Idiyappam Recipe: ಇಡಿಯಪ್ಪಂ ಮತ್ತು ಟೊಮೆಟೊ ಚಟ್ನಿ ರೆಸಿಪಿ ಇಲ್ಲಿದೆ
ನೀವು ಯಾವಾತ್ತಾದರೂ ತಮಿಳುನಾಡು, ಕೇರಳದಲ್ಲಿ ಮತ್ತು ಶ್ರೀಲಂಕಾದ ಕಡೆ ಪ್ರವಾಸ ಕೈಗೊಂಡರೆ ಈ ತಿಂಡಿ ಸವಿಯುವುದನ್ನು ಮರೆಯದಿರಿ. ಇದಲ್ಲದೇ ನೀವು ಮನೆಯಲ್ಲಿಯೇ ತಯಾರಿಸಲು ಪಾಕ ವಿಧಾನದ ಸಂಫೂರ್ಣ ವಿವರ ಇಲ್ಲಿದೆ.
ಇಡಿಯಪ್ಪಂ(Idiyappam) ತಮಿಳುನಾಡು, ಕೇರಳದಲ್ಲಿ ಮತ್ತು ಶ್ರೀಲಂಕಾದಲ್ಲಿ ಜನಪ್ರಿಯ ಉಪಹಾರ(Breakfast) ವಾಗಿದೆ. ಇದನ್ನು ಸ್ಟ್ರಿಂಗ್ ಹೂಪರ್, ನೂಲ್ ಪೊಟ್ಟು ಮತ್ತು ನೂಲಪ್ಪಮ್ ಎಂದೂ ಕರೆಯುತ್ತಾರೆ.ಕರ್ನಾಟಕದಲ್ಲಿ ಅಕ್ಕಿಯ ಸೇಮಿಗೆ ಎಂದು ಕರೆಯುತ್ತಾರೆ. ಇಡಿಯಪ್ಪಂ ನೋಡಲು ಶಾವಿಗೆ ತರಲೇ ಇರುತ್ತದೆ. ಅಕ್ಕಿಯಿಂದ ಮಾಡಲಾಗುತ್ತದೆ. ಇದು ಟೊಮೆಟೊ ಚಟ್ನಿಯೊಂದಿಗೆ ಸವಿದರಂತೂ ಅದರ ರುಚಿಯೇ ಬೇರೆ. ಆದ್ದರಿಂದ ನೀವು ಯಾವಾತ್ತಾದರೂ ತಮಿಳುನಾಡು, ಕೇರಳದಲ್ಲಿ ಮತ್ತು ಶ್ರೀಲಂಕಾದ ಕಡೆ ಪ್ರವಾಸ ಕೈಗೊಂಡರೆ ಈ ತಿಂಡಿ ಸವಿಯುವುದನ್ನು ಮರೆಯದಿರಿ. ಇದಲ್ಲದೇ ನೀವು ಮನೆಯಲ್ಲಿಯೇ ತಯಾರಿಸಲು ಮಾಡುವ ವಿಧಾನದ ಸಂಫೂರ್ಣ ವಿವರ ಇಲ್ಲಿದೆ.
ಇಡಿಯಪ್ಪಂ ಮತ್ತು ಟೊಮೆಟೊ ಚಟ್ನಿ ಮಾಡುವ ವಿಧಾನ:
ಮೊದಲಿಗೆ ಚಟ್ನಿಗಾಗಿ ಈರುಳ್ಳಿ, ಟೊಮ್ಯಾಟೊ, ಬೆಳ್ಳುಳ್ಳಿ, ಶುಂಠಿ ಮತ್ತು ಹಸಿರು ಮೆಣಸಿನಕಾಯಿಯನ್ನು ಒಲೆಯ ಮೇಲೆ ಸ್ವಲ್ಪ ಹೊತ್ತು ಸುಟ್ಟು ಕೊಳ್ಳಿ. ಇದಾದ ನಂತರ ಸುಟ್ಟ ತರಕಾರಿಗಳನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿಡಿ. ನಂತರ ಈ ತರಕಾರಿಗಳ ಸಿಪ್ಪೆ ತೆಗೆಯಿರಿ. ಈ ತರಕಾರಿಗಳನ್ನು ಚೆನ್ನಾಗಿ ಹಿಸುಕಿ ಮತ್ತು ಅದಕ್ಕೆ ಉಪ್ಪು, ಸ್ವಲ್ಪ ಸಕ್ಕರೆ, ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ನೀರು ಸೇರಿಸಿ. ಇದಕ್ಕೆ ಕೊನೆಯದಾಗಿ ಕರಿಬೇವು, ಸಾಸಿವೆಯಿಂದ ಒಗ್ಗರಣೆ ಹಾಕಿ. ಈಗ ಚಟ್ನಿ ಸಿದ್ದವಾಗಿದೆ.
ಇದನ್ನೂ ಓದಿ: ನೀವು ಬೆಂಗಳೂರಿನಲ್ಲಿದ್ದರೆ ಈ ತಿಂಡಿಗಳನ್ನು ಸವಿಯಲೇ ಬೇಕು, ಇಲ್ಲಿದೆ ನೋಡಿ
ನಂತರ ಇಡಿಯಪ್ಪಂ ಮಾಡಲು ಹುರಿದ ಅಕ್ಕಿ ಹಿಟ್ಟು, ಸ್ವಲ್ಪ ನೀರು ಮತ್ತು ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಆಲಿವ್ ಎಣ್ಣೆಯನ್ನು ಸೇರಿಸಿ, ಮತ್ತೆ ಹುರಿಯಿರಿ. ನಂತರ ಈ ಹಿಟ್ಟನ್ನು 2-3 ನಿಮಿಷ ಬೇಯಲು ಬಿಡಿ. ಸಾಮಾನ್ಯವಾಗಿ ಸೇಮಿಗೆ ಅಚ್ಚುಗಳಲ್ಲಿ ಹಾಕಿ ಅಚ್ಚಿ ಒತ್ತಿಕೊಳ್ಳಿ. ಈಗ ಎಳೆ ಎಳೆಯಾದ ನೂಲಿನಂತಹ ಇಡಿಯಪ್ಪಂ ಸಿದ್ದವಾಗಿದೆ. ಬಿಸಿ ಇರುವಾಗಲೇ ಟೊಮಾಟೋ ಚಟ್ನಿಯೊಂದಿಗೆ ಸವಿಯಿರಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 7:07 pm, Sun, 8 January 23