AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sweet Potato Rabdi: ಚಳಿಗಾಲದಲ್ಲಿ ಸಿಹಿಗೆಣಸಿನ ಈ ಸೂಪರ್ ರೆಸಿಪಿ ತಯಾರಿಸಿ

ನಿಮ್ಮ ದೇಹಕ್ಕೆ ಇಷ್ಟೆಲ್ಲಾ ಪ್ರಯೋಜನವನ್ನು ನೀಡುವ ಸಿಹಿಗೆಣಸಿನಿಂದ ಮಾಡಬಹುದಾದ ರಾಬ್ಡಿ ರೆಸಿಪಿಯ ಬಗ್ಗೆ ಸಂಪೂರ್ಣ ಪಾಕ ವಿಧಾನ ಇಲ್ಲಿದೆ. ಸಿಹಿಗೆಣಸಿನ ರಾಬ್ಡಿಯನ್ನು ನೀವು ಕೇವಲ ಹತ್ತು ನಿಮಿಷಗಳಲ್ಲಿ ತಯಾರಿಸಬಹುದಾಗಿದೆ.

Sweet Potato Rabdi: ಚಳಿಗಾಲದಲ್ಲಿ ಸಿಹಿಗೆಣಸಿನ  ಈ ಸೂಪರ್ ರೆಸಿಪಿ ತಯಾರಿಸಿ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷತಾ ವರ್ಕಾಡಿ|

Updated on: Jan 10, 2023 | 3:09 PM

Share

ಚಳಿಗಾಲ(Winter Season)ದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗುವ ಸೂಪರ್ ಫುಡ್​​​ಗಳಲ್ಲಿ ಸಿಹಿಗೆಣಸು ಕೂಡ ಒಂದಾಗಿದೆ. ಇದು ನಿಮ್ಮನ್ನು ಚಳಿಗಾಲದಲ್ಲಿ ಹರಡುವ ಸೋಂಕುಗಳಿಂದ ರಕ್ಷಿಸುತ್ತದೆ. ಇದರಲ್ಲಿ ಬೀಟಾ-ಕ್ಯಾರೋಟಿನ್, ವಿಟಮಿನ್ ಬಿ6, ವಿಟಮಿನ್ ಸಿ, ಪೊಟ್ಯಾಸಿಯಮ್, ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ಸೆಲೆನಿಯಂ ಮತ್ತು ಉತ್ಕರ್ಷಣ ನಿರೋಧಕಗಳಂತಹ ಖನಿಜಗಳು ಹೇರಳವಾಗಿದೆ. ಆದ್ದರಿಂದ ಇದು ನಿಮ್ಮನ್ನು ಚಳಿಯ ಶೀತ ವಾತಾವರಣದಲ್ಲಿ ಬೆಚ್ಚಗಿಡುವಂತೆ ಮಾಡುತ್ತದೆ.

ನಿಮ್ಮ ದೇಹಕ್ಕೆ ಇಷ್ಟೆಲ್ಲಾ ಪ್ರಯೋಜನವನ್ನು ನೀಡುವ ಸಿಹಿಗೆಣಸಿನಿಂದ ಮಾಡಬಹುದಾದ ರಾಬ್ಡಿ ರೆಸಿಪಿಯ ಬಗ್ಗೆ ಸಂಪೂರ್ಣ ಪಾಕ ವಿಧಾನ ಇಲ್ಲಿದೆ. ಸಿಹಿಗೆಣಸಿನ ರಾಬ್ಡಿಯನ್ನು ನೀವು ಕೇವಲ ಹತ್ತು ನಿಮಿಷಗಳಲ್ಲಿ ತಯಾರಿಸಬಹುದಾಗಿದೆ. ಸಿಹಿಗೆಣಸಿನ ಜೊತೆಗೆ ಬಳಸುವ ಹಾಲು ನಿಮ್ಮ ದೇಹಕ್ಕೆ ಪ್ರೋಟೀನ್ ಅಂಶವನ್ನು ನೀಡುತ್ತದೆ. ಜೊತೆಗೆ ಕೇಸರಿಯನ್ನು ಬಳಸುವುದರಿಂದ ದೇಹದ ಆರೋಗ್ಯದಲ್ಲಿ ಸಾಕಷ್ಟು ಪ್ರಯೋಜನಗಳನ್ನು ಕಾಣಬಹುದು.

ಸಿಹಿಗೆಣಸಿನ ರಾಬ್ಡಿಗೆ ಬೇಕಾಗುವ ಸಾಮಾಗ್ರಿಗಳು:

ಹಾಲು – 150 ಮೀ ಲೀಟರ್ ಬೇಯಿಸಿದ ಹಿಸುಕಿದ ಸಿಹಿ ಗೆಣಸು -1/2 ಕಪ್ ಸಕ್ಕರೆ- 1 ಚಮಚ ನೀರು- 1/2 ಕಪ್ ಎಲಕ್ಕಿ ಪುಡಿ- 1/2 ಚಮಚ ಕೇಸರಿ- ಕೆಲವು ಎಳೆಗಳು ಡ್ರೈ ಫೂಟ್ಸ್ – 2 ಚಮಚ

ಇದನ್ನೂ ಓದಿ: ಇಡಿಯಪ್ಪಂ ಮತ್ತು ಟೊಮೆಟೊ ಚಟ್ನಿ ರೆಸಿಪಿ ಇಲ್ಲಿದೆ

ಸಿಹಿ ಗೆಣಸು ರಾಬ್ಡಿ ಮಾಡುವ ವಿಧಾನ:

ಮೊದಲಿಗೆ ಒಂದು ಪಾತ್ರೆಯಲ್ಲಿ ಹಾಲನ್ನು ಚೆನ್ನಾಗಿ ಕುದಿಸಿ ನಂತರ ಅದಕ್ಕೆ ಹಿಸುಕಿದ ಸಿಹಿ ಗೆಣಸು ಸೇರಿಸಿ. ಹಾಲು ದಪ್ಪವಾಗುವವರೆಗೆ ಚೆನ್ನಾಗಿ ಬೇಯಿಸಿ. ಈಗ ಒಂದು ಕಪ್ ಬೆಚ್ಚಗಿನ ನೀರಿಗೆ ಕೇಸರಿ ಎಳೆಗಳನ್ನು ಸೇರಿಸಿ ಮತ್ತು ಅವು ಸಂಪೂರ್ಣವಾಗಿ ಕರಗುವವರೆಗೆ ಕಾಯಿರಿ. ಇದನ್ನು ಹಾಲಿನ ಮಿಶ್ರಣಕ್ಕೆ ಸೇರಿಸಿ ಮತ್ತು ಚೆನ್ನಾಗಿ ಬೆರೆಸಿ. ಎಲಕ್ಕಿ ಪುಡಿಯನ್ನು ಬೆರೆಸಿ 3-4 ನಿಮಿಷ ಬೇಯಿಸಿ. ಕೊನೆಯಲ್ಲಿ, ಸಂಪೂರ್ಣ ರಬ್ದಿಯನ್ನು ಒಂದು ಬಟ್ಟಲಿನಲ್ಲಿ ಹಾಕಿ ಮತ್ತು ಅದರ ಮೇಲೆ ಡ್ರೈ ಫೂಟ್ಸ್​​​​ಗಳನ್ನು ಸೇರಿಸಿ. ಇದನ್ನು 1 ಗಂಟೆಗಳ ಕಾಲ ತಣ್ಣಗಾಗಲು ಬಿಡಿ. ಈಗ ಆರೋಗ್ಯಕರವಾದ ಸಿಹಿ ಗೆಣಸು ರಾಬ್ಡಿ ಸಿದ್ದವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: