- Kannada News Photo gallery Chitradruga Youth fell in love with a American woman and married her today News In kannada
ಧರ್ಮ, ದೇಶದ ಗಡಿ ಮೀರಿದ ಪ್ರೇಮ ವಿವಾಹ: ಚಿತ್ರದುರ್ಗದ ಸೊಸೆಯಾದ ಅಮೆರಿಕಾ ಸುಂದರಿ
ಪ್ರೇಮಕ್ಕೆ ಕಣ್ಣಿಲ್ಲ ಎಂಬ ಮಾತು ಅಕ್ಷರಶ: ಸತ್ಯ ಎನ್ನಲು ಅನೇಕ ಪ್ರಕರಣಗಳು ಸಾಕ್ಷಿಯಾಗಿವೆ. ದೇಶ ಮತ್ತು ಧರ್ಮದ ಗಡಿ ಮೀರಿ ಪ್ರೇಮಜೋಡಿಯೊಂದು ಕೋಟೆನಾಡಿನಲ್ಲಿ ಅದ್ಧೂರಿ ವಿವಾಹವಾಗಿದೆ. ಯುವಕ ಮತ್ತು ಯುವತಿ ಕುಟುಂಬಸ್ಥರು ಮುಂದೆನಿಂತ ವಿವಾಹ ನೆರವೇರಿಸಿದ್ದು ಮತ್ತೊಂದು ವಿಶೇಷ. ಹೌದು....ದೂರದ ಅಮೆರಿಕಾದ ಯುವತಿ ಕರ್ನಾಟಕದ ಸೊಸೆಯಾಗಿದ್ದಾಳೆ.
Updated on:Dec 17, 2024 | 7:28 PM

ಕೊವಿಡ್ ಬಳಿಕ ಪ್ರೇಮಜೋಡಿ ಮದುವೆಗೆ ನಿರ್ಧರಿಸಿದ್ದು ಪೋಷಕರನ್ನು ಒಪ್ಪಿಸಿದ್ದರು. ಡಿಸೆಂಬರ್ 16ರಂದು ಚಿತ್ರದುರ್ಗ ನಗರದ ಜಿ ಜಿ ಸಮುದಾಯ ಭವನದಲ್ಲಿ ಮದುವೆ ಮುಹೂರ್ತ ಫಿಕ್ಸ್ ಆಗಿತ್ತು. ಕೆಲ್ಲಿ ಮತ್ತು ಪೋಷಕರು ಭಾರತೀಯ ಸಂಪ್ರದಾಯದಂತೆ ಮದುವೆ ಕಾರ್ಯ ನೆರವೇರಿಸಲು ಸಮ್ಮತಿಸಿದ್ದರು. ಅಲ್ಲದೆ ಕೆಲ್ಲಿ ಜತೆಗೆ ಪೋಷಕರು ಸಹ ಆಗಮಿಸಿ ಸಂಪ್ರದಾಯ ಬದ್ಧವಾಗಿ ಮಗಳನ್ನು ಅಳಿಯನಿಗೆ ಧಾರೆಯೆರದಿದ್ದು ವಿಶೇಷ.

ಅಪ್ಪಟ ಭಾರತೀಯ ಸಂಪ್ರದಾಯದಂತೆ ಅಮೆರಿಕಾದ ಕೆಲ್ಲಿ , ದುರ್ಗದ ಅಭಿಲಾಷ್ ವಿವಾಹ ನೆರವೇರಿತು. ಅಭಿಲಾಷ್ ಬಿಳಿ ಪಂಚೆ, ಅಂಗಿ, ಪೇಟ, ಹೆಗಲಮೇಲೊಂದು ಟವಲು ಹಾಕಿಕೊಂಡು ಅಪ್ಪಟ ದೇಸಿ ಸ್ಟೈಲ್ ನಲ್ಲಿ ಮಿಂಚಿದರು. ಕೆಲ್ಲಿ ನಾನೇನು ಕಮ್ಮಿ ಎಂಬಂತೆ ರೇಷ್ಮೆ ಸೀರೆ ಧರಿಸಿ, ಕೈಗೆ ಮೆಹಂದಿ, ಹಣೆಗೆ ಸಿಂಧೂರ, ಬಾಸಿಂಗ ತೊಟ್ಟು ಭಾರತೀಯ ನಾರಿಯರೇ ನಾಚುವಂತೆ ಸಿಂಗಾರಗೊಂಡಿದ್ದರು.

ತಾಳಿಯ ಕಟ್ಟುವ ಶುಭ ಮುಹೂರ್ತ, ಆರತಿ ಬೆಳಗುವದು, ಹಾಲೆರೆಯುವುದು, ನಕ್ಷತ್ರ ತೋರುವ ಗಳಿಗೆ ಸೇರಿದಂತೆ ಪ್ರತಿ ಸಾಂಪ್ರದಾಯಿಕ ಆಚರಣೆಗಳನ್ನು ಚಾಚೂ ತಪ್ಪದೆ ಆಚರಿಸಲಾಯಿತು. ವಿವಾಹ ಮುಹೂರ್ತ, ರಿಸೆಪ್ಷನ್ ವೇದಿಕೆ ಹೂವಿನಿಂದ ಅಲಂಕಾರಗೊಂಡಿದ್ದು ,,ಆಕರ್ಷಕವಾಗಿ ನಿರ್ಮಿಸಲಾಗಿತ್ತು. ಮದುವೆಗೆ ಬಂದಿದ್ದು ಬಂದು, ಗೆಳೆಯರು ಅಸಲಿಗೆ ಅಮೆರಿಕಾ ವಧು, ಭಾರತೀಯ ವರನ ಮದುವೆ ಎಂಬ ಡೌಟೇ ಇಲ್ಲದಂತೆ ಸರಾಗವಾಗಿ ಸಂಪ್ರದಾಯಬದ್ಧವಾಗಿ ಮದುವೆ ನಡೆಯಿತು.

. ಕೆಲ್ಲಿ ಪೋಷಕರು ಸಹ ಭಾರತೀಯ ಸಾಂಪ್ರದಾಯಿಕ ಉಡುಗೆ ಧರಸಿ ಮಗಳನ್ನು ಮದುವೆ ಮಾಡಿಕೊಟ್ಟದ್ದು ಜನಮನ ಸೆಳೆಯಿತು.

ಚಿತ್ರದುರ್ಗ ನಗರದ ಅಭಿಲಾಷ್ ವಿದ್ಯಭ್ಯಾಸಕ್ಕೆಂದು ಅಮೇರಿಕಾಕ್ಕೆ ತೆರಳಿದ್ದರು. ಅದೇ ವೇಳೆ ಪರಿಚಯವಾದ ಕೆಲ್ಲಿ ನಡುವೆ ಪ್ರೇಮಾಂಕುರ ಆಗಿತ್ತು. ವಿಶ್ವವೇ ತಲ್ಲಣಗೊಂಡಿದ್ದ ಕೊವಿಡ್ ಕಾಲದ ಸಂದರ್ಭದಲ್ಲಿ ಇಬ್ಬರ ನಡುವೆ ಪರಿಚಯವಾಗಿದ್ದು, ಪರಿಚಯ ಗಾಢ ಪ್ರೇಮಕ್ಕೆ ತಿರುಗಿತ್ತು.

ಕೋಟೆನಾಡು ಚಿತ್ರದುರ್ಗ ನಗರದ ವರ ಅಭಿಲಾಷ್. ಅಮೇರಿಕಾದ ವಧು ಕೆಲ್ಲಿ ಲವ್ ಕಂ ಅರೇಂಜ್ ಮ್ಯಾರೇಜ್. ದೇಶ ಮತ್ತು ಧರ್ಮದ ಗಡಿ ಮೀರಿ ಒಲವಿನ ವಿವಾಹ.

. ಕೆಲ್ಲಿ ಪೋಷಕರು ಸಹ ಭಾರತೀಯ ಸಾಂಪ್ರದಾಯಿಕ ಉಡುಗೆ ಧರಸಿ ಮಗಳನ್ನು ಮದುವೆ ಮಾಡಿಕೊಟ್ಟದ್ದು ಜನಮನ ಸೆಳೆಯಿತು.

ಕೆಲ್ಲಿ ಅಮೇರಿಕಾದ ಹೆಲ್ತ್ ಕೇರ್ ಕಂಪನಿಯಲ್ಲಿ ಇನ್ ಸ್ಪಕ್ಷನಲ್ ಡಿಸೈನರ್ ಆಗಿದ್ದರೆ, ಅಭಿಲಾಷ್ ಬಿ ಎನ್ ವೈ ಬ್ಯಾಂಕ್ ನಲ್ಲಿ ಕ್ವಾಂಟಿಟಿ ರಿಸರ್ಚರ್ ಆಗಿದ್ದಾರೆ.

ಕೊವಿಡ್ ಸಂದರ್ಭದಲ್ಲಿ ಪ್ರೀತಿಸಿದ ಕೆಲ್ಲಿ ಜತೆಗೆ ಮದುವೆ ಆಗಿದ್ದು ಖುಷಿ ಇದೆ. ಅಮೆರಿಕಾ ಮತ್ತು ಭಾರತ ದೇಶಗಳಲ್ಲಿ ಸಾಂಸ್ಕೃತಿಕ ಭಿನ್ನತೆ ಇದೆ. ಎರಡೂ ಸಂಸ್ಕೃತಿಗಳನ್ನು ನಾವಿಬ್ಬರೂ ಅರಿತುಕೊಳ್ಳಲು ಪ್ರಯತ್ನಿಸುತ್ತೇವೆ. ಕೆಲ್ಲಿ ಬರಹಗಾರ್ತಿಯೂ ಆಗಿದ್ದು ನಮ್ಮ ಸಂಸ್ಕೃತಿ ತಿಳಿದುಕೊಳ್ಳುವ ಸಹಜ ಆಸಕ್ತಿಯಿದೆ. ನಮ್ಮಟ್ಟಿಗೆ ಸೇರಿ ಅಪ್ಪಟ ಭಾರತೀಯಳೇ ಆಗಿದ್ದಾಳೆ. ಕೆಲ್ಲಿ ಈಗ ಕನ್ನಡವನ್ನೂ ಕಲಿಯುತ್ತಿದ್ದಾಳೆ ಎಂದು ಅಭಿಲಾಷ್ ಹೇಳಿದರು.

ಇಲ್ಲಿನ ಸಂಸ್ಕೃತಿ, ಮದುವೆ ಆಚರಣೆಗಳು ತುಂಬಾ ಇಷ್ಟವಾಯಿತು. ಭಾರತೀಯನನ್ನು ಮದುವೆ ಆಗಿದ್ದಕ್ಕೆ ನಮ್ಮ ಕುಟುಂಬಸ್ಥರಲ್ಲೂ ಖುಷಿ ಇದೆ. ನಮ್ಮ ಕುಟುಂಬದವರೂ ಅಭಿಲಾಷ್ ನನ್ನು ತುಂಬಾ ಪ್ರೀತಿಸುತ್ತಾರೆ. ನಾನು ಸಹ ಕನ್ನಡ ಕಲಿತು ಕನ್ನಡತಿ ಆಗಿದ್ದೇನೆ ಎಂದು ಕೆಲ್ಲಿ ಸಂತಸ ವ್ಯಕ್ತಪಡಿಸಿದರು.

ಯುವಕ ಮತ್ತು ಯುವತಿ ಕುಟುಂಬಸ್ಥರು ಮುಂದೆನಿಂತ ವಿವಾಹ ನೆರವೇರಿಸಿದ್ದು ಮತ್ತೊಂದು ವಿಶೇಷ. ಹೌದು....ದೂರದ ಅಮೆರಿಕಾದ ಯುವತಿ ಕರ್ನಾಟಕದ ಸೊಸೆಯಾಗಿದ್ದಾಳೆ.
Published On - 7:24 pm, Tue, 17 December 24



















