AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಚಳಿಗಾಲದಲ್ಲಿ ಎದೆನೋವು ಕಾಣಿಸಿಕೊಂಡರೆ ಈ ಜೀವನಶೈಲಿ ಪಾಲಿಸಿ

ನಿಮ್ಮ ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕಾದ ಋತು ಈ ಚಳಿಗಾಲ. ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಕೆಲವು ಜೀವನಶೈಲಿಯ ಬದಲಾವಣೆಯನ್ನು ಮಾಡಬೇಕಾಗಿದೆ.

Health Tips: ಚಳಿಗಾಲದಲ್ಲಿ ಎದೆನೋವು ಕಾಣಿಸಿಕೊಂಡರೆ ಈ ಜೀವನಶೈಲಿ ಪಾಲಿಸಿ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷತಾ ವರ್ಕಾಡಿ|

Updated on:Jan 10, 2023 | 5:54 PM

Share

ಚಳಿಗಾಲ(Winter Season) ದಲ್ಲಿ ಆರೋಗ್ಯ ಸಮಸ್ಯೆಗಳು ಕಾಣುವುದು ಸರ್ವೆಸಾಮಾನ್ಯ. ನಿಮ್ಮ ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕಾದ ಋತು ಈ ಚಳಿಗಾಲ. ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಕೆಲವು ಜೀವನಶೈಲಿಯ ಬದಲಾವಣೆಯನ್ನು ಮಾಡಬೇಕಾಗಿದೆ.ಚಳಿಗಾಲದ ಸಮಯದಲ್ಲಿ ಹೃದ್ರೋಗ ಮತ್ತು ಮಧುಮೇಹದಂತಹ ಧೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳನ್ನು ನಿರ್ವಹಿಸುವಾಗ ಅತ್ಯಂತ ಜಾಗರೂಕರಾಗಿರಬೇಕು. ಯಾಕೆಂದರೆ ಈ ಸಮಯದಲ್ಲಿ ಸಾಕಷ್ಟು ತಂಪಗಿನ ವಾತಾವರಣ ಇರುವುದರಿಂದ ಇದು ನಿಮ್ಮ ಆರೋಗ್ಯದ ಮೇಲೆ ವಿಶೇಷವಾಗಿ ಹೃದಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆ ಹೆಚ್ಚಿರುತ್ತದೆ. ಚಳಿಗಾಲದಲ್ಲಿ ವಿಶೇಷವಾಗಿ ಹೃದಯಾಘಾತ, ಪಾರ್ಶ್ವವಾಯು ಅಪಾಯ ಹೆಚ್ಚಾಗಿರುತ್ತದೆ. ಇದರಿಂದ ಚಳಿಗಾಲದಲ್ಲಿ ನಿಮ್ಮ ಹೃದಯವನ್ನು ಕಾಳಜಿ ವಹಿಸುವ ಅಗತ್ಯವಿರುತ್ತದೆ ಮತ್ತು ಜೀವನಶೈಲಿಯಲ್ಲಿ ಕೆಲವು ಆರೋಗ್ಯಕರ ಬದಲಾವಣೆಗಳನ್ನು ಮಾಡುವುದು ಅಗತ್ಯವಾಗಿದೆ.

ಚಳಿಗಾಲದಲ್ಲಿ ಬಿಸಿಯಾದ ಗುಲಾಬ್ ಜಾಮೂನ್, ಕ್ಯಾರೆಟ್ ಹಲ್ವಾ ದಂತಹ ಹೆಚ್ಚಿನ ಕ್ಯಾಲೋರಿಭರಿತ ಭಕ್ಷ್ಯಗಳನ್ನು ಸೇವಿಸಲು ಕಡುಬಯಕೆ ಉಂಟಾಗಬಹುದು. ಇಂತಹ ಆಹಾರ ಕ್ರಮ ನಿಮ್ಮ ಹೃದಯದ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಹೃದಯಾಘಾತದ ಈ ಎಲ್ಲಾ ಅಪಾಯಕಾರಿ ಅಂಶಗಳನ್ನು ನಿಯಂತ್ರಣದಲ್ಲಿಡಲು ಜೀವನ ಶೈಲಿಯ ಬದಲಾವಣೆ ಮಾಡಲು ಡಾ. ಅಪರ್ಣಾ ಜಸ್ವಲ್ ಸಲಹೆ ನೀಡುತ್ತಾರೆ.

ವ್ಯಾಯಾಮ:

ಚಳಿಗಾಲದಲ್ಲಿ ನೀವು ರೂಢಿಸಿಕೊಳ್ಳಬೇಕಾದ ಮೊದಲ ಜೀವನಶೈಲಿಯ ಬದಲಾವಣೆಯೆಂದರೆ ದೈನಂದಿನ ವ್ಯಾಯಾಮವನ್ನು ಮಾಡುವುದು. ವ್ಯಾಯಾಮವು ಅತ್ಯಂತ ಮಹತ್ವದ್ದಾಗಿದೆ. ನಿಮ್ಮ ವ್ಯಾಯಾಮವನ್ನು ಮನೆಯೊಳಗೆ ಮಾಡಬಹುದು.

ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಮಿತಿಗೊಳಿಸಿ:

ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡುವುದು ಬಹಳ ಮುಖ್ಯವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯವಾಗುತ್ತದೆ. ಆದ್ದರಿಂದ ನೀವು ತೆಗೆದುಕೊಳ್ಳುವ ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ನಿಯಂತ್ರಿಸುವುದು ಮುಖ್ಯ.

ಇದನ್ನೂ ಓದಿ: ಚಳಿಗಾಲದಲ್ಲಿ ನಿಮ್ಮ ಶ್ವಾಸಕೋಶದ ಆರೋಗ್ಯವನ್ನು ಕಾಪಾಡುವ ಬೆಸ್ಟ್​ 7 ಆಹಾರಗಳು ಇಲ್ಲಿವೆ

ಹೆಚ್ಚಿನ ಸಕ್ಕರೆ ಆಹಾರವನ್ನು ತಪ್ಪಿಸಿ:

ಸಕ್ಕರೆ ಪ್ರಮಾಣ ಹೆಚ್ಚಿರುವ ಆಹಾರಗಳಾದ ಗುಲಾಬ್ ಜಾಮೂನ್, ಕ್ಯಾರೆಟ್ ಹಲ್ವಾದಂತಹ ಆಹಾರವನ್ನು ಚಳಿಗಾಲದಲ್ಲಿ ಸೇವಿಸಲು ಜನರು ಇಷ್ಟಪಡುತ್ತಾರೆ. ಈ ಸಿಹಿತಿಂಡಿಗಳ ಸೇವನೆ ಕಡಿಮೆ ಮಾಡಬೇಕು. ಉಪ್ಪು ಮತ್ತು ಸಕ್ಕರೆಯ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಅದನ್ನು ಕಡಿಮೆ ಮಾಡುವುದು ಅಗತ್ಯವಾಗಿದೆ.

ಆಲ್ಕೋಹಾಲ್ ಸೇವನೆ ಮಿತಿಯಲ್ಲಿರಲಿ:

ಚಳಿಗಾಲದ ಸಮಯದಲ್ಲಿ ಪಾರ್ಟಿಗಳು ಹೆಚ್ಚಾಗಿರುತ್ತವೆ. ಇಂತಹ ಸಮಯದಲ್ಲಿ ಡ್ರಿಂಕ್ಸ್ ಮಾಡೇ ಮಾಡುತ್ತಾರೆ. ಈ ಆಲ್ಕೋಹಾಲ್ ಹೃದಯದ ಆರೋಗ್ಯ ಮತ್ತು ದೇಹದ ಇತರ ಭಾಗಗಳ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ಆದ್ದರಿಂದ ಆಲ್ಕೋಹಾಲ್ ಸೇವನೆ ಮಿತಿಯಲ್ಲಿರಲಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 5:54 pm, Tue, 10 January 23