AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಶಾನ್ಯ ರಾಜ್ಯಗಳು ಭಾರತದ ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ

ಈಶಾನ್ಯ ರಾಜ್ಯಗಳು ಭಾರತದ ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ

ಸುಷ್ಮಾ ಚಕ್ರೆ
|

Updated on:May 23, 2025 | 5:11 PM

ಜಾಗತಿಕ ಮತ್ತು ದೇಶೀಯ ಹೂಡಿಕೆದಾರರನ್ನು ಆಕರ್ಷಿಸುವ ಗುರಿಯನ್ನು ಹೊಂದಿರುವ ರೈಸಿಂಗ್ ಈಶಾನ್ಯ ಹೂಡಿಕೆದಾರರ ಶೃಂಗಸಭೆಯು, ಈಶಾನ್ಯದ ಅಗಾಧ ಆರ್ಥಿಕ ಸಾಮರ್ಥ್ಯವನ್ನು ಎತ್ತಿ ತೋರಿಸಲು ಪ್ರಯತ್ನಿಸಿತು. ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳ ಪ್ರದೇಶವು ಸಾವಿರಾರು ವರ್ಷಗಳಿಂದ ಭಾರತದ ಪ್ರಾಚೀನ ಸಂಸ್ಕೃತಿ ಮತ್ತು ವಾಣಿಜ್ಯ ಚೈತನ್ಯದ ತೊಟ್ಟಿಲು ಎಂದು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಈಶಾನ್ಯದ 8 ರಾಜ್ಯಗಳು ದಕ್ಷಿಣ ಏಷ್ಯಾದ ಜಾಗತಿಕ ವ್ಯಾಪಾರ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದ್ದವು, ಪೂರ್ವ ಮತ್ತು ಪಶ್ಚಿಮವನ್ನು ಭೂ ಮತ್ತು ಜಲ ಮಾರ್ಗಗಳ ಮೂಲಕ ಸಂಪರ್ಕಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತಿದ್ದವು ಎಂದು ಅವರು ಹೇಳಿದ್ದಾರೆ.

ನವದೆಹಲಿ, ಮೇ 23: ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ರೈಸಿಂಗ್ ಈಶಾನ್ಯ ಹೂಡಿಕೆದಾರರ ಶೃಂಗಸಭೆಯ (Rising Northeast Investors Summit) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಈಶಾನ್ಯ ಪ್ರದೇಶದ ಸಂವಹನ ಮತ್ತು ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (jyotiraditya Scindia) ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕಳೆದ ದಶಕದಲ್ಲಿ ಈಶಾನ್ಯ ರಾಜ್ಯಗಳಲ್ಲಿ ಉಂಟಾಗಿರುವ ಪ್ರಗತಿಯನ್ನು ಎತ್ತಿ ತೋರಿಸಿದ್ದಾರೆ. ಈ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಈಶಾನ್ಯ ಪ್ರದೇಶಕ್ಕೆ ಒಟ್ಟು ಬಜೆಟ್ ಬೆಂಬಲವು ಕಳೆದ 10 ವರ್ಷಗಳಲ್ಲಿ ಕೇವಲ ಶೇ. 10ರಿಂದ ಸುಮಾರು 6.75 ಲಕ್ಷ ಕೋಟಿ ರೂ.ಗಳ ಹೂಡಿಕೆಗೆ ಅನುವು ಮಾಡಿಕೊಡುವವರೆಗೆ ಭಾರೀ ಏರಿಕೆ ಕಂಡಿದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಘೋಷಿಸಿದ್ದಾರೆ.

ಈ ಮಹತ್ವದ ಅನುದಾನ ಹಂಚಿಕೆಯು, ಪ್ರದೇಶದ ಬೆಳವಣಿಗೆಯ ಪಥವನ್ನು ಪುನರ್ ವ್ಯಾಖ್ಯಾನಿಸುವಲ್ಲಿ ಮತ್ತು ಅದನ್ನು ಅವಕಾಶಗಳ ಭೂಮಿಯಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಳೆದ 10 ವರ್ಷಗಳಲ್ಲಿ ಈಶಾನ್ಯ ಪ್ರದೇಶದಲ್ಲಿ ಸುಮಾರು 6.75 ಲಕ್ಷ ಕೋಟಿ ರೂ.ಗಳ ಹೂಡಿಕೆಯನ್ನು ಸಕ್ರಿಯಗೊಳಿಸಲು ಒಟ್ಟು ಬಜೆಟ್ ಬೆಂಬಲವನ್ನು ಶೇ. 10ರಿಂದ ಹೆಚ್ಚಿಸಿದವರು ನಮ್ಮ ಪ್ರಧಾನ ಮಂತ್ರಿ ಮೋದಿ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: May 23, 2025 05:05 PM