AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಳಿ ಕಟ್ಟುವ ವೇಳೆ ಮದ್ವೆ ಬೇಡ ಎಂದ ವಧು, ಮದುಮಗ ಕಣ್ಣೀರು: ಹಾಸನದಲ್ಲಿ ಆಗಿದ್ದೇನು?

ಮಂಗಳ ವಾದ್ಯ ಮೊಳಗಿತ್ತು, ಧಾರಾ ಮುಹೂರ್ತಕ್ಕಾಗಿ ಶಾಸ್ತ್ರಗಳು ನೆರವೇರಿತ್ತು, ಮುತ್ತೈದೆಯರು ಹರಸಿ ಹಾರೈಸಿಯೂ ಆಗಿತ್ತು, ಇನ್ನೇನು ತಾಳಿಕಟ್ಟಲು ವರ ಮಂಗಳ ಸೂತ್ರ ಕೈಗೆತ್ತಿಕೊಂಡಿದ್ದ, ಸಂಭ್ರಮದಲ್ಲಿ ನಲಿಯುತ್ತಿದ್ದ ಮಧು ಮಗಳು ಅದ್ಯಾಕೋ ಏಕಾಏಕಿ ಮಂಕಾಗಿದ್ದು, ಇನ್ನೇನು ತಲೆ ಬಗ್ಗಿಸಿಕೊಂಡು ತಾಳಿಕಟ್ಟಿಸಿಕೊಳ್ಳಬೇಕಿದ್ದವಳು ಈ ಮದುವೆ ನನಗೆ ಬೇಡ ಎಂದು ಎದ್ದು ನಿಂತಿದ್ದಾಳೆ. ಇದರಿಂದ ಮದುವೆ ಸಂಭ್ರದಲ್ಲಿ ಸೇರಿದ್ದ ಜನ ಒಂದು ಕ್ಷಣ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ವಧು ಈ ಮದುವೆ ಬೇಡ ಎಂದಿದ್ಯಾಕೆ ಎನ್ನುವ ವಿವರ ಇಲ್ಲಿದೆ.

ತಾಳಿ ಕಟ್ಟುವ ವೇಳೆ ಮದ್ವೆ ಬೇಡ ಎಂದ ವಧು, ಮದುಮಗ ಕಣ್ಣೀರು: ಹಾಸನದಲ್ಲಿ ಆಗಿದ್ದೇನು?
Hassan Marriage
ಮಂಜುನಾಥ ಕೆಬಿ
| Updated By: ರಮೇಶ್ ಬಿ. ಜವಳಗೇರಾ|

Updated on:May 23, 2025 | 4:18 PM

Share

ಹಾಸನ, (ಮೇ 23): ತಾಳಿ ಕಟ್ಟುವ ವೇಳೆ ವಧು (bride) ತಲೆ ಅಲ್ಲಾಡಿಸಿ ನನಗೆ ಈ ಮದುವೆ (marriage ) ಬೇಡ ಎಂದ ಘಟನೆ ಹಾಸನದ (Hassan) ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ತಾಳಿ ಕಟ್ಟೋ ಮುಹೂರ್ತಕ್ಕೂ ಮುನ್ನ ಯುವತಿಗೆ ಒಂದು ಫೋನ್ ಕರೆ ಬಂದಿದೆ. ಆಗ ವಧು ತಕ್ಷಣವೇ ನನಗೆ ಈ ಮದುವೆ ಬೇಡ ಎಂದು ವಧು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೆತ್ತವರು, ಸಂಬಂಧಿಕರು ಯಾರು ಏನೇ ಹೇಳಿದರು ಕೇಳದ ವಧು ರೂಂಗೆ ಹೋಗಿ ಮದುವೆ ಬೇಡವೇ ಬೇಡ ಎಂದು ಹಠ ಹಿಡಿದಿದ್ದಾರೆ. ತಾಳಿ ಕೈಯಲ್ಲಿ ಹಿಡಿದು ಮಧು ಮಗ ಮಾಡಿದ ಮನವೊಲಿಕೆಗೂ ಆಕೆ ಮನಸ್ಸು ಕರಗಲಿಲ್ಲ. ವಧು ಮದುವೆ ಬೇಡ ಎಂದಾಗ ಕೈಯಲ್ಲಿ ತಾಳಿ ಹಿಡಿದಿದ್ದ ವರ ಯಾಕೆ ಮದುವೆ ಬೇಡ ಎಂದು ಕೇಳಿದ್ದಾನೆ. ಕೊನೆಗೆ ಹಠ ಹಿಡಿದ ಬೆನ್ನಲ್ಲೇ ವರ ಕೂಡ ನನಗೂ ಮದುವೆ ಬೇಡ ಎನ್ನುತ್ತಾ ಕಣ್ಣೀರು ಹಾಕಿದ್ದಾನೆ. ಮಗಳು ಮದುವೆ ಬೇಡ ಎಂದಿದ್ದಕ್ಕೆ ಪೋಷಕರು ಸಹ ಕಣ್ಣೀರಿಟ್ಟಿದ್ದಾರೆ. ಇದರೊಂದಿಗೆ ಧಾರಾಮುಹೂರ್ತದ ಸಮಯದಲ್ಲಿ ಬಂದ ಅದೊಂದು ಫೋನ್ ಕರೆ ಮದುವೆಯನ್ನೇ ಮುರಿದು ಹಾಕಿದೆ.

ಮೂರು ತಿಂಗಳ ಹಿಂದೆ ನಿಶ್ಚಯವಾಗಿ ಇಂದು ಮುಹೂರ್ತ ನಡೆಸೋ ವೇಳೆಯಲ್ಲಿ ಮಧು ಮಗಳು ಮಾಡಿದ ಅವಾಂತರ ಪೋಷಕರಿಗೆ ಆಘಾತ ತಂದರೆ ಮದುವೆಗೆ ಬಂದವರು ಕಂಗೆಟ್ಟು ಹೋಗಿದ್ದಾರೆ. ಗದ್ದಲ ಗಲಾಟೆ ನಡುವೆ ಮದುವೆಯೇ ನಿಂತು ಹೋಗಿದೆ. ಇನ್ನು ಪೊಲೀಸರ ಮಧ್ಯಸ್ಥಿತಿಕೆಯಲ್ಲಿ ರಾಜಿ ಸಂಧಾನ ನಡೆದಿದ್ದು, ಪ್ರೀತಿಸಿದವನಿಗಾಗಿ ಕೊನೆಗಳಿಗೆಯಲ್ಲಿ ಮದುವೆ ಮುರಿದ ಯುವತಿ ವಿರುದ್ಧ ವರನ ಕಡೆಯವರು ಅಸಮಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಇನ್ನೇನು ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ತಿರಸ್ಕರಿಸಿದ ವಧುವಿನ ಬಗ್ಗೆ ಸಂಬಂಧಿಕರು ಹೇಳಿದ್ದೇನು ನೋಡಿ

ಹಾಸನ ಹೊರವಲಯ ಬೂವನಹಳ್ಲಿಯ ಯುವತಿ ಆಲೂರು ತಾಲ್ಲೂಕಿನ ಸರ್ಕಾರಿ ಶಾಲೆ ಶಿಕ್ಷಕನ ನಡುವೆ ಮೂರು ತಿಂಗಳ ಹಿಂದೆ ನಿಶ್ಚಯವಾಗಿದ್ದ ಮದುವೆ, ಇಂದು ಧಾರ ಮುಹೂರ್ತ ನಿಗದಿಯಾಗಿತ್ತು, ಬೆಳೀಗ್ಗೆ 9 ಗಂಟೆಗೆ ತಾಳಿಕಟ್ಟೋ ಸಲುವಾಗಿ ಎಲ್ಲಾ ಶಾಸ್ತ್ರಗಳು ನೆರವೇರಿಯಾಗಿತ್ತು, ಮುತ್ತೈದೆಯರು ಕೈನೀರು ಬಿಟ್ಟು ಹರಸಿ ಅರ್ಚಕರು ಮಂತ್ರ ಹೇಳಿ ಮಂಗಳವಾದ್ಯಗಳು ಮೊಳಗಿ ತಾಳಿಕಟ್ಟಲು ವರ ತಾಳಿ ಕೈಗೆತ್ತಿಕೊಳ್ಳುತ್ತಲೆ ವಧು ತಲೆ ಅಲ್ಲಾಡಿಸಿ ಕಣ್ಣೀರಿಡೋಕೆ ಶುರುಮಾಡಿದ್ದಾಳೆ. ಏನಾಯ್ತು ಎಂದು ಕೇಳಿದ್ರು ಹೇಳದ ಆಕೆ ಹಸೆಮಣೆಯಿಂದ ಎದ್ದು ರೂಮ್​ಗೆ ಓಡಿಹೋಗಿದ್ದಾಳೆ.

ಇದನ್ನೂ ಓದಿ
Image
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
Image
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
Image
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
Image
ಧರ್ಮ, ದೇಶದ ಗಡಿ ಮೀರಿದ 'ಪ್ರೇಮ' ವಿವಾಹ: ಚಿತ್ರದುರ್ಗದ ಸೊಸೆಯಾದ US ಸುಂದರಿ

ಪ್ರಿತಿಯ ರಹಸ್ಯ ಬಯಲಿಗೆ

ತಾಳಿ ಕೈಯಲ್ಲೇ ಹಿಡಿದು ಪರಿಪರಿಯಾಗಿ ಕೇಳಿದ ವರ ಏನಾಯ್ತು ಎಂದು ಕೇಳಿದಾಗಲೇ ಬಯಲಾಗಿದ್ದು ಅದೊಂದು ಪ್ರಿತಿಯ ರಹಸ್ಯ, ಸ್ನಾತಕೋತ್ತರ ಪದವಿ ಮುಗಿಸಿರುವ ಯುವತಿಗೆ ಮತ್ಯಾರೋ ಯುವಕನ ಜೊತೆ ಲವ್ ಇತ್ತಂತೆ, ಇದನ್ನ ಮುಚ್ಚಿಟ್ಟಿದ್ದ ಆಕೆ ಮನೆಯವರ ಒತ್ತಾಯಕ್ಕೆ ಮಣಿದು ಶಿಕ್ಷಕನ ಜೊತೆಗೆ ಮದುವೆ ನಿಶ್ಚಯ ಮಾಡಿಕೊಂಡಿದ್ದಾಳೆ, ಆದ್ರೆ ,ಮುಹೂರ್ತದ ಸಮಯದಲ್ಲಿ ಬಂದ ಅದೊಂದು ಕರೆಯಿಂದ ಮದುವೆಯನ್ನ ಮುರಿದುಬಿದ್ದಿದೆ.

ಆಲೂರು ತಾಲ್ಲೂಕಿನ ಸರ್ಕಾರಿ ಶಾಲೆಯ ಶಿಕ್ಷಕನ   ಜೊತೆ ಮದುವೆ ನಿಶ್ಚಯ ಮಾಡಿಕೊಂಡಿದ್ದಾರೆ. ತಿಂಗಳ ಹಿಂದೆ ಅದ್ದೂರಿಯಾಗಿ ಪ್ರಿವೆಡ್ಡಿಂಗ್ ಶೂಟ್ ಸಹ ಮಾಡಿಸಿಕೊಂಡು ಒಟ್ಟೊಟ್ಟಿಗೆ ಓಡಾಡಿದ ನವ ಜೋಡಿ ನಿನ್ನೆ ಸಂಜೆಯೇ ಕಲ್ಯಾಣ ಮಂಟಪಕ್ಕೆ ಬಂದಿದ್ದರು. ಎಲ್ಲವೂ ಚನ್ನಾಗಿಯೇ ನಡೆದಿತ್ತು. ಬೆಳಿಗ್ಗೆ ಎದ್ದು ಮದುವೆ ಉಡುಗೆ ತೊಟ್ಟು ಎಲ್ಲಾ ಶಾಸ್ತ್ರಗಳನ್ನು ಪೂರೈಸಿಕೊಂಡಾಕೆ ಕೊನೆಗಳಿಗೆಯಲ್ಲಿ ಮದುವೆ ಮುರಿದು ಹಸೆಮಣೆಯಿಂದ ಎದ್ದು ಹೋಗಿದ್ದಾಳೆ.

ಪೊಲೀಸರಿಂದ ರಾಜೀ ಸಂಧಾನ

ಕೊನೆಗೆ ಈ ವಿಚಾರ ಹಾಸನ ಬಡಾವಣೆ ಠಾಣೆ ಪೊಲೀಸರಿಗೆ ಮುಟ್ಟಿಸಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಎರಡು ಕಡೆಯವರನ್ನ ಮಾತನಾಡಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಅತ್ತ ಹುಡುಗಿ ಮನೆಯವರು ಯುವಕನ ಮನೆಯವರ ವಾಗ್ವಾದ ನಡೆದಿದೆ. ಎಲ್ಲಾ ಶಾಸ್ತ್ರ ಸಂಪ್ರದಾಯವನ್ನು ಖುಷಿ ಖುಷಿಯಾಗಿ ಮಾಡಿಸಿಕೊಂಡ ಹುಡುಗಿಯನಡೆ ಅಲ್ಲಿದ್ದವರೆಲ್ಲರ ಅಚ್ಚರಿಗೆ ಕಾರಣವಾದ್ರೆ ಎರಡುಕಡೆಯವರನ್ನ ಸಮಾಧಾನಪಡಿಸಲು ಪೊಲೀಸರು ಹೈರಾಣಾಗಿದ್ದಾರೆ. ಕೊನೆಗೆ ಮದುವೆ ಮುರಿದುಬಿದ್ದಿದ್ದು, ಮದುವೆ ಬಂದವರಿಗೆಲ್ಲ ಮಾಡಿಸಲಾಗಿದ್ದ ಬಗೆ ಬಗೆಯ ಊಟ ವೇಸ್ಟ್ ಆಗಿದೆ.

ಒಟ್ಟಿನಲ್ಲಿ ಹೆತ್ತವರು ಹೇಳಿದ ಹುಡುಗನನ್ನ ಇಷ್ಟಪಟ್ಟು ಮದುವೆಗೆ ಓಕೆ ಎಂದಿದ್ದ ಹುಡುಗಿ ದಿಢೀರ್ ಪ್ರೀತಿ ಪ್ರೇಮದ ನೆಪಹೇಳಿ ಮದುವೆಯನ್ನೇ ಮುರಿದಿದ್ದಾಳೆ, ಹೊಸ ಜೀವನದ ಕನಸು ಕಂಡು ಹಸೆಮಣೆ ಏರಿದ್ದ ಹುಡುಗ ಅತ್ತ ಮದುವೆಯೂ ಆಗದೆ ಇತ್ತ ಲಕ್ಷ ಲಕ್ಷ ಹಣವನ್ನು ಕಳೆದುಳ್ಳುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:15 pm, Fri, 23 May 25