AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Food Trends 2023: ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಪ್ರವೃತ್ತಿಗಳನ್ನು ಪಾಲಿಸಿ

ಆಹಾರದ ಪ್ರವೃತ್ತಿಗಳು ಬರುತ್ತವೆ, ಹೋಗುತ್ತವೆ. ನಾವು ಏನು ತಿನ್ನುತ್ತೇವೆ ಮತ್ತು ಕುಡಿಯುತ್ತೇವೆ ಎಂಬುದರ ಕುರಿತು ನಾವು ಯೋಚಿಸುವುದು ಮುಖ್ಯವಾಗಿರುತ್ತದೆ. ನಾವು ತಿನ್ನುವ ಆಹಾರಗಳು ನಮ್ಮ ಯೋಗಕ್ಷೇಮದ ಮೇಲೆ ಆಳವಾಗಿ ಪರಿಣಾಮ ಬೀರುತ್ತದೆ.

Food Trends 2023: ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಪ್ರವೃತ್ತಿಗಳನ್ನು ಪಾಲಿಸಿ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Feb 13, 2023 | 6:35 PM

Share

ಪ್ರಪಂಚವು ಕ್ಷೇಮ ಮತ್ತು ಸುಸ್ಥಿರತೆಗೆ ಹೆಚ್ಚು ಗಮನಹರಿಸುವಂತೆ, ಜನರು ದೇಹಕ್ಕೆ ಅನುಕೂಲಕರವಾದ ಹಾಗೂ ಮಾನಸಿಕ ಆರೋಗ್ಯಕ್ಕೆ ಪೂರಕವಾದ ಆಹಾರ ಪದ್ಧತಿಗಳನ್ನು ಪಾಲಿಸುವುದು ಮುಖ್ಯವಾಗಿದೆ. 2023ರಲ್ಲಿ ನಮ್ಮ ಆಹಾರ ಪದ್ಧತಿಯನ್ನು ರೂಪಿಸುವ ಉನ್ನತ ಆಹಾರ ಪ್ರವೃತ್ತಿಗಳು ಇಲ್ಲಿವೆ. ಆಹಾರದ ಪ್ರವೃತ್ತಿಗಳು ಬರುತ್ತವೆ, ಹೋಗುತ್ತವೆ. ನಾವು ಏನು ತಿನ್ನುತ್ತೇವೆ ಮತ್ತು ಕುಡಿಯುತ್ತೇವೆ ಎಂಬುದರ ಕುರಿತು ನಾವು ಯೋಚಿಸುವುದು ಮುಖ್ಯವಾಗಿರುತ್ತದೆ. ನಾವು ತಿನ್ನುವ ಆಹಾರಗಳು ನಮ್ಮ ಯೋಗಕ್ಷೇಮದ ಮೇಲೆ ಆಳವಾಗಿ ಪರಿಣಾಮ ಬೀರುತ್ತದೆ. ಆಹಾರವು ನಮ್ಮ ಮನಸ್ಥಿತಿ ಮತ್ತು ಶಕ್ತಿಯೊಂದಿಗೆ ಸಂಕೀರ್ಣವಾದ ಪರಸ್ಪರ ಕ್ರಿಯೆಯನ್ನು ಹೊಂದಿದೆ, ಅದು ನಮ್ಮ ಆಲೋಚನೆಗಳು ಮತ್ತು ಕಾರ್ಯಕ್ಷಮತೆಯ ಮೇಲೆ ಪ್ರಭಾವ ಬೀರುತ್ತದೆ. ಇಂದಿನ ದಿನಗಳಲ್ಲಿ ಒಟ್ಟಾರೆ ಆರೋಗ್ಯವನ್ನು ಪೋಷಿಸುವ ಜೊತೆಗೆ ಕೆಲವು ಆರೋಗ್ಯಕರ ಡಯೆಟ್‌ಗಳನ್ನು ಪಾಲಿಸುತ್ತಾ ಜನರು ಹೆಚ್ಚು ಸಮರ್ಥನೀಯ, ಕ್ರಿಯಾತ್ಮಕ ಹಾಗೂ ಆರೋಗ್ಯಕರ ಆಹಾರಗಳನ್ನು ಆಯ್ಕೆ ಮಾಡುತ್ತಿದ್ದಾರೆ.

ರೌಂಡ್‌ಗ್ಲಾಸ್‌ನ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಜಾಗತಿಕ ಮುಖ್ಯಸ್ಥೆ ಪ್ರಕೃತಿ ಪೊದ್ದಾರ್ ಹೇಳುತ್ತಾರೆ, ‘2023ರ ಜಾಗತಿಕ ಆಹಾರ ಪ್ರವೃತ್ತಿಗಳು ಮಾನಸಿಕ ಯೋಗಕ್ಷೇಮ ಮತ್ತು ಆರೋಗ್ಯದ ಜೊತೆ ನಿಕಟವಾದ ಸಂಬಂಧವನ್ನು ಹೊಂದಿದೆ. ಆಹಾರ ಸೇವನೆ ಮತ್ತು ಒಟ್ಟಾರೆ ಸ್ವಾಸ್ಥ್ಯದ ನಡುವೆ ಸಾಮರಸ್ಯವನ್ನು ಸಾಧಿಸಲು ಆಹಾರದಲ್ಲಿನ ಸ್ಥಳೀಯ ಬುದ್ಧಿವಂತಿಕೆಯೊಂದಿಗೆ ವೈಜ್ಞಾನಿಕ ಜ್ಞಾನವನ್ನು ಹೊಂದಿರಬೇಕು.

ರೌಂಡ್‌ಗ್ಲಾಸ್‌ನ ಆಹಾರ ಮತ್ತು ಯೋಗಕ್ಷೇಮ ತಜ್ಞರು 2023ರಲ್ಲಿ ಡಿನ್ನರ್ ಡೇಬಲ್‌ಗಳಲ್ಲಿ ಪ್ರಾಬಲ್ಯ ಸಾಧಿಸುವ ಮತ್ತು ಹೆಚ್ಚಿನ ಯೋಗಕ್ಷೇಮದಿಂದ ಬದುಕಲು ನಮಗೆ ಸಹಾಯ ಮಾಡುವ ಕೆಲವು ಅತ್ಯಾಕರ್ಷಕ ಆಹಾರ ಪ್ರವೃತ್ತಿಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ಕರುಳನ್ನು ಬಲಪಡಿಸುವ ಆಹಾರಗಳು: ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯು 70%ಕ್ಕಿಂತ ಹೆಚ್ಚು ಕರುಳಿನಲ್ಲಿ ನೆಲೆಸಿದೆ. ಇದು ನಮ್ಮ ಮಾನಸಿಕ ಯೋಗಕ್ಷೇಮದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದೆ. ಆಹಾರ ತಜ್ಞರು, ಆರೋಗ್ಯ ವೃತ್ತಿಪರರು ಹಾಗೂ ಥೆರಪಿಸ್ಟ್ಗಳು ಕರುಳಿನ ಆರೋಗ್ಯ ಮತ್ತು ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮದ ನಡುವೆ ಆಳವಾದ ಸಂಪರ್ಕವಿದೆ ಎಂದು ಈಗೀಗ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಕೃತಿ ಪೊದ್ದಾರ್ ಹೇಳುತ್ತಾರೆ. ಹಾಗಾಗಿ ಕರುಳನ್ನು ಬಳಪಡಿಸುವ ಆಹಾರಗಳನ್ನು ಸೇವನೆ ಮಾಡುವುದು ಮುಖ್ಯವಾಗಿದೆ. ಕಾಳುಗಳು, ಬೀಜಗಳು, ಪ್ರೋಬಯೋಟಿಕ್‌ಗಳಾದ ಮೊಸರು, ಮಜ್ಜಿಗೆ, ಹಾಗೂ ಪ್ರಿಬಯೋಟಿಕ್‌ಗಳಾದ ಬೆಳ್ಳುಳ್ಳಿ, ಬಾಳೆಹಣ್ಣು, ಓಟ್ಸ್ ಮತ್ತು ಪೈಬರ್ ಅಂಶಗಳಿರುವ ಆಹಾರಗಳನ್ನು ಸೇವನೆ ಮಾಡಬೇಕು.

ಇದನ್ನೂ ಓದಿ: Food Additives: ಮಕ್ಕಳಿಗೆ ಆಹಾರ ನೀಡುವಾಗ ಕಲಬೆರಕೆಯ ಬಗ್ಗೆ ಜಾಗ್ರತೆಯಿಂದಿರಿ

ಉತ್ತಮ ನಿದ್ರೆಗಾಗಿ ಆಹಾರ: ಪ್ರಪಂಚದಾದ್ಯಂತ 60%ಕ್ಕಿಂತ ಹೆಚ್ಚು ವಯಸ್ಕರರು ನಿದ್ರೆಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ನಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಅಗತ್ಯವಾದ ರಾತ್ರಿಯ ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುವ ಆಹಾರಗಳನ್ನು ಸೇವಿಸಬೇಕು. ಹಾಲು, ಬಾಳೆಹಣ್ಣು, ಮೊಸರು, ಓಟ್ಸ್, ಬಾದಾಮಿ, ವಾಲ್‌ನಟ್ಸ್, ಪನೀರ್‌ನಂತಹ ಆಹಾರಗಳು ನಮಗೆ ವಿಶ್ರಾಂತಿ ಮತ್ತು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.

ಆರೋಗ್ಯಕರ ಸಕ್ಕರೆ ಪರ್ಯಾಯಗಳು: ಸಕ್ಕರೆಯು ಆರೋಗ್ಯಕ್ಕೆ ಅಷ್ಟೊಂದು ಉತ್ತಮವಲ್ಲ. ಅದರ ಬದಲು ಖರ್ಜೂರದಂತಹ ಸಕ್ಕರೆ ಪರ್ಯಾಯಗಳು ಆರೋಗ್ಯಕರವಾಗಿದೆ. ಈ ಖರ್ಜೂರಗಳು ಉತ್ಕರ್ಷಣ ನಿರೋಧಕ ಹಾಗೂ ಪೈಬರ್ ಅಂಶಗಳಿಂದ ಸಮೃದ್ಧವಾಗಿದೆ. ಇವುಗಳು ಹೃದಯ, ಕರುಳು ಹಾಗೂ ಮೆದುಳಿನ ಆರೋಗ್ಯಕ್ಕೆ ತುಂಬಾ ಉಪಯೋಗಕಾರಿಯಾಗಿವೆ.

ಭಾರತೀಯ ಪಾಕವಿಧಾನಗಳು: ಭಾರತೀಯ ಶೈಲಿಯ ಆಹಾರಗಳು ಆರೋಗ್ಯಕರವಾದದ್ದಾಗಿದೆ. ಸಿಹಿ ಮತ್ತು ಹುಳಿ ಅಥವಾ ಸಿ ಮತ್ತು ಮಸಾಲೆಯುಕ್ತ ರುಚಿಯ ಆಹಾರವನ್ನು ನಾವಿಲ್ಲಿ ನೋಡಬಹುದು. ಇಲ್ಲಿ ಆರೋಗ್ಯಕ್ಕೆ ಪೂರಕವಾದ ಅನೆಕ ಮಸಾಲೆ ಪದಾರ್ಥಗಳನ್ನು ಅಡುಗೆಗಳಲ್ಲಿ ಸೇರಿಸುತ್ತಾರೆ.

ಆರೋಗ್ಯಕರ ತಿಂಡಿಗಳು ಮತ್ತು ಕ್ರಿಯಾತ್ಮಕ ಆಹಾರಗಳು: ನಮ್ಮ ಈ ಒತ್ತಡದ ಜೀವನಶೈಲಿಯಲ್ಲಿ ಆರೋಗ್ಯಕರ ತಿಂಡಿಗಳನ್ನು ಸೇವಿಸುವುದು ಮುಖ್ಯವಾಗಿದೆ. ಆಹಾರದ ಕ್ರೇವಿಂಗ್ಸ್ ಆದಾಗಡ್ರೆ ಫ್ರೂಟ್ಸ್ ಡ್ರೆನಟ್ಸ್​ಗಳಂತಹ ಆರೋಗ್ಯಕರವಾದದ್ದನ್ನು ತಿನ್ನಬೇಕು. ಆಹಾರವು ಮಾನವರಿಗೆ ಪ್ರಾಥಮಿಕ ಮಾನಸಿಕ ಮತ್ತು ಭಾವನಾತ್ಮಕ ಪ್ರಕ್ರಿಯೆಯಾಗಿದೆ. ಈ 2023ರಲ್ಲಿ ನಾವು ಸಾಂಪ್ರದಾಯಿಕ ಪ್ರಾದೇಶಿಕ ಭಾರತೀಯ ಪಾಕವಿಧಾನಗಳು, ಮತ್ತು ಕರುಳಿನ ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಪೂರಕವಾದ ಆಹಾರ ಪದ್ಧತಿಯನ್ನು ಪಾಲಿಸಬೇಕೆಂದು ಪ್ರಕೃತಿ ಪೊದ್ದಾರ್ ಸಲಹೆ ನೀಡಿದ್ದಾರೆ.

Published On - 6:31 pm, Mon, 13 February 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ