Vada Pav Recipe: ಮನೆಯಲ್ಲೇ ಮಾಡಬಹುದು ಸ್ಟ್ರೀಟ್ ಸ್ಟೈಲ್ ವಡಾಪಾವ್ ರೆಸಿಪಿ

ವಡಾ ಪಾವ್ ಎಂದು ಕರೆಯಲ್ಪಡುವ ಸ್ಟಿಟ್ ಫುಡ್ ಮುಂಬೈನಿಂದ ಬಂದಿದೆ. ಇದು ಹೊಟ್ಟೆ ಪೂರ ತುಂಬುವ, ಕೈಗೆಟಕುವ ಬೆಲೆಯ ಹಾಗೂ ಎಲ್ಲರಿಗೂ ಇಷ್ಟವಾಗುವ ಆಹಾರವಾಗಿದೆ. ಇದರಲ್ಲಿ ಹಾಕಲಾಗುವ ಆಲೂಗಡ್ಡೆಯ ಮಸಾಲ ವಡಾವು ಹೊಟ್ಟೆ ತುಂಬುವಂತೆ ಮಾಡುತ್ತದೆ.

Vada Pav Recipe: ಮನೆಯಲ್ಲೇ ಮಾಡಬಹುದು ಸ್ಟ್ರೀಟ್ ಸ್ಟೈಲ್ ವಡಾಪಾವ್ ರೆಸಿಪಿ
ಸಾಂದರ್ಭಿಕ ಚಿತ್ರ Image Credit source: google image
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 03, 2023 | 11:40 AM

ಭಾರತದ ಜನಪ್ರಿಯ ತಿನಿಸುಗಳಲ್ಲಿ ವಡಾ ಪಾವ್ (Vada Pav) ಕೂಡಾ ಒಂದು. ಇದು ಡೀಪ್ ಫ್ರೆಡ್ ಆಲೂಗಡ್ಡೆಯ ವಡಾ ಆಗಿದ್ದು ಇದನ್ನು ಪಾವ್‌ನ ಎರಡು ತುಂಡುಗಳ ನಡುವೆ ಇರಿಸಲಾಗುತ್ತದೆ. ಇದು ಹಗುರವಾದ, ತುಪ್ಪಳಿನಂತಿರುವ ಭಾರತೀಯ ಬ್ರೆಡ್. ಮುಂಬೈ ಬೀದಿ-ಶೈಲಿಯ ವಡಾ ಪಾವ್ ಜೊತೆಗೆ ಕೊತ್ತಂಬರಿ ಚಟ್ನಿ, ಸಿಹಿ ಮತ್ತು ಹುಳಿ ಹುಣಸೆ ಚಟ್ನಿ, ಬಿಸಿ ಮತ್ತು ಮಸಾಲೆಯುಕ್ತ ಒಣ ಬೆಳ್ಳುಳ್ಳಿ ಚಟ್ನಿಯನ್ನು ಬ್ರೆಡ್‌ಗೆ ಹರಡಲಾಗುತ್ತದೆ.

ವಡಾ ಪಾವ್ ರೆಸಿಪಿ

ವಡಾ ಪಾವ್ ಎಂದು ಕರೆಯಲ್ಪಡುವ ಸ್ಟಿಟ್ ಫುಡ್ ಮುಂಬೈನಿಂದ ಬಂದಿದೆ. ಇದು ಹೊಟ್ಟೆ ಪೂರ ತುಂಬುವ, ಕೈಗೆಟಕುವ ಬೆಲೆಯ ಹಾಗೂ ಎಲ್ಲರಿಗೂ ಇಷ್ಟವಾಗುವ ಆಹಾರವಾಗಿದೆ. ಇದರಲ್ಲಿ ಹಾಕಲಾಗುವ ಆಲೂಗಡ್ಡೆಯ ಮಸಾಲ ವಡಾವು ಹೊಟ್ಟೆ ತುಂಬುವಂತೆ ಮಾಡುತ್ತದೆ. ಪಾವ್ ಎಂದು ಕರೆಯಲ್ಪಡುವ ಭಾರತೀಯ ಬನ್‌ನ್ನು ಅರ್ದದಷ್ಟು ಕತ್ತರಿಸಿ ಅದಕ್ಕೆ ಕೊತ್ತಂಬರಿ ಚಟ್ನಿಯನ್ನು ಹರಡಲಾಗುತ್ತದೆ. ನಂತರ ಉತ್ತಮ ಪ್ರಮಾಣದ ಒಣಗಿದ ಬೆಳ್ಳುಳ್ಳಿ ಚಟ್ನಿಯನ್ನು ಹರಡಲಾಗುತ್ತದೆ. ಮತ್ತು ಅದರ ಮಧ್ಯೆ ಆಲೂಗಡ್ಡೆ ವಡಾವನ್ನು ಇಡಲಾಗುತ್ತದೆ.

ವಡಾ ಪಾವ್ ತನ್ನ ಸರಳ ಮತ್ತು ಸೊಗಸಾದ ರುಚಿಗಾಗಿ ಮುಂಬೈನಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಹೆಸರುವಾಸಿಯಾಗಿದೆ. ವಡಾ ಪಾವ್ ಮಾಡುವ ವಿಧಾನ ಧೀರ್ಘವಾಗಿರುತ್ತದೆ. ಆದರೆ ನೀವು ಚಟ್ನಿಯನ್ನು ಮೊದಲೇ ತಯಾರಿಸಿಟ್ಟರೆ ಅದು ಸುಲಭವಾಗುತ್ತದೆ. ಮತ್ತು ಅದನ್ನು ರೆಫ್ರಿಜರೆಟರ್‌ನಲ್ಲಿ ಇಟ್ಟು 3 ದಿನಗಳವರೆಗೂ ಬಳಸಬಹುದು.

ಇದನ್ನು ಓದಿ:ಒಂದು ವಡಾ ಪಾವ್​ಗೆ 250 ರೂ: ಚರ್ಚೆಗೆ ಕಾರಣವಾದ ವಿಮಾನದ ದುಬಾರಿ ಫುಡ್​

ವಡಾ ಪಾವ್ ಪಾಕ ವಿಧಾನದ ಪ್ರಮುಖ ಅಂಶಗಳು

ಲಾಡಿ ಪಾವ್- ಇದು ಭಾರತೀಯ ಬ್ರೆಡ್ ಆಗಿದೆ. ಭಾರತೀಯ ಬೇಕರಿ ಮತ್ತು ಕೆಫೆಗಳಲ್ಲಿ ಈ ಲಾಡಿ ಪಾವ್ ಲಭ್ಯವಿರುತ್ತದೆ. ವಡಾ- ಇದು ಡೀಪ್ ಫ್ರೆಮಾಡಿದ ಆಲೂಗಡ್ಡೆಯ ಫ್ರಿಟರ್ ಆಗಿದ್ದು, ಈ ಆಲೂಗಡ್ಡೆಯನ್ನು ಕೆಲವೊಂದು ಮಸಾಲೆಗಳನ್ನು ಸೇರಿಸಿ ಸ್ಟಫಿಂಗ್ ಮಾಡಿ ಕಡ್ಲೆ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಬಿಡಲಾಗುತ್ತದೆ.

ಚಟ್ನಿ- ವಡಾ ಪಾವ್‌ನಲ್ಲಿ ಸಾಮಾನ್ಯವಾಗಿ ಬಳಸುವ ಚಟ್ನಿ ಎಂದರೆ ಹಸಿರು ಚಟ್ನಿ, ಹುಣಸೆ ಚಟ್ನಿ ಮತ್ತು ಬೆಳ್ಳುಳ್ಳಿ ಚಟ್ನಿ. ಈ ಎಲ್ಲಾ ಚಟ್ನಿಗಳನ್ನು ಮೂಲ ಪದಾರ್ಥಗಳನ್ನು ಬಳಸಿ ಮನೆಯಲ್ಲಿಯೇ ತಯಾರಿಸಬಹುದು. ನೀವು ಚಟ್ನಿಯನ್ನು ಮುಂಚಿತವಾಗಿ ತಯಾರಿಸಿ ಸಂಗ್ರಹಿಸಿಟ್ಟುಕೊಳ್ಳಬಹುದು.

ವಡಾ ಪಾವ್ ರೆಸಿಪಿಗೆ ಬೇಕಾಗುವ ಪದಾರ್ಥಗಳು ಮತ್ತು ತಯಾರಿಕಾ ವಿಧಾನ:

ಆಲೂಗಡ್ಡೆ ಸ್ಟಫಿಂಗ್ ಹಾಗೂ ಹಿಟ್ಟಿನ ತಯಾರಿ

ಮಧ್ಯಮ ಗಾತ್ರದ ಆಲೂಗಡ್ಡೆ- 2, ಬೆಳ್ಳುಳ್ಳಿ ಎಸಲು-7, ಹಸಿ ಮೆಣಸಿನಕಾಯಿ-1, ಸಾಸಿವೆ- 4 ಟೀಸ್ಪೂನ್, 6 ರಿಂದ 7-ಕರಿಬೇವಿನ ಎಲೆ, ಅರಶಿನ ಪುಡಿ ಟೀಸ್ಪೂನ್, ಕೊತ್ತಂಬರಿ ಸೊಪ್ಪು ಸ್ವಲ್ಪ, ಉಪ್ಪು ಹಿಟ್ಟಿನ ತಯಾರಿ ಮಾಡಿ ಕಡ್ಲೆ ಹಿಟ್ಟು-1 ಕಪ್, ಅರಶಿನ ಪುಡಿ  ¼ ಟೀಸ್ಪೂನ್, ಅಡುಗೆ ಸೋಡಾ ಸ್ವಲ್ಪ, ಉಪ್ಪು

ತಯಾರಿಸುವ ವಿಧಾನ:

ಬೇಯಿಸಿದ ಆಲೂಗಡ್ಡೆಯನ್ನು ಮ್ಯಾಶ್ ಮಾಡಿ ಪಕ್ಕಕ್ಕೆ ಇರಿಸಿ. ಬೆಳ್ಳುಳ್ಳಿ, ಲವಂಗ, ಕಸಿ ಮೆಣಸಿನಕಾಯಿಯನ್ನು ಪೇಸ್ಟ್ ಮಾಡಿಕೊಳ್ಳಿ, ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ ಸೇರಿಸಿ ಅದು ಸಿಡಿಯಲು ಪ್ರಾರಂಭಿಸಿದಾಗ ಇಂಗು ಸೇರಿಸಿ ಚೆನ್ನಾಗಿ ಫ್ರೆಮಾಡಿ. ನಂತರ ಕರಿಬೇವು ಹಾಗೂ ಮೊದಲೇ ತಯಾರಿಸಿಟ್ಟುಕೊಂಡ ಪೇಸ್ಟ್ ಹಾಕಿ ಫ್ರೆöÊ ಮಾಡಿಕೊಳ್ಳಿ. ಹಾಗೂ ಅರಶಿನ ಸೇರಿಸಿ. ನಂತರ ಮ್ಯಾಶ್ ಮಾಡಿ ಇಟ್ಟುಕೊಂಡ ಆಲೂಗಡ್ಡೆಯನ್ನು ಸೇರಿಸಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ತನ್ನಗಾದ ಬಳಿಕ ಸಣ್ಣ ಉಂಡೆಗಳನ್ನು ಮಾಡಿ ಪಕ್ಕಕ್ಕೆ ಇರಿಸಿ.

ದೊಡ್ಡ ಬೌಲ್‌ನಲ್ಲಿ ಕಡ್ಲೆ ಹಿಟ್ಟು ಹಾಕಿ ಅದಕ್ಕೆ ಅರಶಿನ ಪುಡಿ, ಸೋಡಾ ಪುಡಿ, ಉಪ್ಪು ಸೇರಿಸಿ ನೀರು ಹಾಕಿ ಹಿಟ್ಟು ಗಂಟು ಕಟ್ಟದ ಹಾಗೆ ಚೆನ್ನಾಗಿ ಮಿಶ್ರಣ ಮಾಡಿ , ನಯವಾದ ಹಾಗೂ ದಪ್ಪಗಿನ ಹಿಟ್ಟನ್ನು ತಯಾರಿಸಿ. ಆಳವಾದ ತಳದ ಪ್ಯಾನ್ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ ಅದು ಬಿಸಿಯಾದ ಬಳಿಕ ಅದಕ್ಕೆ ತಯಾರಿಸಿಟ್ಟ ಆಲೂಗಡ್ಡೆಯ ಉಂಡೆಯನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಫ್ರೆ ಮಾಡಿ. ಗೋಲ್ದನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ

ಹಸಿರು ಚಟ್ನಿ

ಕತ್ತರಿಸಿದ ಕೊತ್ತಂಬರಿ ಸೊಪ್ಪು-1 ಕಪ್, ಬೆಳ್ಳುಳ್ಳಿ -2 ಎಸಲು, ನಿಂಬೆ ರಸ ¼ ಟೀಸ್ಪೂನ್, 2 ಹಸಿ ಮೆಣಸಿನ ಕಾಯಿ, ಉಪ್ಪು

ಮಾಡುವ ವಿಧಾನ:

ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ನಿಂಬೆರಸ, ಹಸಿ ಮೆಣಸಿನ ಕಾಯಿ ಸೇರಿಸಿ ನುಣ್ಣಗೆ ರುಬ್ಬಿ ಪೆಸ್ಟ್ ಮಾಡಿಕೊಳ್ಳಿ.

ವಡಪಾವ್ ಲೇಪನ

ಪಾವ್ ಬನ್‌ಗಳು- 8 ತುಂಡು, ಹುಣಸೆ ಚಟ್ನಿ, ಒಣ ಬೆಳ್ಳುಳ್ಳಿ ಚಟಿ

ತಯಾರಿಸುವ ವಿಧಾನ

ಪಾವ್‌ಗಳನ್ನು ಎರಡು ಸ್ಲೆಸ್‌ಗಳಾಗಿ ಕಟ್ ಮಾಡಿ ಅದರ ಮೇಲೆ ಹಸಿರು ಚಟ್ನಿ ಹಾಗೂ ಹುಣಸೆ ಚಟ್ನಿಯನ್ನು ಹರಡಿ, ಬೆಳ್ಳುಳ್ಳಿಯ ಚಟ್ನಿಯನ್ನೂ ಹರಡಬಹುದು. ನಂತರ ಅದರ ಮಧ್ಯದಲ್ಲಿ ಮೊದಲೇ ತಯಾರಿಸಿಟ್ಟ ವಡಾವನ್ನು ಇಟ್ಟು ಮೆಣಸಿನಕಾಯಿ ಮತ್ತು ಚಟ್ನಿಯೊಂದಿಗೆ ತಿನ್ನಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ