AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ವಡಾ ಪಾವ್​ಗೆ 250 ರೂ: ಚರ್ಚೆಗೆ ಕಾರಣವಾದ ವಿಮಾನದ ದುಬಾರಿ ಫುಡ್​

ವಡಾ ಪಾವ್​ ವಿಮಾನದಲ್ಲಿ 250 ರೂ.ಗಳಿಗೆ ಮಾರಾಟ ಮಾಡಲಾಗಿದೆ. ವಿಮಾನ ಪ್ರಯಾಣಿಕರೊಬ್ಬರು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ವಡಾಪಾವ್​ ರೇಟ್​ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ.

ಒಂದು ವಡಾ ಪಾವ್​ಗೆ 250 ರೂ: ಚರ್ಚೆಗೆ ಕಾರಣವಾದ ವಿಮಾನದ ದುಬಾರಿ ಫುಡ್​
ವಡಾ ಪಾವ್​
TV9 Web
| Edited By: |

Updated on: Mar 15, 2022 | 4:12 PM

Share

ಸಾಮಾನ್ಯವಾಗಿ  ಬೀದಿ ಬದಿ ಆಹಾರಗಳು ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಆದರೆ ಅದೇ ಅಹಾರ ರೆಸ್ಟೋರೆಂಟ್​ಗಳಲ್ಲಿ, ವಿಶೇಷ ಸ್ಥಳಗಳಲ್ಲಿ  ಅದರ ಬೆಲೆ ದುಪ್ಪಟ್ಟಾಗಿರುತ್ತದೆ. ವಡಾ ಪಾವ್​ (Vada Pav) ಬೀದಿ ಬದಿಯಲ್ಲಿ 30 ರಿಂದ 40 ರೂ, ಒಳಗೆ ಸಿಗುತ್ತದೆ. ಅದೇ ವಡಾ ಪಾವ್​ ವಿಮಾನದಲ್ಲಿ (Flight) 250 ರೂ.ಗಳಿಗೆ ಮಾರಾಟ ಮಾಡಲಾಗಿದೆ. ವಿಮಾನ ಪ್ರಯಾಣಿಕರೊಬ್ಬರು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ವಡಾ ಪಾವ್​ ರೇಟ್​ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ.

ಟ್ವಿಟರ್​ನಲ್ಲಿ  Pulkit Kochar ಎನ್ನುವ ಬಳಕೆದಾರರು ವಿಮಾನದಲ್ಲಿನ ಆಹಾರದ ಮೆನುವಿನ ಫೋಟೋ ಹಂಚಿಕೊಂಡಿದ್ದಾರೆ. ವಿಡಿಯೋಕ್ಕೆ  ವಿಮಾನದಲ್ಲಿ ನಾನು ಇದನ್ನು ತಿನ್ನುವುದನ್ನು ನೀವು ಎಂದಾದರೂ ನೋಡಿದರೆ, ನನ್ನನ್ನು ವಿಮಾನದಿಂದ ಎಸೆಯಿರಿ ಎಂದು ಕಾಮೆಂಟ್​ ಮಾಡಿದ್ದಾರೆ. ಕೆಲವೇ ಸಮಯದಲ್ಲಿ, ಟ್ವೀಟ್ ನೆಟ್ಟಿಗರ ಗಮನ ಸೆಳೆದಿದ್ದು, ಜನರು ತಮ್ಮ ವಿಮಾನದಲ್ಲಾದ ಸ್ವಂತ ಆಹಾರದ ಅನುಭವಗಳನ್ನು ಪೋಸ್ಟ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ.

ವಿಮಾನದಲ್ಲಿ ಪೋಹಾದ ಬಟ್ಟಲನ್ನು ರೂ.ಗೆ ಖರೀದಿಸಿದ ಬಗೆಯನ್ನು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ.  ಸುಮಾರು 5 ವರ್ಷಗಳ ಹಿಂದೆ ನಾನು ಸಿಬ್ಬಂದಿಗೆ ಬೇಡ ಎಂದು ಹೇಳಲು ಸಾಧ್ಯವಾಗದ ಕಾರಣ ನಾನು 200 ರೂ.ಗೆ ವಿಮಾನದಲ್ಲಿ ಪೋಹಾ ಖರೀದಿಸಿದ್ದೆ ಎಂದು ಅವರು ಬರೆದಿದ್ದಾರೆ. ಇನ್ನೊಬ್ಬರು ವರ್ಷಗಳ ಹಿಂದೆ ನಾನು ವಿಮಾನದಲ್ಲಿ ಚಿಕನ್ ನೂಡಲ್ಸ್ ಖರೀದಿಸಿದ್ದೆ. ಅದಕ್ಕೆ 300 ರೂ ನೀಡಿದ್ದೆ ಎಂದು ಅನುಭವ ಹಂಚಕೊಂಡಿದ್ದಾರೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ವೈರಲ್​ ಆಗಿದೆ.

ಇದನ್ನೂ ಓದಿ:

ವೀಲ್​​ಚೇರ್​ನಲ್ಲಿ ಕುಳಿತು 10 ಟನ್ ತೂಕದ ಟ್ರಕ್​ ಎಳೆಯುತ್ತಾರೆ ಈ ವ್ಯಕ್ತಿ