Heart Attack In Winter: ಇದು ಹೃದಯಗಳ ವಿಷಯ: ಬೆಂಗಳೂರಲ್ಲಿ ಮೈಕೊರೆಯುವ ಚಳಿ, ಈ ಕಾಯಿಲೆ ಇರುವವರಿಗೆ ಹೃದಯ ಜೋಪಾನ ಎನ್ನುತ್ತಿದ್ದಾರೆ ತಜ್ಞರು

ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮೈಕೊರೆಯುವ ಚಳಿ ಬೀಳಿತ್ತಿದ್ದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

Heart Attack In Winter: ಇದು ಹೃದಯಗಳ ವಿಷಯ: ಬೆಂಗಳೂರಲ್ಲಿ ಮೈಕೊರೆಯುವ ಚಳಿ, ಈ ಕಾಯಿಲೆ ಇರುವವರಿಗೆ ಹೃದಯ ಜೋಪಾನ ಎನ್ನುತ್ತಿದ್ದಾರೆ ತಜ್ಞರು
ಹೃದಯಾಘಾತ
Follow us
TV9 Web
| Updated By: ನಯನಾ ರಾಜೀವ್

Updated on: Jan 11, 2023 | 10:17 AM

ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮೈಕೊರೆಯುವ ಚಳಿ ಬೀಳಿತ್ತಿದ್ದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ರಕ್ತದೊತ್ತಡ, ಮಧುಮೇಹ, ರಕ್ತನಾಳಗಳ ಸಮಸ್ಯೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಈ ಚಳಿಗಾಲದಲ್ಲಿ ತುಂಬಾ ಎಚ್ಚರಿಕೆಯಿಂದಿರಬೇಕು ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಮಂಜುನಾಥ್ ಸಲಹೆ ಕೊಟ್ಟಿದ್ದಾರೆ. ಈ ಆರೋಗ್ಯ ಸಮಸ್ಯೆಗಳಿರುವವರು ಹಾಗೂ ಸಾಮಾನ್ಯರು ಕೂಡ ಬೆಳಗಿನ ಸಮಯದಲ್ಲಿ ವಾಕಿಂಗ್, ಜಿಮ್, ಜಾಗಿಂಗ್ ಮಾಡುವಾಗ ತುಂಬಾ ಜಾಗ್ರತೆಯಿಂದಿರಬೇಕು ಎಂದು ಹೇಳಿದ್ದಾರೆ.

ಜಯದೇವ ಆಸ್ಪತ್ರೆಯಲ್ಲಿ ಹೃದಯಘಾತ ಪ್ರಮಾಣ ಹಾಗೂ ಹೃದಯ ಸಮಸ್ಯೆಗಳ ಎದುರಿಸುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಜಯದೇವ ಆಸ್ಪತ್ರೆ ನಡೆಸಿರುವ ಅಧ್ಯಯನದಲ್ಲಿ ಕೆಲವು ಆಘಾತಕಾರಿ ಅಂಶಗಳು ಬಯಲಿಗೆ ಬಂದಿವೆ. ಪ್ರತಿ ತಿಂಗಳು ಜಯದೇವ ಆಸ್ಪತ್ರೆಯೊಂದಕ್ಕೆ 2100 ಕ್ಕೂ ಹೆಚ್ಚು ಹೃದಯಘಾತದ ರೋಗಿಗಳು ದಾಖಲಾಗುತ್ತಿದ್ದಾರೆ. ಕಳೆದ ಎಂಟು ತಿಂಗಳಿಗೆ ಹೋಲಿಕೆ ಮಾಡಿದರೆ ಹೃದಯಘಾತದ ಪ್ರಮಾಣದಲ್ಲಿ ಕೊಂಚ ಏರಿಕೆಯಾಗಿದೆ.

ಮತ್ತಷ್ಟು ಓದಿ: Heart Attack and Cardiac Arrest : ಹೃದಯಾಘಾತ ಹಾಗೂ ಹೃದಯಸ್ತಂಭನ ನಡುವಿನ ವ್ಯತ್ಯಾಸವೇನು?

ಪ್ರತಿ ತಿಂಗಳು ಜಯದೇವ ಆಸ್ಪತ್ರೆಗೆ 2100ಕ್ಕೂ ಹೆಚ್ಚು ಹೃದಯಘಾತ ಕೇಸ್ ದಾಖಲಾಗುತ್ತಿವೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ರಕ್ತನಾಳ ಸಂಕುಚಿತಗೊಂಡಿರುತ್ತದೆ. ಹೀಗಾಗಿ ರಕ್ತದೊತ್ತಡ, ಮಧುಮೇಹ ಹೃದಯ ಸಂಬಂಧಿಸಿದ ಸಮಸ್ಯೆ ಇದ್ದವರು ಎಚ್ಚರ ವಹಿಸಬೇಕಿದೆ ಎಂದು ವೈದ್ಯರು ಹೇಳಿದ್ದಾರೆ. ಬೆಚ್ಚನೆಯ ಉಡುಪು ಉತ್ತಮ ಆಹಾರಕ್ಕೆ ಸೇವಿಸಲು ಸಲಹೆ ನೀಡಿದ್ದು, ಫಾಸ್ಟ್ ಪುಡ್ ಸಾಧ್ಯವಾದಷ್ಟು ಅವೈಡ್ ಮಾಡುವಂತೆ ಸೂಚಿಸಿದ್ದಾರೆ.

ಚಳಿಗಾಲದಲ್ಲಿ ರಕ್ತವು ದಪ್ಪವಾಗುತ್ತದೆ: ರಕ್ತನಾಳಗಳ ಕಿರಿದಾಗುವಿಕೆಯಿಂದಾಗಿ, ರಕ್ತವನ್ನು ಹರಿಸುವುದಕ್ಕೆ ಹೆಚ್ಚಿನ ಒತ್ತಡವನ್ನು ಬೀರಬೇಕಾಗುತ್ತದೆ, ಇದರಿಂದಾಗಿ ರೋಗಿಯ ರಕ್ತದೊತ್ತಡ ಹೆಚ್ಚಾಗುತ್ತದೆ. ಅಧಿಕ ಬಿಪಿಯಿಂದ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು. ತಜ್ಞರ ಪ್ರಕಾರ, ಈ ಋತುವಿನಲ್ಲಿ ರಕ್ತವು ದಪ್ಪವಾಗಲು ಪ್ರಾರಂಭವಾಗುತ್ತದೆ, ಇದರಿಂದಾಗಿ ಹೆಪ್ಪುಗಟ್ಟುವಿಕೆ ಪ್ರಾರಂಭವಾಗುತ್ತದೆ, ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ.

ರಕ್ತದೊತ್ತಡ ಹೃದಯದ ಆರೋಗ್ಯಕ್ಕೆ ಹಾನಿಕಾರಕ – ಚಳಿಗಾಲದಲ್ಲಿ ಹೃದಯಾಘಾತದ ಅಪಾಯವು ಬೆಳಿಗ್ಗೆ ಹೆಚ್ಚು ಎಂದು ಹೃದಯ ತಜ್ಞರು ಹೇಳುತ್ತಾರೆ. ನಮ್ಮ ದೇಹದಲ್ಲಿನ ಕಡಿಮೆ ತಾಪಮಾನದಿಂದಾಗಿ, ಅನೇಕ ಬದಲಾವಣೆಗಳು ಸಂಭವಿಸುತ್ತವೆ ಎಂದು ಅನೇಕ ಸಂಶೋಧನೆಗಳಲ್ಲಿ ಬಹಿರಂಗವಾಗಿದೆ.

ಈ ಬದಲಾವಣೆಗಳು ಹೃದಯ, ರಕ್ತನಾಳಗಳು ಮತ್ತು ಹಾರ್ಮೋನುಗಳಂತೆ ದೇಹದ ಪ್ರತಿಯೊಂದು ಹಂತದಲ್ಲೂ ಸಂಭವಿಸುತ್ತವೆ. ಉಷ್ಣತೆಯು ಕಡಿಮೆಯಾಗುತ್ತಿದ್ದಂತೆ, ದೇಹವು ಅದರ ತಾಪಮಾನವನ್ನು ಕಾಪಾಡಿಕೊಳ್ಳಲು ಹೆಚ್ಚುವರಿ ಕೆಲಸವನ್ನು ಮಾಡಬೇಕಾಗುತ್ತದೆ. ಇದು ದೇಹದ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ. ಹೆಚ್ಚಿದ ರಕ್ತದೊತ್ತಡ ನಮ್ಮ ಹೃದಯದ ಆರೋಗ್ಯಕ್ಕೆ ಹಾನಿ ಮಾಡುತ್ತದೆ.

ಚಳಿಗಾಲದಲ್ಲಿ ಹೃದಯಾಘಾತವನ್ನು ತಡೆಯುವುದು ಹೇಗೆ: ಬೆಳಿಗ್ಗೆ 6-7 ಗಂಟೆಗೆ ವಾಕಿಂಗ್ ಮಾಡುವುದರಿಂದ ಹೃದಯ ಕಾಯಿಲೆಗಳ ಅಪಾಯ ಕೊಂಚ ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ನಡೆಯಲು ಬೆಳಿಗ್ಗೆ 9 ಗಂಟೆಗೆ ಸಮಯವನ್ನು ನಿಗದಿಪಡಿಸಿ. ಚಳಿಗಾಲದಲ್ಲಿ, ಆಹಾರದಲ್ಲಿ ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿ, ಅತಿಯಾದ ಉಪ್ಪು ಸೇವನೆಯಿಂದಾಗಿ, ಹೃದಯವು ಕೆಲಸ ಮಾಡಲು ಹೆಚ್ಚು ಶ್ರಮ ಮಾಡಬೇಕಾಗುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ