Updated on: Jan 08, 2023 | 1:07 AM
ಚಿಕ್ಕಬಳ್ಳಾಪುರದಲ್ಲಿ ಇಂದಿನಿಂದ (ಜ.7) "ಚಿಕ್ಕಬಳ್ಳಾಪುರ ಉತ್ಸವ 2023" ಪ್ರಾಂಭವಾಗಿದೆ.
"ಚಿಕ್ಕಬಳ್ಳಾಪುರ ಉತ್ಸವ 2023" ಕಾರ್ಯಕ್ರಮದ ಅಂಗವಾಗಿ ಕಲಾತಂಡಗಳ ಮತ್ತು ಸ್ತಬ್ಧಚಿತ್ರಗಳ ಮೆರವಣಿಗೆ ನಡೆದಿಯಿತು.
ಮೆರವಣಿಗೆಗೆ ಚಿಕ್ಕಬಳ್ಳಾಪುರ ನಗರದ ಎಂ. ಜಿ.ರಸ್ತೆಯ ಶ್ರೀ ಮರಳು ಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ಹಸಿರು ನಿಶಾನೆ ನೀಡುವ ತೋರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.
ಅದ್ದೂರಿ ಮೆರವಣಿಗೆಯ ಚಾಲನ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಹೆಚ್ಚು ಕಲಾವಿದರು, 21 ಸ್ತಬ್ಧಚಿತ್ರಗಳು, ವಿವಿಧ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಜನಸಾಗರವೇ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು.
ಸೋಮನ ಕುಣಿತ, ನವಿಲು ಕುಣಿತ, ಕೀಲುಕುದುರೆ, ಡೊಳ್ಳು ಕುಣಿತ, ಕುದುರೆ ಸಾರೋಟ್, ಕರಡಿ ಕುಣಿತ, ವೀರಗಾಸೆ, ದೇವರ ಕುಣಿತಗಳು ಸೇರಿದಂತೆ ದೇಶದ ಮತ್ತು ರಾಜ್ಯದ ನಾನಾ ಪ್ರಕಾರದ ನೃತ್ಯ ಪ್ರಕಾರಗಳ ಕಲಾತಂಡಗಳು ಉತ್ಸವದ ಚಾಲನೆಗೆ ಮೆರುಗು ತಂದವು.
ಈ ಚಾಲನೆ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಇತರರು ಇದ್ದರು.
ಸಚಿವ ಡಾ.ಕೆ.ಸುಧಾಕರ್ ಮತ್ತು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಒಂದೇ ಸಾರೋಟಿನಲ್ಲಿ ಕುಳಿತು ಸಾಗಿದರು.
ಸಚಿವ ಡಾ.ಕೆ.ಸುಧಾಕರ್ ಸಾರೋಟು ಓಡಿಸುತ್ತಿರುವ ದೃಶ್ಯ
ಇಂದಿನಿಂದ 7 ದಿನಗಳ ಕಾಲ ನಡೆಯುವ ಚಿಕ್ಕಬಳ್ಳಾಪುರದ ಉತ್ಸವಕ್ಕೆ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯಸಭೆ ಸದಸ್ಯ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರು ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು. ಸಚಿವರಾದ ಡಾ.ಕೆ.ಸುಧಾಕರ್, ಎಂಟಿಬಿ ನಾಗರಾಜ್, ಸುನಿಲ್ ಕುಮಾರ್, ಭೈರತಿ ಬಸವರಾಜ್ ಭಾಗಿಯಾಗಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಡಾ. ವೀರೇಂದ್ರ ಹೆಗ್ಗಡೆ, ಸಚಿವರಾದ ಡಾ.ಕೆ.ಸುಧಾಕರ್, ಎಂಟಿಬಿ ನಾಗರಾಜ್, ಸುನಿಲ್ ಕುಮಾರ್, ಭೈರತಿ ಬಸವರಾಜ್ ಉತ್ಸವದಲ್ಲಿನ ಮರಳಿನಿಂದ ನಿರ್ಮಿಸಲಾದ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ವೀಕ್ಷಿಸುತ್ತಿರುವ ಸಂದರ್ಭ
ಚಿಕ್ಕಬಳ್ಳಾಪುರ ಉತ್ಸವ 2023ರಲ್ಲಿ ನಟ ಕಿಚ್ಚ ಸುದೀಪ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.