AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ಸೀಮಂತದಂದೇ ಪತಿಗೆ ಹೃದಯಾಘಾತ: ಮಗುವಿನ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ

ತಾಳಿ ಕಟ್ಟಿ ಹೊಸ ಬದುಕಿನ ಸಂಭ್ರಮದಲ್ಲಿದ್ದ ವರ ಕೆಲವೇ ನಿಮಿಷಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ವಿದ್ರಾವಕ ಘಟನೆ ಮೊನ್ನೇ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿತ್ತು. ಈ ಸುದ್ದಿ ಕೇಳಿ ಎಲ್ಲರೂ ಮಮ್ಮಲ ಮರುಗಿದ್ದರು. ಈ ಘಟನೆ ಮಾಸುವ ಮುನ್ನವೇ ಮಂಗಳೂರಿನಲ್ಲಿ ಪತ್ನಿಯ ಸೀಮಂತದಂದೇ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಇದರಿಂದ ಮಗುವಿನ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕ ಛಾಯೆ ಆವರಿಸಿದೆ.

ಪತ್ನಿ ಸೀಮಂತದಂದೇ ಪತಿಗೆ ಹೃದಯಾಘಾತ: ಮಗುವಿನ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ
Satish
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on:May 23, 2025 | 9:07 PM

Share

ಮಂಗಳೂರು, (ಮೇ 23): ದಂಪತಿ ಇಬ್ಬರೂ ಮಗುವಿನ ಕನಸು ಕಂಡಿದ್ದರು. ಮಗು ಆಗಮನಕ್ಕೂ ಮುನ್ನ ಮನೆಯಲ್ಲಿ ಮನೆಯಲ್ಲಿ ಸೀಮಂತ ಕಾರ್ಯದ (baby shower function) ಸಿದ್ಧತೆಯಲ್ಲಿ ಎಲ್ಲರೂ ತೊಡಗಿದ್ದರು. ಆದ್ರೆ, ದುರ್ವೈವ ಹೆಂಡ್ತಿಯ ಸೀಮಂತ ಸಂಭ್ರಮದಲ್ಲೇ ಪತಿ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಇಂತಹ ಹೃದಯ ವಿದ್ರಾವಕ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಮಿತ್ತನಡ್ಕ ಎಂಬಲ್ಲಿ ನಡೆದಿದೆ. ಸೀಮಂತದಲ್ಲೇ ಕಾರ್ಯಕ್ರಮದಲ್ಲೆ ಪತಿ ಸಾವನ್ನಪ್ಪಿರುವುದರಿಂದ ಪತ್ನಿಗೆ ಸಿಡಿಲು ಅಪ್ಪಳಿಸಿದಂತಾಗಿದೆ. ಪತಿಯ ಸಾವಿನಿಂದ ತುಂಬು ಗರ್ಭಿಣಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಪಿಕ್‌ಅಪ್ ವಾಹನ ಚಾಲಕ ಸತೀಶ್‌ (33) ಮೃತಪಟ್ಟ ದುರ್ದೈವಿ.

7 ತಿಂಗಳು ತುಂಬಿದ ತುಂಬು ಗರ್ಭಿಣಿಗೆ ಇಂದು ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದರೆ ವಿಧಿಯ ಲೆಕ್ಕಾಚಾರವೇ ಬೇರೆ ಇತ್ತು. ತನ್ನ ಪತ್ನಿಯ ಸೀಮಂತ ಸಂಭ್ರಮದಲ್ಲಿ ಕೈಕಾಲಿಗೆ ರೆಕ್ಕೆ ಕಟ್ಟಿಕೊಂಡು ಅತ್ತಿಂದಿತ್ತ ಓಡಾಡುತ್ತಾ ಬಂದವರನ್ನೆಲ್ಲಾ ನಗುಮೊಗದಿಂದ ಸ್ವಾಗತಿಸುತ್ತಿದ್ದ ಸತೀಶ್​ಗೆ ಏಕಾಏಕಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಕುಟುಂಬಸ್ಥರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸತೀಶ್ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ: ಕಲ್ಯಾಣಮಂಟಪದಲ್ಲೇ ವರನಿಗೆ ಹೃದಯಾಘಾತ, ತಾಳಿ ಕಟ್ಟಿಸಿಕೊಂಡ 15 ನಿಮಿಷದಲ್ಲೇ ವಿಧವೆಯಾದ ನವವಧು

ದಂಪತಿಗೆ ಇನ್ನೇನು ಕೇವಲ ಎರಡು ತಿಂಗಳಲ್ಲೇ ಮುದ್ದಾದ ಮಗುವೊಂದು ಭೂಮಿಗೆ ಕಾಲಿಡಬೇಕಿತ್ತು. ತನ್ನ ಮಗುವಿನೊಂದಿಗೆ ಸತೀಶ್​ ಮುದ್ದಾಡಬೇಕಿತ್ತು. ಆದ್ರೆ, ವಿಧಿಯಾಟ ಬೇರೆಯೇ ಆಗಿದೆ. ಮಗು ಜನ್ಮ ತಾಳುವ ಮುನ್ನವೇ ತಂದೆ ಬಾರದಲೋಕಕ್ಕೆ ಹೋಗಿದ್ದಾರೆ. ಇದರಿಂದ ಹುಟ್ಟುವ ಮಗುವಿಗೆ ತಂದೆಯ ಪ್ರೀತಿ ಸಿಗದಂತಾಗಿದೆ.

ಇದನ್ನೂ ಓದಿ
Image
ತಾಳಿ ಕಟ್ಟುವ ವೇಳೆ ಮದ್ವೆ ಬೇಡ ಎಂದ ವಧು, ಮದುಮಗ ಕಣ್ಣೀರು: ಆಗಿದ್ದೇನು?
Image
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
Image
ಬಾತ್‌ರೂಂನಲ್ಲೇ ಯುವತಿಗೆ ಹೃದಯಾಘಾತ, ನಿಂತಲ್ಲೇ ಕುಸಿದು ಬಿದ್ದು ಯುವಕ ಸಾವು
Image
ವರನಿಗೆ ಹೃದಯಾಘಾತ, ತಾಳಿ ಕಟ್ಟಿಸಿಕೊಂಡ 15 ನಿಮಿಷದಲ್ಲೇ ವಿಧವೆಯಾದ ನವವಧು

ತಾಳಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದ ವರ

ಇನ್ನು ಬಾಗಲಕೋಟೆಯಲ್ಲಿ ತಾಳಿ ಕಟ್ಟಿದ್ದ ಕೇವಲ 15 ನಿಮಿಷದಲ್ಲೇ ಮದುಮಗ ಕಲ್ಯಾಣ ಮಂಟಪದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.  ಬಾಗಲಕೋಟೆ ‌ಜಿಲ್ಲೆಯ ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣಮಂಟಪದಲ್ಲಿ ಶನಿವಾರ (ಮೇ.17) ಪ್ರವೀಣ ಕುರ್ನೆಯವರ ವಿವಾಹವಾಗಿತ್ತು. ಆದರೆ, ಮದುವೆ ಸಂಭ್ರಮದ ಕೆಲವೇ ಕ್ಷಣದಲ್ಲಿ ಸೂತಕದ ಛಾಯೆ ಆವರಿಸಿದೆ. ಏಕೆಂದರೆ ತಾಳಿ ಕಟ್ಟಿದ 15 ನಿಮಿಷದಲ್ಲೇ ಪ್ರವೀಣ ಹೃದಯಾಘಾತದಿಂದ ಮೃತಪಟ್ಟಿದ್ದ.

ಹಾಸನದಲ್ಲಿ ಯುವಕ ಯುವತಿ ಸಾವು

ಮತ್ತೊಂದೆಡೆ ಹಾಸನದ ಯುವಕ ಹಾಗೂ ಯುವತಿ ಸಹ ಹೃದಯಘಾತದಿಂದ ಸಾವನ್ನಪ್ಪಿದ್ದರು. ಹಾಸನ (Hassan) ಜಿಲ್ಲೆಯ ಎರಡು ಪ್ರತ್ಯೇಕ ಘಟನೆಗಳಲ್ಲಿ ಯುವಕ, ಯುವತಿ ಹೃದಯಾಘಾತದಿಂದ (Cardiac Arrest) ಸಾವನ್ನಪ್ಪಿದ್ದಾರೆ. ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ಯುವತಿ ಸಂಧ್ಯಾ (19) ಹಾಗೂ ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ಯುವಕ ಅಭಿಷೇಕ್ ಹೃದಯಾಘಾತಕ್ಕೆ (Heart Attack) ಬಲಿಯಾಗಿದ್ದರು. ಸಂಧ್ಯಾ ಬಾತ್​ರೂಮ್​ನಲ್ಲೇ ಕುಸಿದುಬಿದ್ದು, ಸಾವನ್ನಪ್ಪಿದ್ದರೆ, ಕ್ಯಾಬ್​ ಚಾಲಕನಾಗಿದ್ದ ಅಭಿಷೇಕ್, ಬೆಂಗಳೂರಿನಲ್ಲಿ ನಿಂತಲ್ಲೇ ಏಕಾಏಕಿ ಕುಸಿದುಬಿದ್ದು ಕೊನೆಯುಸಿರೆಳೆದಿದ್ದ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:07 pm, Fri, 23 May 25

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್