- Kannada News Photo gallery Rocking Star Yash Birthday: Mr And Mrs Ramachari and KGF movie re-released
Yash Birthday: ಯಶ್ ಹುಟ್ಟುಹಬ್ಬಕ್ಕೆ ‘ರಾಮಾಚಾರಿ’, ‘ಕೆಜಿಎಫ್’ ಮರು ಬಿಡುಗಡೆ; ಅಭಿಮಾನಿಗಳಿಗೆ ಸಂಭ್ರಮ
Happy Birthday Yash: ನಟ ‘ರಾಕಿಂಗ್ ಸ್ಟಾರ್’ ಯಶ್ ಅವರ ಹುಟ್ಟುಹಬ್ಬವನ್ನು ಇಂದು (ಜ.8) ಸಡಗರದಿಂದ ಆಚರಿಸಲಾಗುತ್ತಿದೆ. ಅಭಿಮಾನಿಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
Updated on: Jan 08, 2023 | 11:23 AM

ನಟ ಯಶ್ ಬರ್ತ್ಡೇ ಪ್ರಯುಕ್ತ ‘ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ’ ಸಿನಿಮಾ ಮರುಬಿಡುಗಡೆ ಆಗಿದೆ. 2014ರಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಅವರಿಗೆ ಭರ್ಜರಿ ಗೆಲುವು ತಂದುಕೊಟ್ಟ ಚಿತ್ರ ಇದು.

ಆಂಧ್ರ ಪ್ರದೇಶದಲ್ಲೂ ಯಶ್ ಅವರಿಗೆ ಅಭಿಮಾನಿಗಳಿದ್ದಾರೆ. ತಮ್ಮ ನೆಚ್ಚಿನ ನಟನ ಜನ್ಮದಿನದ ಸಂಭ್ರಮಕ್ಕಾಗಿ ‘ಕೆಜಿಎಫ್’ ಸಿನಿಮಾವನ್ನು ಆಂಧ್ರದಲ್ಲಿ ರೀ-ರೀಲೀಸ್ ಮಾಡಲಾಗಿದೆ. ದೊಡ್ಡ ಪರದೆಯಲ್ಲಿ ಫ್ಯಾನ್ಸ್ ಈ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

‘ರಾಕಿಂಗ್ ಸ್ಟಾರ್’ ಯಶ್ ಬರ್ತ್ಡೇ ಪ್ರಯುಕ್ತ ಬಿಡುಗಡೆಯಾದ ಕಾಮನ್ ಡಿಪಿ ವೈರಲ್ ಆಗಿದೆ. ‘ಕೆಜಿಎಫ್: ಚಾಪ್ಟರ್ 2’ ಥೀಮ್ನಲ್ಲಿ ಈ ಪೋಸ್ಟರ್ ಮೂಡಿಬಂದಿದೆ. ಇದರಲ್ಲಿ ‘ಬಾಸ್’ ಎಂದು ಬರೆದಿರುವುದು ಹೈಲೈಟ್ ಆಗಿದೆ.

ಎಲ್ಲ ಕಡೆಗಳಲ್ಲಿ ಯಶ್ ಅವರ ಬ್ಯಾನರ್ಗಳು ರಾರಾಜಿಸುತ್ತಿವೆ. ಹುಟ್ಟುಹಬ್ಬಕ್ಕೆ ಶುಭಕೋರಿ ಅಭಿಮಾನಿಗಳು ಬ್ಯಾನರ್ ಹಾಕಿಸಿದ್ದಾರೆ. ಅಭಿಮಾನಿಗಳ ಸಂಘಗಳು ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.

ಭಾರತೀಯ ಚಿತ್ರರಂಗದಲ್ಲಿ ಯಶ್ ಭದ್ರವಾಗಿ ನೆಲೆ ಕಂಡುಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಬಗ್ಗೆ ಇಡೀ ದೇಶವೇ ಮಾತನಾಡುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ದಿನದಿಂದ ದಿನಕ್ಕೆ ಅವರ ಖ್ಯಾತಿ ಹೆಚ್ಚುತ್ತಿದೆ.
























