ಇನ್ಸ್ಟಾಗ್ರಾಮ್, ಫೇಸ್​​ಬುಕ್​​ಗಳಲ್ಲಿ ಕಡಿಮೆ ಬೆಲೆಗೆ ಬಟ್ಟೆಗಳು ಸಿಗುತ್ತದೆ ಎಂದು ಆರ್ಡರ್​​ ಮಾಡಿ ಮೋಸಹೋಗದಿರಿ

ಇತ್ತೀಚೆಗೆ ಫೇಸ್​​ ಬುಕ್​ ಮತ್ತು ಇನ್ಸ್ಟಾಗ್ರಾಮ್​​ಗಳಲ್ಲಿ ಆಫರ್​​ಗಳಲ್ಲಿ ಬಟ್ಟೆಗಳನ್ನು ಆರ್ಡರ್​​ ಮಾಡಿ, ಜೊತೆಗೆ ಪೇಮೆಂಟ್​​ ಮಾಡಿ ಮೋಸಹೋದ ಆದೆಷ್ಟು ಘಟನೆಗಳಿವೆ. ಆದ್ದರಿಂದ ನೀವು ಖರೀದಿಸುವ ಮುನ್ನ ಈ ಸಲಹೆಗಳನ್ನು ತಿಳಿದುಕೊಳ್ಳಿ.

ಇನ್ಸ್ಟಾಗ್ರಾಮ್, ಫೇಸ್​​ಬುಕ್​​ಗಳಲ್ಲಿ ಕಡಿಮೆ ಬೆಲೆಗೆ ಬಟ್ಟೆಗಳು ಸಿಗುತ್ತದೆ ಎಂದು ಆರ್ಡರ್​​ ಮಾಡಿ ಮೋಸಹೋಗದಿರಿ
ಸಾಂದರ್ಭಿಕ ಚಿತ್ರ
Follow us
ಅಕ್ಷತಾ ವರ್ಕಾಡಿ
|

Updated on:Feb 15, 2023 | 12:05 PM

ಇತ್ತೀಚೆಗೆ ಫೇಸ್​​ ಬುಕ್​ ಮತ್ತು ಇನ್ಸ್ಟಾಗ್ರಾಮ್​​ಗಳಲ್ಲಿ ಆಫರ್​​ಗಳಲ್ಲಿ ಬಟ್ಟೆಗಳನ್ನು ಆರ್ಡರ್​​ ಮಾಡಿ, ಜೊತೆಗೆ ಪೇಮೆಂಟ್​​ ಮಾಡಿ ಮೋಸಹೋದ ಆದೆಷ್ಟು ಘಟನೆಗಳಿವೆ. ಆದ್ದರಿಂದ ನೀವು ಖರೀದಿಸುವ ಮುನ್ನ ಈ ಸಲಹೆಗಳನ್ನು ತಿಳಿದುಕೊಳ್ಳಿ. ಇನ್ಸ್ಟಾಗ್ರಾಮ್, ಫೇಸ್​​ ಬುಕ್​​ಗಳು ಈಗ ಕೇವಲ ಮನೋರಂಜನೆಗಾಗಿ ಮಾತ್ರ ಉಳಿಯದೇ ಸಾಕಷ್ಟು ಶೈಕ್ಷಣಿಕ ವಿಷಯದಿಂದ ಹಿಡಿದು ಪಾಕವಿಧಾನಗಳು, ಉದ್ಯಮವಾಗಿ ಬೆಳೆದು ನಿಂತಿದೆ. ಇಲ್ಲಿ ನೀವು ಬಟ್ಟೆಗಳು ಮಾತ್ರವಲ್ಲ ಈ ಆಭರಣಗಳು, ಮೇಕ್ಅಪ್ ಮನೆಗೆ ಬೇಕಾಗುವ ಸಾಕಷ್ಟು ಉಪಕರಣಗಳನ್ನು ಎಲ್ಲವನ್ನು ಖರೀದಿಸಬಹುದಾಗಿದೆ. ಎಲ್ಲಿ ವ್ಯಾಪಾರವಿರುತ್ತದೆಯೋ ಅಲ್ಲಿ ವಂಚನೆಗಳೂ ಇರುತ್ತವೆ. ಆದ್ದರಿಂದ ಇನ್ನೂ ಮುಂದೆ ನೀವು ಯಾವುದೇ ಬಟ್ಟೆಬರೆಗಳನ್ನು ಆರ್ಡರ್​ ಮಾಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ.

ಇನ್ಸ್ಟಾಗ್ರಾಮ್​​ನಿಂದ ನೀವು ಖರೀದಿಸುವ ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ವಿಷಯಗಳು:

1. ಲಿಂಕ್​​ ಬಳಸಿ ಆರ್ಡರ್​​ ಮಾಡಬೇಡಿ:

ನೀವು ಖರೀದಿಸುವ ಮೊದಲು ಆ ಪೇಜ್​​ನಲ್ಲಿ ಅಧಿಕೃತವಾಗಿ ಅಪ್ಲೀಕೇಶನ್​​ ಇದೆಯಾ ಎಂದು ಪರಿಶೀಲಿಸಿ. ಕೇವಲ ಲಿಂಕ್​​ ಬಳಸಿ ನೀವು ಆರ್ಡರ್​​ ಮಾಡುವುದರಿಂದ ನಿಮಗೆ ಅವರ ಬಗೆಗೆಗಿನ ಯಾವುದೇ ಮಾಹಿತಿ ಅಥವಾ ಸಂಪರ್ಕಿಸಲು ನಂಬರ್​​ಗಳು ಸಿಗುವುದಿಲ್ಲ. ಇದರಿಂದಾಗಿ ನೀವು ಯಾಮಾರುವ ಸಾಧ್ಯತೆ ಹೆಚ್ಚಿದೆ.

2. ಕಾಮೆಂಟ್​​ಗಳನ್ನು ಓದಿ:

200, 300ರೂಪಾಯಿಗಳಿಗೆ ಆಕರ್ಷಕವಾದ ಬಟ್ಟೆಗಳು ಸಿಗುತ್ತವೆ ಎಂದ ತಕ್ಷಣ ಮೋಸ ಹೋಗದಿರಿ, ಬದಲಾಗಿ ಕಾಮೆಂಟ್​​ಗಳನ್ನು ಓದಿ. ಸಾಮಾನ್ಯವಾಗಿ ನಕಲಿ ಖಾತೆಗಳನ್ನು ಹೊಂದಿರುವ ಜನರು ಕಾಮೆಂಟ್‌ಗಳ ವಿಭಾಗದಲ್ಲಿ ಉತ್ತರಿಸುವುದಿಲ್ಲ ಜೊತೆಗೆ ಮಾರಾಟದಲ್ಲಿರುವ ಉತ್ಪನ್ನದ ಬಗ್ಗೆ ವಿವರಗಳನ್ನು ಕೇಳುವ ಪ್ರಶ್ನೆಗಳನ್ನು ತಪ್ಪಿಸುತ್ತಾರೆ.

3. ಕ್ಯಾಶ್​​ ಆನ್​​ ಡೆಲಿವರಿ ಆಯ್ಕೆ ಮಾಡಿ:

ಇದು ಉತ್ತಮ ಮಾರ್ಗವಾಗಿದೆ. ನಕಲಿ ಖಾತೆಗಳಾಗಿದ್ದರೆ ಕ್ಯಾಶ್​​ ಆನ್​​ ಡೆಲಿವರಿ ಆಯ್ಕೆಗಳಿರುವುದಿಲ್ಲ. ಇದಲ್ಲದೇ ಕ್ಯಾಶ್​​ ಆನ್​​ ಡೆಲಿವರಿ ನೀವು ಆಯ್ಕೆ ಮಾಡಿದರೆ ನೀವು ಆರ್ಡರ್​​ ಮಾಡಿರುವ ಬಟ್ಟೆಗಳು ಬರದಿದ್ದರೂ ಕೂಡ, ನೀವು ಮೋಸ ಹೋಗುವುದಿಲ್ಲ.

ಇದನ್ನೂ ಓದಿ: ಪಾತ್ರೆಗಳಲ್ಲಿನ ಅರಿಶಿನದ ಕಲೆಗಳನ್ನು ತೆಗೆದುಹಾಕಲು 5 ಸುಲಭ ಮಾರ್ಗಗಳು ಇಲ್ಲಿವೆ

4. ಮಾರಾಟಗಾರರ ಆಸಕ್ತಿಯನ್ನು ಪರಿಶೀಲಿಸಿ :

ನಿಜವಾದ ಮಾರಾಟಗಾರನು ಉತ್ಪನ್ನದ ಬಗ್ಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನಿಮಗೆ ಒದಗಿಸುತ್ತಾನೆ. ಆದರೆ, ನಕಲಿ ಖಾತೆದಾರರು ನಿಮ್ಮ ಇನ್‌ಬಾಕ್ಸ್‌ಗೆ ಸ್ಪ್ಯಾಮ್ ಮಾಡಬಹುದು. ನೀವು ಐಟಂ ಅನ್ನು ಖರೀದಿಸಲು ಬಯಸುತ್ತೀರಾ ಎಂದು ಅವರು ನಿಮ್ಮನ್ನು ಮಿಲಿಯನ್ ಬಾರಿ ಕೇಳಬಹುದು. ಅಲ್ಲದೆ, ಅವರು ನಿಮಗೆ ಸಾಧ್ಯವಾದಷ್ಟು ಬೇಗ ಪಾವತಿಸಲು ಮನವೊಲಿಸಲು ಪ್ರಯತ್ನಿಸುತ್ತಾರೆ.

5. ಚಿಕ್ಕ ಪ್ರಾರಂಭಿಕ ಮಾರಾಟಗಾರರ ಖಾತೆಯನ್ನು ಆಯ್ಕೆ ಮಾಡಿ:

ಇನ್ಸ್ಟಾಗ್ರಾಮ್​​ನಲ್ಲಿ ಮನೆಯಿಂದಲೇ ಚಿಕ್ಕದಾಗಿ ವ್ಯಾಪಾರ ಪ್ರಾರಂಭಿಸಿದವರಿದ್ದರೆ, ಅವರಿಂದ ಖರೀದಿಸಿ. ಇಲ್ಲಿ ನಿಮಗೆ ಉತ್ತಮ ಗುಣಮಟ್ಟದ ಬಟ್ಟೆಗಳು ಸಿಗುವುದರ ಜೊತೆಗೆ ನಿಮಗೆ ಯಾವುದೇ ಮೋಸ ಆಗಲು ಸಾಧ್ಯವಿಲ್ಲ. ಯಾಕೆಂದರೆ ಅವರ ಪೂರ್ಣ ವಿಳಾಸ, ಹಾಗೂ ಸಂಪರ್ಕ ಸಂಖ್ಯೆಯನ್ನು ಹಾಕಿರುತ್ತಾರೆ. ಜೊತೆಗೆ ಕ್ಯಾಶ್​ ಆನ್​​ ಡೆಲಿವರಿ ಆಯ್ಕೆಗಳೂ ಕೂಡ ಇರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:03 pm, Wed, 15 February 23