AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Methi Thepla: ಬೆಳಗ್ಗಿನ ಉಪಹಾರಕ್ಕೆ ಉತ್ತಮ ಈ ಮಲ್ಟಿಗ್ರೇನ್ ಮೇಥಿ ಥೆಪ್ಲಾ

ಹೆಸರೇ ಸೂಚಿಸುವಂತೆ ಈ ಥೆಪ್ಲಾವನ್ನು ರಾಗಿ,ಬೇಳೆ, ಇತರ ಧಾನ್ಯಗಳ ಹಿಟ್ಟನ್ನು ಸೇರಿಸಿಕೊಂಡು ತಯಾರಿಸಲಾಗುತ್ತದೆ. ಈ ಥೇಪ್ಲಾ ಗುಜರಾತಿ ಶೈಲಿಯ ಪಾಕವಿಧಾನವಾಗಿದೆ.

Methi Thepla: ಬೆಳಗ್ಗಿನ ಉಪಹಾರಕ್ಕೆ ಉತ್ತಮ ಈ ಮಲ್ಟಿಗ್ರೇನ್ ಮೇಥಿ ಥೆಪ್ಲಾ
ಸಾಂದರ್ಭಿಕ ಚಿತ್ರImage Credit source: iStock
TV9 Web
| Updated By: ಅಕ್ಷತಾ ವರ್ಕಾಡಿ|

Updated on: Jan 07, 2023 | 3:57 PM

Share

ಭಾರತೀಯ ಉಪಹಾರ(Breakfast) ಪಾಕವಿಧಾನಗಳಲ್ಲಿ ಹಲವಾರು ಬಗೆಗಳಿವೆ. ಉತ್ತರ ಭಾರತೀಯರು ಪರಾಠವನ್ನು ಇಷ್ಟಪಟ್ಟರೆ ದಕ್ಷಿಣ ಭಾರತೀಯರು ಉಪ್ಮಾ, ಇಡ್ಲಿಗೆ ಆದ್ಯತೆ ನೀಡುತ್ತಾರೆ. ಮುಂಬೈನವರು ಕೀಮಾ ಪಾವ್, ವಡಾ ಪಾವ್ ಮತ್ತು ಹೆಚ್ಚಿನದನ್ನು ತಿನ್ನುತ್ತಾರೆ. ಗುಜರಾತಿಯನ್ನರು ಉಪಹಾರಕ್ಕೆ ಹೆಚ್ಚಾಗಿ ಥೇಪ್ಲಾವನ್ನು ತಿನ್ನುತ್ತಾರೆ. ಹೆಸರೇ ಸೂಚಿಸುವಂತೆ ಈ ಥೆಪ್ಲಾವನ್ನು ರಾಗಿ,ಬೇಳೆ, ಇತರ ಧಾನ್ಯಗಳ ಹಿಟ್ಟನ್ನು ಸೇರಿಸಿಕೊಂಡು ತಯಾರಿಸಲಾಗುತ್ತದೆ. ಈ ಥೇಪ್ಲಾ ಗುಜರಾತಿ ಶೈಲಿಯ ಪಾಕವಿಧಾನವಾಗಿದೆ. ಈ ಜನಪ್ರಿಯ ಸಾಂಪ್ರದಾಯಿಕ ಉಪಹಾರವನ್ನು ಹಲವಾರು ಹಿಟ್ಟುಗಳು, ಮಸಾಲೆ ಪದಾರ್ಥಗಳು, ಮೊಸರು ಮತ್ತು ನೀರನ್ನು ಬೆರೆಸಿ ತಯಾರಿಸಲಾಗುತ್ತದೆ. ಇಂದು ನಿಮಗೆ ಈ ಮಲ್ಟಿಗ್ರೇನ್ ಥೆಪ್ಲಾದ ಪಾಕವಿಧಾನದ ಬಗ್ಗೆ ತಿಳಿಸಿಕೊಡುತ್ತೇವೆ. ಉಪಹಾರದ ಹೊರತಾಗಿ ಟೀ-ಟೈಮ್ ಸ್ನಾಕ್ ಆಗಿ ಕೂಡ ಈ ರೆಸಿಪಿಯನ್ನು ಮಾಡಬಹುದು.

ಇದನ್ನೂ ಓದಿ: ನೆನೆಸಿದ ಹಸಿ ಬಾದಾಮಿಯನ್ನು ತಿನ್ನುವುದು ನಿಜವಾಗಿಯೂ ಪ್ರಯೋಜನಕಾರಿಯೇ ಅಥವಾ ಇಲ್ಲವೇ? ತಿಳಿಯಿರಿ

ಮಲ್ಟಿಗ್ರೇನ್ ಥೆಪ್ಲಾ ರೆಸಿಪಿ:

ಎಲ್ಲಾ ವಿಧದ ಹಿಟ್ಟುಗಳನ್ನು ತೆಗೆದುಕೊಂಡು ಒಂದು ಬಟ್ಟಲಿನಲ್ಲಿ ಹಾಕಿಕೊಳ್ಳಿ. ಇದಕ್ಕೆ ಮೊಸರು, ಸ್ವಲ್ಪ ಎಣ್ಣೆ ಮತ್ತು ಮಸಾಲೆಗನ್ನು ಸೇರಿಸಿ ಮಿಶ್ರಣ ಮಾಡಿ. ಇದಾದ ಬಳಿಕ ಅಗತ್ಯವಿರುವಷ್ಟು ನೀರು ಬೆರೆಸಿ ಮತ್ತೊಮ್ಮೆ ಹಿಟ್ಟನ್ನು ಚೆನ್ನಾಗಿ ಬೆರೆಸಿ ಪಕ್ಕಕ್ಕೆ ಇಟ್ಟುಬಿಡಿ.ಸ್ವಲ್ಪ ಸಮಯದ ನಂತರ ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಚಪಾತಿಯ ಹದಕ್ಕೆ ಲಟ್ಟಿಸಿಕೊಳ್ಳಿ. ನಂತರ ಕಾದ ತವಾದ ಮೇಲೆ ಸ್ವಲ್ಪ ಎಣ್ನೆಯನ್ನು ಹಾಕಿ ಅದನ್ನು ಗರಿ ಗರಿ ಆಗುವವರೆಗೆ ಬೇಯಿಸಿಕೊಳ್ಳಿ.

ಪರಾಠವನ್ನು ತಯಾರಿಸುವ ರೀತಿಯಲ್ಲೇ ಇದನ್ನು ತಯಾರಿಸಬಹುದು. ನೀವು ಕೂಡಾ ಬೆಳಗ್ಗಿನ ಉಪಹಾರಕ್ಕೆ ಈ ಆರೋಗ್ಯಕರ ಸಿಂಪಲ್ ರೆಸಿಪಿಯನ್ನು ತಯಾರಿಸಿ. ಕೇವಲ 10 ನಿಮಿಷಗಳಲ್ಲಿ ನೀವು ಈ ಥೆಪ್ಲಾವನ್ನು ತಯಾರಿಸಬಹುದಾಗಿದೆ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: