊಗ್ಗು ತೆರೆದಾಗ, ಅದು ಸುವಾಸನೆಯನ್ನು ಹೊರಸೂಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:32 pm, Thu, 16 February 23

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ