- Kannada News Photo gallery Romantic Restaurants In Bangalore: Visit these restaurants in Bengaluru for candle light dinner in kannada
ಕ್ಯಾಂಡಲ್ ಲೈಟ್ ಡಿನ್ನರ್‌ಗಾಗಿ ಬೆಂಗಳೂರಿನ ಈ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ
ಬೆಂಗಳೂರಿನಲ್ಲಿ ನಿಮ್ಮ ಸಂಗಾತಿಯೊಂದಿಗೆ ಕ್ಯಾಂಡಲ್ ಲೈಟ್ ಡಿನ್ನರ್‌ಗಾಗಿ ರೆಸ್ಟೋರೆಂಟ್‌ಗಳನ್ನು ಹುಡುಕುತ್ತೀದ್ದೀರಾ? ಹಾಗಿದ್ದರೆ ಮಾಹಿತಿ ಇಲ್ಲಿದೆ.
Updated on:Jan 08, 2023 | 4:28 PM

ಪರ್ಷಿಯನ್ ಟೆರೇಸ್: ಹೆಸರೇ ಸೂಚಿಸುವಂತೆ, ಮೇಲ್ಛಾವಣಿಯ ರೆಸ್ಟಾರೆಂಟ್ ಪರ್ಷಿಯನ್ ಥೀಮ್ ಅನ್ನು ಹೊಂದಿದೆ. ಆದ್ದರಿಂದ ನಿಮ್ಮ ಸಂಗಾತಿಯೊಂದಿಗೆ ಬ್ರಿಗೇಡ್ ಗೇಟ್‌ವೇ ನಲ್ಲಿರುವ ಪರ್ಷಿಯನ್ ಟೆರೇಸ್ ಭೇಟಿ ನೀಡಿ.

ನಿಮ್ಮ ಸಂಗಾತಿಯೊಂದಿಗೆ ಬೆಂಗಳೂರಿನ ಕೋರಮಂಗಲದಲ್ಲಿರುವ ಓಮ್ ಮೇಡ್ ಕೆಫೆ ರೂಫ್ಟಾಪ್ಗೆ ಭೇಟಿ ನೀಡಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಕ್ಯಾಂಡಲ್ ಲೈಟ್ ಡಿನ್ನರ್ನಲ್ಲಿ ಉತ್ತಮ ಕ್ಷಣವನ್ನು ಕಳೆಯಲು ಒಂದು ಒಳ್ಳೆಯ ಸ್ಥಳವಾಗಿದೆ.

ಆಲಿವ್ ಬೀಚ್: ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿನ ಅತ್ಯಂತ ಸುಂದರವಾದ ರೆಸ್ಟೋರೆಂಟ್ ಸೆಟ್ಟಿಂಗ್‌ಗಳಲ್ಲಿ ಆಲಿವ್ ಬೀಚ್ ಕೂಡ ಒಂದಾಗಿದೆ. ಈ ರೆಸ್ಟೋರೆಂಟ್ ಸಂಪೂರ್ಣ ಬಿಳಿ ಬಣ್ಣದ ಗೋಡೆಗಳನ್ನು ಹೊಂದಿದ್ದು, ಮನಸ್ಸಿಗೆ ಶಾಂತಿಯುತ ಅನುಭವವನ್ನು ನೀಡುತ್ತದೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಬಹುದಾಗಿದೆ.

ಬೆಂಗಳೂರಿನ ಎಂ ಜಿ ರೋಡ್ನಲ್ಲಿರುವ ರಿಂ ನಾಮ್ ರೆಸ್ಟೋರೆಂಟ್ಗೆ ನಿಮ್ಮ ಸಂಗಾತಿಯೊಂದಿಗೆ ಭೇಟಿ ನೀಡಿ. ಹಸಿರ ನಡುವೆ ಸುಂದರ ಕ್ಷಣಗಳನ್ನು ನೀವಿಲ್ಲಿ ಕಳೆಯಬಹುದಾಗಿದೆ. ಜೊತೆಗೆ ವಿಶೇಷ ರುಚಿಯ ಆಹಾರಗಳನ್ನು ನೀವಿಲ್ಲಿ ಕಾಣಬಹುದು.

ಲೆ ಸರ್ಕ್ ಸಿಗ್ನೇಚರ್: ನಿಮ್ಮ ಸಂಗಾತಿಗೆ ಐಷಾರಾಮಿ ಭೋಜನದ ಅನುಭವವನ್ನು ನೀಡಲು ನೀವು ಬಯಸಿದರೆ ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣದ ಹತ್ತಿರವಿರುವ ಲೀಲಾ ಪ್ಯಾಲೇಸ್ ಒಂದು ಉತ್ತಮ ಆಯ್ಕೆಯಾಗಿದೆ. ಇಲ್ಲಿ ನೀವು ಇಟಾಲಿಯನ್ ಭಕ್ಷ್ಯಗಳನ್ನು ಕೂಡ ಸವಿಯಬಹುದು.

ಬೆಂಗಳೂರಿನ ಇಂದಿರಾ ನಗರದಲ್ಲಿರುವ ಕೆಫೆ ಮ್ಯಾಕ್ಸ್ ಬಗ್ಗೆ ಅನೇಕರಿಗೆ ತಿಳಿದಿಲ್ಲ. ನಿಮ್ಮ ಪ್ರೀತಿಪಾತ್ರರನ್ನು ಕರೆದೊಯ್ಯಲು ಕ್ಯಾಶುಯಲ್ ಮತ್ತು ಆಕರ್ಷಕ ಸ್ಥಳವನ್ನು ಬಯಸಿದಾಗ, ಕೆಫೆ ಮ್ಯಾಕ್ಸ್ ಉತ್ತಮ ಆಯ್ಕೆಯಾಗಿದೆ.
Published On - 4:26 pm, Sun, 8 January 23




