ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ನನಗೆ ಕಾಟ ಕೊಟ್ಟಿಲ್ಲ: ಸಂತ್ರಸ್ತ ಮಹಿಳೆ ಸ್ಪಷ್ಟನೆ
ನಟ ಮಡೆನೂರು ಮನು ವಿರುದ್ಧ ಅತ್ಯಾಚಾರದ ಆರೋಪ ಮಾಡಿರುವ ಮಹಿಳೆಯು ಇನ್ನೋರ್ವ ನಟ ಅಪ್ಪಣ್ಣ ಮೇಲೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಪ್ರತಿಕ್ರಿಯೆ ನೀಡಿದ್ದಾರೆ. ಆಡಿಯೋದಲ್ಲಿ ಮಾತನಾಡಿರುವುದು ನಿಜವಲ್ಲ, ಮನು ಹೇಳಿದ್ದರಿಂದ ಆ ರೀತಿ ತಾವು ಮಾಡಿದ್ದಾಗಿ ಮಹಿಳೆ ಹೇಳಿದ್ದಾರೆ.
ಮಡೆನೂರು ಮನು (Madenur Manu) ವಿರುದ್ಧ ಅತ್ಯಾಚಾರದ ಆರೋಪ ಮಾಡಿರುವ ಮಹಿಳೆಯು ಇನ್ನೋರ್ವ ನಟ ಅಪ್ಪಣ್ಣ (Appanna) ಮೇಲೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಪ್ರತಿಕ್ರಿಯೆ ನೀಡಿದ್ದಾರೆ. ಆಡಿಯೋದಲ್ಲಿ ಮಾತನಾಡಿರುವುದು ನಿಜವಲ್ಲ, ಮನು ಹೇಳಿದ್ದರಿಂದ ಆ ರೀತಿ ತಾವು ಮಾಡಿದ್ದಾಗಿ ಮಹಿಳೆ ಹೇಳಿದ್ದಾರೆ. ‘ಮನು ಎಂದರೆ ನಾನು ಜೀವ ಬಿಡುತ್ತಿದ್ದೆ. ಅಪ್ಪಣ್ಣ ನನಗೆ ಯಾವುದೇ ರೀತಿಯಲ್ಲಿ ಕಾಟ ಕೊಡುತ್ತಿರಲಿಲ್ಲ. ಅಪ್ಪಣ್ಣ ಬಗ್ಗೆ ಸುಳ್ಳು ಹೇಳೋಕೆ ನನಗೂ ಕಷ್ಟ ಆಗುತ್ತಿತ್ತು. ತುಂಬಾ ಅತ್ತು ಬಿಟ್ಟೆ ನಾನು. ಅವನು ತಪ್ಪು ಮಾಡಿಲ್ಲ. ನನಗೆ ಅವನು ಬುದ್ಧಿ ಹೇಳುತ್ತಿದ್ದ. ಆರ್ಆರ್ ನಗರಕ್ಕೆ ಹೋಗಿ ಅವನ ಕಾಲಿಗೆ ಬಿದ್ದು ನಾನು ಕ್ಷಮೆ ಕೇಳಿದ್ದೇನೆ’ ಎಂದು ಸಂತ್ರಸ್ಥ ಮಹಿಳೆ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.