ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
Arjun Janya: ಅರ್ಜುನ್ ಜನ್ಯ ಕನ್ನಡ ಚಿತ್ರರಂಗದ ಬಲು ಬೇಡಿಕೆಯ ಸಂಗೀತ ನಿರ್ದೇಶಕ. ಪರಭಾಷೆ ಸಿನಿಮಾಗಳಿಂದಲೂ ಅವರಿಗೆ ಆಫರ್ ಇದೆ. ಇಷ್ಟು ಬ್ಯುಸಿಯಾಗಿರುವ ಹೊತ್ತಿನಲ್ಲೇ ಅವರು ಸಿನಿಮಾ ನಿರ್ದೇಶನಕ್ಕಿಳಿದು ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಅಂದಹಾಗೆ ಯಾರ ಬೆಂಬಲದಿಂದ ತಾವು ಸಿನಿಮಾ ನಿರ್ದೇಶನ ಮಾಡಿದ್ದು ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ.
ಅರ್ಜುನ್ ಜನ್ಯ (Arjun Janya), ಕನ್ನಡ ಚಿತ್ರರಂಗದ ಅತ್ಯಂತ ಬೇಡಿಕೆಯ ಸಂಗೀತ ನಿರ್ದೇಶಕ. ವೃತ್ತಿಯ ಔನ್ನತ್ಯದಲ್ಲಿರುವಾಗಲೇ ಸಿನಿಮಾ ನಿರ್ದೇಶನಕ್ಕೆ ಅರ್ಜುನ್ ಜನ್ಯ ಕೈ ಹಾಕಿದ್ದು, ಸಿನಿಮಾದ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರುಗಳನ್ನು ಮುಖ್ಯ ಪಾತ್ರದಲ್ಲಿ ಹಾಕಿಕೊಂಡು ‘45’ ಹೆಸರಿನ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಆಗಸ್ಟ್ 14 ಕ್ಕೆ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಆಗಲಿದೆ. ಅಷ್ಟಕ್ಕೂ ಯಾರ ಬೆಂಬಲದಿಂದ ಸಿನಿಮಾ ನಿರ್ದೇಶಕನಾದದ್ದು ಎಂಬುದನ್ನು ಅರ್ಜುನ್ ಜನ್ಯ ಹೇಳಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 23, 2025 03:16 PM
Latest Videos