ಹಸಿರು ಪಚ್ಚಿಲೆಯಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂದು ತಿಳಿದಿದೆಯೇ?
ಹಸಿರು ಪಚ್ಚಿಲೆ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅವುಗಳು ಉರಿಯೂತ ವಿರೋಧಿ ಗುಣಲಕ್ಷಣಗಳು, ಜಂಟಿ ಆರೋಗ್ಯವನ್ನು ಬೆಂಬಲಿಸುವ ಸಾಮರ್ಥ್ಯ ಮತ್ತು ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಹಸಿರು ಪಚ್ಚಿಲೆ (Green mussels) ಪೆರ್ನಾಕ್ಯಾನಾಲಿಕಲಸ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇದು ಒಂದು ಜಾತಿಯ ಚಿಪ್ಪು ಮೀನುಗಳಾಗಿದ್ದು, ಅವುಗಳ ವಿಶಿಷ್ಟ ಸುವಾಸನೆ ಮತ್ತು, ಪೌಷ್ಠಿಕಾಂಶದ ಕಾರಣದಿಂದಾಗಿ ಶತಮಾನಗಳಿಂದಲೂ ಹೆಚ್ಚಿನ ಜನರು ಅದನ್ನು ಇಷ್ಟಪಟ್ಟು ಸೇವಿಸುತ್ತಿದ್ದಾರೆ. ಈ ಮಸ್ಸೆಲ್ಸ್ಗಳು ಹೆಚ್ಚಿನ ರುಚಿಯ ಕಾರಣದಿಂದ ಹೆಸರುವಾಸಿಯಾಗಿದ್ದು ಮಾತ್ರವಲ್ಲದೆ, ಇವುಗಳು ತಮ್ಮ ಸಂಭಾವ್ಯ ಆರೋಗ್ಯ ಪ್ರಯೋಜನಗಳಿಂದಲೂ ಗಮನ ಸೆಳೆದಿವೆ. ಒಮೆಗಾ-3 ಕೊಬ್ಬಿನಾಮ್ಲಗಳು, ಜೀವಸತ್ವಗಳು, ಪ್ರೋಟೀನ್, ಖನಿಜಾಂಶಗಳಿಂದ ಹಸಿರು ಮಸ್ಸೆಲ್ಸ್ಗಳು ಸಮೃದ್ಧವಾಗಿದೆ. ಇವುಗಳು ಮೆದುಳಿನ ಆರೋಗ್ಯ ಸುಧಾರಿಸುತ್ತದೆ. ರಕ್ತ ಪರಿಚಲನೆ ಹೆಚ್ಚಿಸುತ್ತದೆ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ, ದೇಹದ ಅಂಗಾಂಶಗಳನ್ನು ಬಲಪಡಿಸುತ್ತದೆ ಮತ್ತು ವಯಸ್ಸಾಗುವಿಕೆಯನ್ನು ತಡೆಗಟ್ಟುವ ಸಾಮಾರ್ಥ್ಯವನ್ನು ಹೊಂದಿದೆ.
ಹಸಿರು ಮಸ್ಸೆಲ್ಸ್ಗಳು ನೋಡಲು ಎಷ್ಟು ಆಕರ್ಷಕವಾಗಿದೆಯೋ, ಹಾಗೆ ಅವುಗಳು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಕೂಡಾ ಹೊಂದಿದೆ. ಅವುಗಳು ಖನಿಜ, ಅಗತ್ಯ ಅಮೈನೋ ಆಮ್ಲಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ಫ್ರೆಶ್ ಟು ಹೋಮ್‌ನ ಚೆಫ್ ಅಜಿ ಅವರು ಹಸಿರು ಮಸ್ಸೆಲ್ಸ್ ಸೇವಿಸುವುದರಿಂದ ಸಿಗುವ ಕೆಲವು ಅದ್ಭುತವಾದ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಸಿದ್ದಾರೆ:
ಅಸ್ಥಿ ಸಂಧಿವಾತ:
ಅಸ್ಥಿ ಸಂಧಿವಾತದಿಂದಾಗಿ ಕೀಲು ನೋವಿನ ಸಂವೇದನೆ ಹೆಚ್ಚಾಗಿರುತ್ತದೆ. ಈ ಹಸಿರು ಮಸ್ಸೆಲ್ಸ್ಗಳನ್ನು ಸೇವಿಸುವುದರಿಂದ ನೋವಿನ ಸಂವೇದನೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಮತ್ತು ಕೀಲುಗಳ ಕಾರ್ಯ ಮತ್ತು ಚಲನಶೀಲತೆಯಲ್ಲಿ ಸುಧಾರಣೆ ಕಾಣಬಹುದು.
ಕರುಳಿನ ಆರೋಗ್ಯ:
ಅಸ್ಥಿ ಸಂಧಿವಾತದ ಲಕ್ಷಣಗಳನ್ನು ಸುಧಾರಿಸಲು ಸಹಾಯ ಮಾಡುವುದರ ಹೊರತಾಗಿ, ಹಸಿರು ಮಸ್ಸೆಲ್ಸ್ಗಳು ಕರುಳಿನ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ಮತ್ತು ಹಲವಾರು ಸಂಶೋಧನೆಗಳು ಕೂಡಾ ಹಸಿರು ಮಸ್ಸೆಲ್ಸ್ಗಳು ಕರುಳಿನ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕಂಡುಹಿಡಿದಿದೆ.
ಇದನ್ನೂ ಓದಿ : ಈ ತಿಂಡಿಯನ್ನು ನೀವು ಏನೆಂದು ಕರೆಯುತ್ತೀರಿ? ಇಲ್ಲಿವೆ ಟ್ವಿಟರ್ನಲ್ಲಿ ಕಂಡ ಕುತೂಹಲಕಾರಿ ಉತ್ತರಗಳು
ಆಸ್ತಮಾ:
ಆಸ್ತಮಾ ಹೊಂದಿರುವ ಜನರು ಹಸಿರು ಮಸ್ಸೆಲ್ಸ್ಗಳನ್ನು ನಿಯಮಿತವಾಗಿ ಸೇವಿಸುವುದುರಿಂದ ಅದ್ಭುತ ಆರೋಗ್ಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಇದು ಆಸ್ತಮಾದ ರೋಗಲಕ್ಷಣಗಳನ್ನು ಸುಧಾರಿಸುತ್ತದೆ.
ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ:
ಹಸಿರು ಮಸ್ಸೆಲ್ಸ್ನಲ್ಲಿರುವ ಒಮೆಗಾ-೩ ಕೊಬ್ಬಿನಾಮ್ಲಗಳು ರಕ್ತದ ಹರಿವು ಮತ್ತು ಅಪಧಮನಿಯ ಗೋಡೆಯ ಬಲವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಪ್ರಮುಖ ಅಂಗಗಳು ಮತ್ತು ಸ್ನಾಯುಗಳಿಗೆ ಆರೋಗ್ಯಕರ ರಕ್ತ ಪರಿಚಲನೆಗೆ ಅನುವು ಮಾಡಿಕೊಡುತ್ತದೆ.
ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ:
ಮಸ್ಸೆಲ್ಸ್ಗಳು ಕಬ್ಬಿಣಾಂಶದ ಅತ್ಯುತ್ತಮ ಮೂಲವಾಗಿದೆ. ಆಮ್ಲಜನಕ ಸಾಗಿಸುವ ಪ್ರೋಟಿನುಗಳಾದ ಹಿಮೋಗ್ಲೋಬಿನ್ ಮತ್ತು ಮಯೋಗ್ಲೋಬಿನ್ ಉತ್ಪಾದನೆಯಲ್ಲಿ ಕಬ್ಬಿಣಾಂಶವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ನಿಯಮಿತವಾಗಿ ಮಸ್ಸೆಲ್ಸ್ಗಳನ್ನು ಸೇವಿಸುವುದರಿಂದ ದೇಹದಲ್ಲಿನ ರಕ್ತ ಹೀನತೆಯನ್ನು ತಡೆಗಟ್ಟಬಹುದು.
ವಯಸ್ಸಾಗುವಿಕೆಯ ವಿರೋಧಿ ಗುಣಲಕ್ಷಣಗಳು:
ಹಸಿರು ಮಸ್ಸೆಲ್ಸ್ ಮ್ಯೂಕೋಪೊಲಿಸ್ಯಾಕರೈಡ್‌ಗಳನ್ನು ಹೊಂದಿರುತ್ತದೆ. ಇದು ಮೃದುವಾದ ಮತ್ತು ನಯವಾದ ಚರ್ಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 7:16 pm, Tue, 14 February 23