- Kannada News Photo gallery Gavisiddeshwara Mutt Fair in Koppal: The people of Sindhanur have shown special devotion to prepare 5 lakh Shenga Holi
Gavisiddeshwara Swamy Jatre: ಕೊಪ್ಪಳದ ಗವಿಸಿದ್ದೇಶ್ವರ ಮಠ ತಲುಪಿದ 5 ಲಕ್ಷ ಶೇಂಗಾ ಹೋಳಿಗೆ: ವಿಶೇಷ ಭಕ್ತಿ ತೋರಿದ ಸಿಂಧನೂರು ಜನತೆ
ಕೊಪ್ಪಳದಲ್ಲಿ ನಡೆಯುತ್ತಿರುವ ಗವಿಸಿದ್ದೇಶ್ವರ ಅಜ್ಜನವರ ರಥೋತ್ಸವಕ್ಕೆ ರಾಯಚೂರು ಜಿಲ್ಲೆಯ ವಿವಿಧ ಗ್ರಾಮಗಳಿಂದ ಲಕ್ಷಾಂತರ ಶೇಂಗಾ ಹೋಳಿಗೆಗಳನ್ನು ಕಳುಹಿಸಿಕೊಡಲಾಗಿದೆ.
Updated on: Jan 08, 2023 | 4:04 PM

ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನವರ ಜಾತ್ರೆಗೂ ರಾಯಚೂರು ಜಿಲ್ಲೆಗೂ ಎಲ್ಲಿಲ್ಲದ ಬಾಂಧವ್ಯ. ಹಾಗಾಗಿ ರಾಯಚೂರು ಸಿಂಧನೂರು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಲಕ್ಷಾಂತರ ಶೇಂಗಾ ಹೋಳಿಗೆ ಕಳುಹಿಸಲಾಗಿದ್ದು, ಸದ್ಯ ಹೋಳಿಗೆಗಳು ಮಠಕ್ಕೆ ತಲುಪಿವೆ.

ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನ ಜಾತ್ರೆ ಅಂದ್ರೆ ಭಕ್ತಿ ಜೊತೆಗೆ ಮಹಾ ಅನ್ನದಾಸೋಹಕ್ಕೂ ಕೂಡ ಖ್ಯಾತಿ ಪಡೆದಿದೆ. ಇದೇ ಜನವರಿ 8ರಂದು ಅಜ್ಜನ ಜಾತ್ರೆ ಸಹ ನಡೆಯಲಿದೆ. ಈ ಜಾತ್ರೆಗೆ ದೇಶ- ವಿದೇಶದಿಂದ ಅನೇಕ ಭಕ್ತರು ಆಗಮಿಸುತ್ತಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ವಿವಿಧ ಗ್ರಾಮಗಳ ಕಳೆದ 15 ದಿನಗಳಿಂದ ನಿರಂತರವಾಗಿ 60 ರಿಂದ 70 ಜನ ಮಹಿಳೆಯರು ಹೋಳಿಗೆ ಮಾಡುವ ಮೂಲಕ ತಮ್ಮ ಭಕ್ತಿ ತೋರಿದ್ದಾರೆ.

90 ಕ್ವಿಂಟಾಲ್ ಶೇಂಗಾ, 75 ಕ್ವಿಂಟಾಲ್ ಬೆಲ್ಲ, 25 ಕ್ವಿಂಟಾಲ್ ಮೈದಾಹಿಟ್ಟನ್ನು ಬಳಸಿ ನಾಲ್ಕೈದು ಲಕ್ಷ ಶೇಂಗಾ ಹೋಳಿಗೆ ಮಾಡಲಾಗಿದೆ. ಇಷ್ಟೆಲ್ಲ ಹೋಳಿಗೆ ಮಾಡಲು ಲಕ್ಷಾಂತರ ರೂ. ಖರ್ಚಾಗಿದ್ದು, ಭಕ್ತರಿಂದಲೇ ಹಣ ಸಂಗ್ರಹಿಸಿರುವುದು ಇನ್ನೊಂದು ವಿಶೇಷ.

ಈಗಾಗಲೇ ಮಾಡಿರುವ ಲಕ್ಷಾಂತರ ಹೋಳಿಗೆಗಳು ಗವಿಸಿದ್ದೇಶ್ವರ ಅಜ್ಜನ ಮಠಕ್ಕೆ ತಲುಪಿದ್ದು, ಭಕ್ತರು ಹೋಳಿಗೆಗಳನ್ನ ಪ್ರಸಾದದ ರೂಪದಲ್ಲಿ ಸವೆಯುತ್ತಿರೋದು ಖುಷಿಯ ಸಂಗತಿ.




