- Kannada News Photo gallery Yash Birthday: Rocking Star Yash couple in Dubai: Rocky Bhai to celebrate birthday with close friends
Yash Birthday: ದುಬೈನಲ್ಲಿ ರಾಕಿಂಗ್ ಸ್ಟಾರ್ ಯಶ್ ದಂಪತಿ: ಆಪ್ತರೊಂದಿಗೆ ಬರ್ತ್ಡೇ ಆಚರಿಸಿಕೊಳ್ಳಲಿರುವ ರಾಕಿ ಭಾಯ್
ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ಗೆ ಸದ್ಯ ಹುಟ್ಟುಹಬ್ಬದ ಸಂಭ್ರಮ. ಹಾಗಾಗಿ ಯಶ್ ದಂಪತಿ ದುಬೈಗೆ ಹಾರಿದ್ದು, ನಾಳೆ (ಜ. 8) ತಮ್ಮ ಜನ್ಮದಿನವನ್ನು ಆರಿಸಿಕೊಳ್ಳಲಿದ್ದಾರೆ.
Updated on:Jan 07, 2023 | 11:03 PM

ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸದ್ಯ ಹುಟ್ಟುಹಬ್ಬದ ಸಂಭ್ರಮ. ಹಾಗಾಗಿ ಯಶ್ ದಂಪತಿ ದುಬೈಗೆ ಹಾರಿದ್ದು, ನಾಳೆ (ಜ. 8) ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ.

ಈ ಬಾರಿ ಯಶ್ ಅವರು ತಮ್ಮ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಈ ಕುರಿತಾಗಿ ಸ್ವತಃ ಯಶ್ ಅವರೆ, ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಮಾಹಿತಿ ನೀಡಿದ್ದರು.

ನಟ ಯಶ್ ಅವರು ಈಗಾಗಲೇ ದುಬೈನಲ್ಲಿದ್ದು, ಕುಟುಂಬದವರು ಮತ್ತು ಕೆಲ ಆಪ್ತರೊಂದಿಗೆ ಬರ್ತ್ಡೇ ಆಚರಿಸಿಕೊಳ್ಳಲಿದ್ದಾರೆ. ಈ ಕಾರಣಕ್ಕೆ ಅವರು ಅಭಿಮಾನಿಗಳಿಗೆ ಸಿಗುತ್ತಿಲ್ಲ.

ಯಶ್ ಅಭಿಮಾನಿಗಳು ಹುಟ್ಟುಹಬ್ಬದ ದಿನ ಹೊಸ ಚಿತ್ರದ ಅಪ್ಡೇಟ್ ನೀಡುತ್ತಾರೆ ಎಂದು ಭಾವಿಸಿದ್ದರು. ಆದರೆ ಅದು ತಪ್ಪಾಗಿದ್ದು, ಹೊಸ ಚಿತ್ರದ ಘೋಷಣೆಗೆ ಫ್ಯಾನ್ಸ್ ಇನ್ನು ಸ್ವಲ್ಪ ದಿನ ಕಾಯಬೇಕಿದೆ.

ತಮ್ಮ ನಟನ ಹುಟ್ಟುಹಬ್ಬಕ್ಕಾಗಿ ಅಭಿಮಾನಿಗಳು ಈಗಾಗಲೇ ಕಾಮನ್ ಡಿಪಿಯನ್ನು ಸಹ ಬಿಡುಗಡೆ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Published On - 10:54 pm, Sat, 7 January 23




