Updated on: Jan 15, 2022 | 12:37 PM
ಮಕರ ಸಂಕ್ರಾಂತಿಯನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ವಿವಿಧ ರಾಜ್ಯಗಳಲ್ಲಿ ಈ ಹಬ್ಬಕ್ಕೆ ಬೇರೆ ಬೇರೆ ಹೆಸರುಗಳಿವೆ.
ಉತ್ತರ ಪ್ರದೇಶದಲ್ಲಿ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಅಥವಾ ಕಿಚೇರಿ ಎಂದು ಕರೆಯಲಾಗುತ್ತದೆ.
ಆಂಧ್ರಪ್ರದೇಶದಲ್ಲಿ ಮಕರ ಸಂಕ್ರಾಂತಿಯನ್ನು ಪೆದ್ದ ಪಾಂಡುಗ ಎಂದು ಕರೆಯುತ್ತಾರೆ.
ತೆಲಂಗಾಣ ಮತ್ತು ಮಧ್ಯಪ್ರದೇಶದಲ್ಲಿ ಮಕರ ಸಂಕ್ರಾಂತಿಯನ್ನು ಸಂಕ್ರಾಂತಿ ಅಥವಾ ಉತ್ತರಾಯಣ ಎಂದು ಆಚರಿಸಲಾಗುತ್ತದೆ.
ಒಡಿಶಾದಲ್ಲಿ ಮಕರ ಚೌಲಾ ಎಂದು ಆಚರಿಸಲಾಗುತ್ತದೆ.
ಬಿಹಾರದಲ್ಲಿ ಮಕರ ಸಂಕ್ರಾಂತಿಯನ್ನು ತಿಲ್ ಸಕ್ರತ್ ಅಥವಾ ದಹಿ ಚುರಾ ಎಂದು ಕರೆಯಲಾಗುತ್ತದೆ.
ಮಕರವಿಳಕ್ಕುವನ್ನು ಕೇರಳದಲ್ಲಿ ಮಕರ ಸಂಕ್ರಾಂತಿ ಎಂದು ಆಚರಿಸಿದರೆ, ಕರ್ನಾಟಕ ಇದನ್ನು ಸುಗ್ಗಿ ಎಂದು ಆಚರಿಸುತ್ತದೆ.
ತಮಿಳುನಾಡಿನಲ್ಲಿ ಇದನ್ನು ಪೊಂಗಲ್ ಎಂದು ಆಚರಿಸಲಾಗುತ್ತದೆ. ನೆರೆಯ ರಾಷ್ಟ್ರ ಶ್ರೀಲಂಕಾ ಕೂಡ ಈ ದಿನದಂದು ಪೊಂಗಲ್ ಎಂದು ಆಚರಿಸುತ್ತಾರೆ.
ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಮಕರ ಸಂಕ್ರಾಂತಿಯನ್ನು ಮಾಘಿ ಸಂಕ್ರಾಂತ ಅಥವಾ ಹಲ್ದಿ ಕುಂಕುಮ್ ಎಂದು ಆಚರಿಸುತ್ತಾರೆ.
ಗುಜರಾತ್ನಲ್ಲಿ ಮಕರ ಸಂಕ್ರಾತಿಯ ಈ ದಿನ ಗಾಳಿಪಟಗಳ ಹಬ್ಬ ಅಥವಾ ಉತ್ತರಾಯಣ ಎಂದು ಆಚರಿಸುತ್ತದೆ. ಹಿಮಾಚಲ ಪ್ರದೇಶ ಇದನ್ನು ಮಾಘ ಸಾಜಿ ಎಂದು ಉಲ್ಲೇಖಿಸುತ್ತದೆ.
ಪಂಜಾಬ್‌ನಲ್ಲಿ ಮಕರ ಸಂಕ್ರಾಂತಿಯನ್ನು ಮಾಘಿ ಎಂದು ಕರೆಯಲಾಗುತ್ತದೆ.
ಅಸ್ಸಾಂನಲ್ಲಿ ಈ ದಿನವನ್ನು ಮಾಗ್ ಬಿಹು ಅಥವಾ ಭೋಗಾಲಿ ಬಿಹು ಎಂದು ಆಚರಿಸಲಾಗುತ್ತದೆ.
ಪಶ್ಚಿಮ ಬಂಗಾಳವು ತೆಂಗಿನಕಾಯಿ, ಅಕ್ಕಿ ಹಿಟ್ಟು ಮತ್ತು ಬೆಲ್ಲದಿಂದ ಮಾಡಿದ ಸಾಂಪ್ರದಾಯಿಕ ಸಿಹಿತಿಂಡಿಗಳೊಂದಿಗೆ ಪೌಶ್ ಸಂಕ್ರಾಂತಿಯನ್ನು ಆಚರಿಸುತ್ತದೆ. ಬಾಂಗ್ಲಾದೇಶ ಕೂಡ ಈ ದಿನದಂದು ಪೌಶ್ ಸಂಕ್ರಾಂತಿ ಎಂಬ ಹೆಸರಿನಿಂದ ಆಚರಿಸುತ್ತದೆ.
ಸಿಂಗಾಪುರ ಮತ್ತು ಮಲೇಷ್ಯಾ ಈ ದಿನವನ್ನು ಪೊಂಗಲ್ ಎಂದು ಉಲ್ಲೇಖಿಸುತ್ತದೆ.
ಮಕರ ಸಂಕ್ರಾತಿಯನ್ನು ವಿವಿಧ ಹೆಸರುಗಳಲ್ಲಿ ಆಚರಿಸಲಾಗುತ್ತದೆಯಾದರೂ, ಮಕರ ಸಂಕ್ರಾಂತಿಯು ಸುಗ್ಗಿಯ ಆಚರಣೆಯಾಗಿದೆ ಮತ್ತು ಸೂರ್ಯ ದೇವರನ್ನು ಪೂಜಿಸಲು ಮೀಸಲಾದ ದಿನವಾಗಿದೆ.