Makar Sankranti 2023: ಮಕರ ಸಂಕ್ರಾಂತಿ ಯಾವಾಗ ಆಚರಿಸಬೇಕು, ನಿಖರ ದಿನಾಂಕ ಮತ್ತು ಪೂಜೆ ಮುಹೂರ್ತ ಇಲ್ಲಿದೆ
ಮಕರ ಸಂಕ್ರಾಂತಿಯು ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ. ಇದಕ್ಕೆ ವಿಶೇಷವಾದ ಮಹತ್ವವಿದೆ ಹಾಗೂ ಈ ಹಬ್ಬವನ್ನು ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಜನರು ಹೊಸ ಬೆಳೆಗಳನ್ನು ಪೂಜಿಸುವ ಮತ್ತು ಸಂತೋಷದಿಂದ ಹಂಚಿಕೊಳ್ಳುವುದರೊಂದಿಗೆ ಈ ಹಬ್ಬ ಸುಗ್ಗಿಯ ಋತುವಿನ ಆರಂಭವನ್ನು ಸೂಚಿಸುತ್ತದೆ.
ಮಕರ ಸಂಕ್ರಾಂತಿಯನ್ನು ಜನವರಿ 14 ಅಥವಾ 15 ರಂದು ಲೋಹ್ರಿಯ ಒಂದು ದಿನದ ನಂತರ ಆಚರಿಸಲಾಗುವ ಈ ಮಂಗಳಕರ ಹಿಂದೂ ಹಬ್ಬದ ನಿಖರವಾದ ದಿನಾಂಕ ಮುಹೂರ್ತಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನಾವು ನೀಡುತ್ತೇವೆ. ಮಕರ ಸಂಕ್ರಾಂತಿಯು ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ. ಇದಕ್ಕೆ ವಿಶೇಷವಾದ ಮಹತ್ವವಿದೆ ಹಾಗೂ ಈ ಹಬ್ಬವನ್ನು ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಜನರು ಹೊಸ ಬೆಳೆಗಳನ್ನು ಪೂಜಿಸುವ ಮತ್ತು ಸಂತೋಷದಿಂದ ಹಂಚಿಕೊಳ್ಳುವುದರೊಂದಿಗೆ ಈ ಹಬ್ಬ ಸುಗ್ಗಿಯ ಋತುವಿನ ಆರಂಭವನ್ನು ಸೂಚಿಸುತ್ತದೆ.
ದೃಕ್ ಪಂಚಾಂಗದ ಪ್ರಕಾರ, ತಮಿಳುನಾಡಿನಲ್ಲಿ ಮಕರ ಸಂಕ್ರಾಂತಿಯನ್ನು ಪೊಂಗಲ್ ಎಂದು ಆಚರಿಸಲಾಗುತ್ತದೆ. ಪೂರ್ವ ಉತ್ತರ ಪ್ರದೇಶದಲ್ಲಿ ಖಿಚಡಿ, ಗುಜರಾತ್ ಮತ್ತು ರಾಜಸ್ಥಾನದಲ್ಲಿ ಉತ್ತರಾಯಣ ಹಾಗೇ ಹರಿಯಾಣ ಮತ್ತು ಪಂಜಾಬ್‍ನಲ್ಲಿ ಇದನ್ನು ಮಾಘಿ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯನ್ನು ಜನವರಿ ತಿಂಗಳಲ್ಲಿ ಆಚರಿಸಲಾಗುತ್ತದೆಯಾದರೂ, 2023ರಲ್ಲಿ ಮಕರ ಸಂಕ್ರಾಂತಿಯ ನಿಖರವಾದ ದಿನಾಂಕದ ಬಗ್ಗೆ ಕೆಲವು ಅನುಮಾನಗಳಿವೆ.
ಇದನ್ನು ಓದಿ:Makar Sankranti: ಮಕರ ಸಂಕ್ರಾಂತಿ ಹಬ್ಬದ ಮಹತ್ವ ಮತ್ತು ಈ ವರ್ಷ ಸಂಕ್ರಾಂತಿ ಜನವರಿ 15 ಏಕೆ?
ಮಕರ ಸಂಕ್ರಾಂತಿ ಜನವರಿ 14 ಅಥವಾ 15 ?
ಲೋಹ್ರಿಯ ನಂತರ ಒಂದು ದಿನ ಮಕರ ಸಂಕ್ರಾಂತಿಯನ್ನು ಗುರುತಿಸಲಾಗುತ್ತದೆ. ಈ ವರ್ಷ ಈ ಹಬ್ಬವು ಭಾನುವಾರ, 15 ರಂದು ಬರುತ್ತದೆ. ದೃಕ್ ಪಂಚಾಂಗದ ಪ್ರಕಾರ ಸಂಕ್ರಾಂತಿ ತಿಥಿಯು 8:57, ಜನವರಿ 14 ಕ್ಕೆ ಇರುತ್ತದೆ. ಹಾಗೇ ಮಕರ ಸಂಕ್ರಾಂತಿಯ ಪುಣ್ಯ ಕಾಲವು ಬೆಳಗ್ಗೆ 7:15 ರಿಂದ ಸಂಜೆ 5:46 ರವರೆಗೆ ಇರುತ್ತದೆ. ಹಾಗೂ ಮಕರ ಸಂಕ್ರಾಂತಿಯ ಮಹಾ ಪುಣ್ಯ ಕಾಲ ಬೆಳಗ್ಗೆ 7:15 ಕ್ಕೆ ಪ್ರಾರಂಭವಾಗಿ ರಾತ್ರಿ 9:00 ಕ್ಕೆ ಕೊನೆಗೊಳ್ಳುತ್ತದೆ.
ಮಕರ ಸಂಕ್ರಾಂತಿಯನ್ನು ಹೇಗೆ ಆಚರಿಸಲಾಗುತ್ತದೆ?
ಹಿಂದೂಗಳು ಈ ಅವಧಿಯನ್ನು ಮಂಗಳಕರವೆಂದು ಪರಿಗಣಿಸಿ ಮಕರ ಸಂಕ್ರಾಂತಿಯನ್ನು ಆಚರಿಸುತ್ತಾರೆ. ಹೆಚ್ಚಿನ ಪ್ರದೇಶಗಳಲ್ಲಿ ಸಂಕ್ರಾಂತಿಯ ಹಬ್ಬಗಳು ಎರಡರಿಂದ ನಾಲ್ಕು ದಿನಗಳವರೆಗೆ ಇರುತ್ತದೆ. ಹಬ್ಬದ ಸಮಯದಲ್ಲಿ ಜನರು ಸೂರ್ಯ ದೇವರನ್ನು ಪೂಜಿಸುತ್ತಾರೆ. ಹಾಗೂ ಪವಿತ್ರ ತೀರ್ಥ ಸ್ನಾನ ಮಾಡುತ್ತಾರೆ ಹಾಗೂ ನಿರ್ಗತಿಗರಿಗೆ ದಾನವನ್ನು ಮಾಡುತ್ತಾರೆ. ಗಾಳಿಪಟಗಳನ್ನು ಹಾರಿಸುತ್ತಾರೆ, ಎಳ್ಳು ಬೆಲ್ಲದ ಸಿಹಿ ಸಿಹಿ ತಿಂಡಿಗಳನ್ನು ತಯಾರಿಸುತ್ತಾರೆ ಹಾಗೂ ಜಾನುವಾರು ಹಾಗೂ ಬೆಲೆಗಳಿಗೆ ಪೂಜೆ ಮಾಡುತ್ತಾರೆ. ಹೀಗೆ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಚರಣೆ ರೂಢಿಯಲ್ಲಿದೆ.
ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:27 pm, Mon, 9 January 23