IPL 2022: ಸೆಹ್ವಾಗ್ ಪಾಲಿಗೆ ಬಿಸಿಯಾದ ವಡ ಪಾವ್: ರೋಹಿತ್ ಶರ್ಮಾ ಫ್ಯಾನ್ಸ್ ಆಕ್ರೋಶ

IPL 2022: ಸೋಷಿಯಲ್ ಮೀಡಿಯಾದಲ್ಲಿ ವಡ ಪಾವ್ ಟ್ವೀಟ್​ ಹೊಸ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಇದೀಗ ಸೆಹ್ವಾಗ್ ರೋಹಿತ್ ಶರ್ಮಾ ಅಭಿಮಾನಿಗಳಿಗೆ ಕೂಲ್ ಆಗುವಂತೆ ಮನವಿ ಮಾಡಿದ್ದಾರೆ.

IPL 2022: ಸೆಹ್ವಾಗ್ ಪಾಲಿಗೆ ಬಿಸಿಯಾದ ವಡ ಪಾವ್: ರೋಹಿತ್ ಶರ್ಮಾ ಫ್ಯಾನ್ಸ್ ಆಕ್ರೋಶ
Sehwag-Rohit sharma
Follow us
TV9 Web
| Updated By: ಝಾಹಿರ್ ಯೂಸುಫ್

Updated on: Apr 07, 2022 | 8:42 PM

ಐಪಿಎಲ್​ 14ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಕೆಕೆಆರ್ ತಂಡವು ಭರ್ಜರಿ ಜಯ ಸಾಧಿಸಿತ್ತು. ಈ ಗೆಲುವಿನ ರೂವಾರಿ ಆಲ್​ರೌಂಡರ್ ಆಟಗಾರ ಪ್ಯಾಟ್ ಕಮಿನ್ಸ್. ನಿರ್ಣಾಯಕ ಹಂತದಲ್ಲಿ ಕಣಕ್ಕಿಳಿದ ಕಮಿನ್ಸ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಮುಂಬೈ ಗೆಲುವವನ್ನು ಕಸಿದುಕೊಂಡಿದ್ದರು. ಈ ಗೆಲುವಿನ ಬಳಿಕ ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಮಾಡಿದ ಟ್ವೀಟ್ ಈಗ ವಿವಾದಕ್ಕೀಡಾಗಿದೆ.

ಕೆಕೆಆರ್ ತಂಡದ ಅಮೋಘ ಗೆಲುವನ್ನು ಪಸ್ತಾಪಿಸಿ ಟ್ವೀಟ್ ಮಾಡಿದ್ದ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, “ಬಾಯಿಗೆ ಬಂದ ನಿವಾಲಾ ಕಸಿದುಕೊಂಡರು, ಕ್ಷಮಿಸಿ ವಡಾ ಪಾವ್ ಕಸಿದು ಕೊಂಡರು ಎಂದು ಕಾಲೆಳೆದಿದ್ದರು. ಅಲ್ಲದೆ ಪ್ಯಾಟ್ ಕಮ್ಮಿನ್ಸ್, ಕ್ಲೀನ್ ಹಿಟ್ಟಿಂಗ್‌ನ ಅದ್ಭುತ ಪ್ರದರ್ಶನ ಎಂದು ಟ್ವೀಟ್ ಮಾಡಿ ಹಾಡಿಹೊಗಳಿದ್ದರು. ಮುಂಬೈ ಇಂಡಿಯನ್ಸ್ ಸೋಲಿನ ಬೆನ್ನಲ್ಲೇ ಸೆಹ್ವಾಗ್ ಮಾಡಿರುವ ಈ ಟ್ವೀಟ್ ಇದೀಗ ಹೊಸ ಚರ್ಚೆಗೆ ಕಾರಣವಾಗಿತ್ತು.

ಸೆಹ್ವಾಗ್ ವಡ ಪಾವ್ ಎಂದು ಬೇಕೆಂತಲೇ ಪ್ರಸ್ತಾಪಿಸಿದ್ದಾರೆ ಎಂದು ಮುಂಬೈ ಇಂಡಿಯನ್ಸ್​ನ ಕೆಲ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಸಾಮಾನ್ಯವಾಗಿ ರೋಹಿತ್ ಶರ್ಮಾ ಅವರನ್ನು ವಡ ಪಾವ್ ಎಂಬ ಟ್ಯಾಗ್ ಲೈನ್ ನೀಡಿ ಟ್ರೋಲ್ ಮಾಡಲಾಗುತ್ತದೆ. ಸೆಹ್ವಾಗ್ ಕೂಡ ರೋಹಿತ್ ಶರ್ಮಾ ಅವರನ್ನು ಗುರಿಯಾಗಿಸಿ ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ ಎಂದು ಹಿಟ್​ಮ್ಯಾನ್ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ವಡ ಪಾವ್ ಟ್ವೀಟ್​ ಹೊಸ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಇದೀಗ ಸೆಹ್ವಾಗ್ ರೋಹಿತ್ ಶರ್ಮಾ ಅಭಿಮಾನಿಗಳಿಗೆ ಕೂಲ್ ಆಗುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಾನು ವಡ ಪಾವ್ ಎಂದು ಉಲ್ಲೇಖಿಸಿದ್ದು ಮುಂಬೈ ನಗರದ ತಿಂಡಿ ಎಂಬಾರ್ಥದಲ್ಲಿ ಅಷ್ಟೇ. ನಾನು ಕೂಡ ರೋಹಿತ್ ಶರ್ಮಾ ಅವರ ಬ್ಯಾಟಿಂಗ್​ಗೆ ನಿಮ್ಮೆಲ್ಲರಿಗಿಂತ ದೊಡ್ಡ ಅಭಿಮಾನಿ. ಹೀಗಾಗಿ ಯಾರು ಕೂಡ ವೈಯುಕ್ತಿಕವಾಗಿ ತೆಗೆದುಕೊಳ್ಳಬೇಡಿ ಎಂಬಾರ್ಥದಲ್ಲಿ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಇದಾಗ್ಯೂ ರೋಹಿತ್ ಶರ್ಮಾ ಅಭಿಮಾನಿಗಳು ವೀರು ವಿರುದ್ದ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಒಟ್ಟಿನಲ್ಲಿ ಭರ್ಜರಿ ಪ್ರದರ್ಶನವನ್ನು ಹಾಡಿಹೊಗಳುವ ಭರದಲ್ಲಿ ಮಾಡಿರುವ ವಡ ಪಾವ್ ಟ್ವೀಟ್ ಇದೀಗ ವೀರೇಂದ್ರ ಸೆಹ್ವಾಗ್ ಪಾಲಿಗೆ ಬಿಸಿ ಬಿಸಿ ವಡ ಪಾವ್ ಆಗಿ ಮಾರ್ಪಟ್ಟಿದೆ.

ಇದನ್ನೂ ಓದಿ: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಯಾರು ಗೊತ್ತಾ?