Kitchen Tips: ಈಗ ನಿಮ್ಮ ಪ್ರೆಶರ್ ಕುಕ್ಕರ್‌ನ ಸುಟ್ಟ ಆಹಾರ ಮತ್ತು ಕಪ್ಪು ಕಲೆಗಳನ್ನು ಸುಲಭವಾಗಿ ತೆಗೆದುಹಾಕಿ

ದಿನನಿತ್ಯ ಜೀವನದಲ್ಲಿ ಅಡುಗೆ ಮಾಡುವಾಗ ಕುಕ್ಕರ್‌ನಲ್ಲಿ ಸುಟ್ಟ ಗುರುತುಗಳು ಸಾಮಾನ್ಯವಾಗಿದೆ. ಈ ಕೆಳಗಿನ ಸಲಹೆಗಳು ನಿಮ್ಮ ಕುಕ್ಕರ್‌ನ ಕಲೆಗಳನ್ನು ತೊಡೆದುಹಾಕಲು ಸುಲಭವಾಗುತ್ತದೆ.

Kitchen Tips: ಈಗ ನಿಮ್ಮ ಪ್ರೆಶರ್ ಕುಕ್ಕರ್‌ನ ಸುಟ್ಟ ಆಹಾರ ಮತ್ತು ಕಪ್ಪು ಕಲೆಗಳನ್ನು ಸುಲಭವಾಗಿ ತೆಗೆದುಹಾಕಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Jan 12, 2023 | 9:49 AM

ಪ್ರೆಶರ್ ಕುಕ್ಕರ್​ನಲ್ಲಿ ಸುಟ್ಟ ಗುರುತುಗಳು ನಮ್ಮ ದಿನನಿತ್ಯ ಜೀವನದಲ್ಲಿ ಸಾಮಾನ್ಯವಾಗಿದೆ. ಆದರೆ ಅದನ್ನು ಪ್ರತಿ ಬಾರಿಯೂ ಸ್ವಚ್ಛಗೊಳಿಸಲು ಕಷ್ಟಪಡುವ ಬಗ್ಗೆ ಹೇಳಬೇಕಾಗಿಲ್ಲ. ಆದರೆ ಈಗ ಅದು ಬದಲಾಗಿದೆ. ಈ ಕೆಳಗಿನ ಸಲಹೆಗಳು ನಿಮ್ಮ ಮನೆಯಲ್ಲಿನ ಪ್ರೆಶರ್ ಕುಕ್ಕರ್​ನ ಸುಟ್ಟ ಕಪ್ಪು ಕಲೆಗಳನ್ನು ತೊಡೆದು ಹಾಕಲು ನಿಮಗೆ ಸಹಾಯವಾಗುತ್ತದೆ.

ಕುಕ್ಕರ್‌ನಿಂದ ಸುಟ್ಟ ಕಲೆಗಳನ್ನು ತೆಗೆಯಲು ಈ  5 ಸುಲಭ ಉಪಾಯಗಳನ್ನು ಬಳಸಿ

1. ನೀರಿನಿಂದ ಬಿಸಿ ಮಾಡಿ

ಬಿಸಿನೀರು ಕೊಳೆ ಮತ್ತು ಧೂಳನ್ನು ಸ್ವಚ್ಛಗೊಳಿಸಲು ಹೆಸರುವಾಸಿಯಾಗಿದೆ. ಅಂಟಿಕೊಂಡಿರುವ ಸುಟ್ಟ ಆಹಾರವನ್ನ               ಸ್ವಚ್ಚಗೊಳಿಸಲು ಕುಕ್ಕರಗೆ ನೀರಿನ್ನು ಹಾಕಿ 15 ನಿಮಿಷಗಳ ಕಾಲ ಕುದಿಯಲು ಬಿಡಿ. ಆಹಾರದ ಸುಟ್ಟ ಕಲೆಗಳು ಸಡಿಲಗೊಳ್ಳುತ್ತವೆ ನಂತರ ಕುಕ್ಕರ್ ಅನ್ನು ತೊಳೆಯುವಾಗ ಸುಲಭವಾಗಿ ತೆಗೆಯಬಹುದು.

2.ಅಡಿಗೆ ಸೋಡಾ ಬಳಸಿ

ನಿಮ್ಮ ಪ್ರೆಶರ್ ಕುಕ್ಕರ್​ನಲ್ಲಿರುವ ಕಲೆಗಳು ಬಹಳ ಸಮಯದಿಂದ ಕುಳಿತಿದ್ದರೆ, ನೀರಿಗೆ ಬೇಕಿಂಗ್ ಸೋಡಾವನ್ನು ಸೇರಿಸಿ ಮತ್ತು ನಂತರ ಅದನ್ನು ಒಲೆಯ ಮೇಲೆ ಇರಿಸಿ ಕನಿಷ್ಠ ಒಂದು ಗಂಟೆಗಳ ಕಾಲ ಕುದಿಸಿ. ತಣ್ಣಗಾದ ನಂತರ ಅದನ್ನು ತೊಳೆಯಿರಿ.

3.ಗಟ್ಟಿಯಾದ ಕಲೆಗಳಿಗಾಗಿ ಈರುಳ್ಳಿ

ಗಟ್ಟಿಯಾದ ಕಲೆಗಳಿಗಾಗಿ ಈರುಳ್ಳಿ ಸಿಪ್ಪೆಯನ್ನು ಬಳಸುವ ಮೂಲಕ ಕಲೆಯನ್ನ ತೆಗೆಯಬಹುದು. ಕುಕ್ಕರ್ ಒಳಗೆ ನೀರನ್ನು ಹಾಕಿ ಕೆಲವು ಈರುಳ್ಳಿ ಸಿಪ್ಪೆಗಳನ್ನು ಎಸೆಯರಿ ನಂತರ ಕುಕ್ಕರ್ ಮುಚ್ಚಿ ಅರ್ಧ ಘಂಟೆಯವರೆಗೆ ಹೆಚ್ಚಿನ ಉರಿಯಲ್ಲಿ ಕುದಿಸಿ ನಂತರ ಕುಕ್ಕರ್ ಅನ್ನು ತೊಳೆಯಿರಿ.

4.ಬಿಳಿ ಗುರುತುಗಳಿಗೆ ವಿನೆಗರ್

ಕಪ್ಪು ಗುರುತುಗಳ ಬದಲಿಗೆ ಬಿಳಿ ಗುರುತುಗಳು ನಿಮ್ಮನ್ನು ಕಾಡುತ್ತಿದ್ದರೆ. ವಿನೆಗರ್ ಸಹಾಯದಿಂದ ಅವುಗಳನ್ನು ತೊಡೆದುಹಾಕಬಹುದು. ವಿನೆಗರ್ ಆಮ್ಲೀಯವಾಗಿದೆ ಮತ್ತು ಹಾರ್ಡ್ ಕ್ರೂಡ್ ಅನ್ನು ಕರಗಿಸಲು ಸಹಾಯ ಮಾಡುತ್ತದೆ. 1 ಕಪ್ ಬಿಳಿ ವಿನೆಗರ್ ಅನ್ನು ನೀರಿಗೆ ಸೇರಿಸಿ ಮತ್ತು ಅದರೊಂದಿಗೆ ಪ್ರೆಶರ್ ಕುಕ್ಕರ್ ಅನ್ನು ತುಂಬಿಸಿ. ರಾತ್ರಿಯಿಡೀ ಹಾಗೆ ಬಿಡಿ ಮತ್ತು ಮರುದಿನ ಬೆಳಿಗ್ಗೆ ತೊಳೆಯಿರಿ.

5. ದ್ರವ ಮಾರ್ಜಕ(Liquid Detergent)

ಕಲೆ ತುಂಬಾ ಗಟ್ಟಿಯಾಗಿಲ್ಲದಿದ್ದರೆ ಕುಕ್ಕರ್‌ನಲ್ಲಿ ಸ್ವಲ್ಪ ಬೆಚ್ಚಗಿನ ನೀರನ್ನು ದ್ರವ ಮಾರ್ಜಕದೊಂದಿಗೆ ಹಾಕಿ ಮತ್ತು ಎರಡು ಗಂಟೆಗಳ ಕಾಲ ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ಎಂದಿನಂತೆ ತೊಳೆಯಿರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:37 am, Thu, 12 January 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ