ಪಾತ್ರೆಗಳಲ್ಲಿನ ಅರಿಶಿನದ ಕಲೆಗಳನ್ನು ತೆಗೆದುಹಾಕಲು 5 ಸುಲಭ ಮಾರ್ಗಗಳು ಇಲ್ಲಿವೆ

ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಬಳಸಲಾಗುವ ಕೆಲವು ಪದಾರ್ಥಗಳನ್ನು ಬಳಸಿ, ಪಾತ್ರೆಗಳಲ್ಲಿನ ಹಳದಿ ಕಲೆಗಳನ್ನು ಹೋಗಲಾಡಿಸಬಹುದು.

ಪಾತ್ರೆಗಳಲ್ಲಿನ ಅರಿಶಿನದ ಕಲೆಗಳನ್ನು ತೆಗೆದುಹಾಕಲು 5 ಸುಲಭ ಮಾರ್ಗಗಳು ಇಲ್ಲಿವೆ
ಪಾತ್ರೆಗಳಲ್ಲಿನ ಅರಿಶಿನದ ಕಲೆImage Credit source: iStock
Follow us
ಅಕ್ಷತಾ ವರ್ಕಾಡಿ
|

Updated on:Feb 14, 2023 | 3:51 PM

ಪಾತ್ರೆಗಳಲ್ಲಿ, ವಿಶೇಷವಾಗಿ ಪ್ಲೇಟ್​​​ಗಳಲ್ಲಿ ಮಸಾಲೆ ಅಥವಾ ಅರಶಿನದ ಕಲೆಗಳು ಉಳಿದುಕೊಂಡರೆ ಅದನ್ನು ಶುಚಿಕೊಳಿಸುವುದು ಅಷ್ಟು ಸುಲಭವಲ್ಲ. ಅರಿಶಿನ ಕಲೆಯ ಮತ್ತೊಂದು ಸಮಸ್ಯೆ ಎಂದರೆ ನೀವು ಅದನ್ನು ದೀರ್ಘಕಾಲ ಕುಳಿತುಕೊಳ್ಳಲು ಬಿಟ್ಟರೆ ಅದನ್ನು ತೆಗೆದುಹಾಕಲು ಹೆಚ್ಚು ಕಷ್ಟವಾಗುತ್ತದೆ. ಆದ್ದರಿಂದ ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಬಳಸಲಾಗುವ ಕೆಲವು ಪದಾರ್ಥಗಳನ್ನು ಬಳಸಿ, ಪಾತ್ರೆಗಳಲ್ಲಿನ ಹಳದಿ ಕಲೆಗಳನ್ನು ಹೋಗಲಾಡಿಸಬಹುದು.

ಪಾತ್ರೆಗಳಿಂದ ಅರಿಶಿನದ ಕಲೆಗಳನ್ನು ತೆಗೆದುಹಾಕಲು 5 ಸಲಹೆಗಳು ಇಲ್ಲಿವೆ:

1. ಗ್ಲಿಸರಿನ್:

ಎರಡು ಕಪ್ ನೀರು ತೆಗೆದುಕೊಂಡು 1/4 ಕಪ್ ಗ್ಲಿಸರಿನ್ ಮತ್ತು 1/4 ಕಪ್ ಸೋಪ್​​ ಪೌಡರ್​​​​​ ಸೇರಿಸಿ. ನಂತರ ಒಂದು ಕಾಟನ್​​​ ಬಟ್ಟೆ ತೆಗೆದುಕೊಂಡು ಈಗಾಗಲೇ ಮಾಡಿಟ್ಟ ಮಿಶ್ರಣದಲ್ಲಿ ಅದ್ದಿ ತೆಗೆಯಿರಿ. ನಂತರ ಪಾತ್ರೆಗಳ ಕಲೆಗಳ ಮೇಲೆ ಹಚ್ಚಿ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. 15 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಅರಿಶಿನದಿಂದ ಉಳಿದಿರುವ ಎಲ್ಲಾ ಕಲೆಗಳನ್ನು ತೆಗೆದು ಹಾಕುತ್ತದೆ.

2. ನಿಂಬೆ ರಸ:

ನಿಂಬೆ ರಸದಲ್ಲಿರುವ ಆಮ್ಲೀಯ ಗುಣವು ಕಲೆಗಳನ್ನು ತೊಡೆದು ಹಾಕುವಲ್ಲಿ ಸಹಾಯಕವಾಗಿದೆ. ಬಿಸಿ ನೀರಿಗೆ ನಿಂಬೆ ರಸವನ್ನು ಹಾಕಿ, ಈ ಮಿಶ್ರಣವನ್ನು ಪಾತ್ರೆಗಳಿಗೆ ಹಾಕಿ ರಾತ್ರಿಯಿಡಿ ಹಾಗೆಯೇ ಇಡಿ. ಮರುದಿನ ಬೆಳಗ್ಗೆ ಪಾತ್ರೆಗಳನ್ನು ತೊಳೆಯಿರಿ.

ಇದನ್ನೂ ಓದಿ:

3. ಅಡಿಗೆ ಸೋಡಾ:

ಅಡಿಗೆ ಸೋಡಾ ಅಡುಗೆಮನೆಯಲ್ಲಿ ಅತ್ಯಂತ ಉಪಯುಕ್ತ ಉತ್ಪನ್ನಗಳಲ್ಲಿ ಒಂದಾಗಿದೆ. ಸ್ವಲ್ಪ ನೀರು ಸೇರಿಸಿ, ಅದಕ್ಕೆ ಅಡುಗೆ ಸೋಡಾ ಸೇರಿಸಿ ದಪ್ಪ ಪೇಸ್ಟ್​​ ಮಾಡಿ. ಕಲೆಗಳಿರುವ ಪಾತ್ರೆಗೆ ಹಚ್ಚಿ ಮತ್ತು 15 ನಿಮಿಷಗಳ ನಂತರ ಪಾತ್ರೆಯನ್ನು ತೊಳೆಯಿರಿ.

4. ಹೈಡ್ರೋಜನ್ ಪೆರಾಕ್ಸೈಡ್:

ತಿಳಿ ನೀಲಿ ರಾಸಾಯನಿಕ ದ್ರವವು ಕಠಿಣವಾದ ಕಲೆಗಳನ್ನು ತೆಗೆದುಹಾಕಲು ಸಹಾಯಕವಾಗಿದೆ. ಈ ರಾಸಾಯನಿಕ ದ್ರವಗಳನ್ನು ಹಳದಿ ಕಲೆಗಳಿರುವ ಪಾತ್ರೆಗಳ ಮೇಲೆ ಹಚ್ಚಿ, ಕೆಲವು ನಿಮಿಷಗಳ ನಂತರ ಪಾತ್ರೆಗಳನ್ನು ತೊಳೆಯಿರಿ.

5. ಸೂರ್ಯನ ಬೆಳಕು:

ಪಾತ್ರೆಗಳಲ್ಲಿನ ಕಲೆಗಳನ್ನು ತೆಗೆದುಹಾಕುವ ನೈಸರ್ಗಿಕ ವಿಧಾನವೆಂದರೆ ಸೂರ್ಯನ ಬೆಳಕು. ಸೂರ್ಯನ ಬೆಳಕು ಬಟ್ಟೆಗಳು ಮತ್ತು ಪಾತ್ರೆಗಳಿಂದ ಕಲೆಗಳನ್ನು ಹೀರಿಕೊಳ್ಳುತ್ತದೆ. ಹಳದಿ ಕಲೆಗಳಿರುವ ಪಾತ್ರೆಗಳನ್ನು ದಿನವಿಡಿ ಬಿಸಿಲಿಗಿಡಿ, ನೀವು ಆದರಿಂದ ಕಲೆಗಳು ಹೋಗುವುದನ್ನು ಕಾಣಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:51 pm, Tue, 14 February 23

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ