- Kannada News Photo gallery Pavi Poovappa Breakup With His boyfriend DJ Mady Here is why cinema News in Kannada
ಸಾಕಿದ ನಾಯಿಗಾಗಿ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ; ಪವಿ ಪೂವಪ್ಪ ಶ್ವಾನ ಪ್ರೇಮಕ್ಕೆ ಹ್ಯಾಟ್ಸ್ಆಫ್
ಪವಿ ಪೂವಪ್ಪ ಫ್ಯಾಷನ್ ಡಿಸೈನರ್. ಅವರು ಬಿಗ್ ಬಾಸ್ಗೆ ಕಾಲಿಟ್ಟು ಸಾಕಷ್ಟು ಗಮನ ಸೆಳೆದರು. ಅವರ ಬ್ರೇಕಪ್ ವಿಚಾರ ಈಗ ಸಾಕಷ್ಟು ಚರ್ಚೆಯಲ್ಲಿ ಇದೆ. ಅವರು ಏಕೆ ಬ್ರೇಕಪ್ ಮಾಡಿಕೊಂಡೆ ಎಂಬ ವಿಚಾರವನ್ನು ಹೇಳಿದ್ದಾರೆ. ಅವರು ಸಾಕಿದ ನಾಯಿಗೋಸ್ಕರ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ವಿಚಾರ ರಿವೀಲ್ ಆಗಿದೆ. ಇದು ಅನೇಕರಿಗೆ ಅಚ್ಚರಿ ಎನಿಸಿದೆ.
Updated on:Dec 17, 2024 | 1:00 PM

‘ಬಿಗ್ ಬಾಸ್ ಕನ್ನಡ ಸೀಸನ್ 10’ ಸಾಕಷ್ಟು ಜನಪ್ರಿಯತೆ ಪಡೆಯಿತು. ಈ ಸೀಸನ್ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿತ್ತು. ಪವಿ ಪೂವಪ್ಪ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದರು. ಈ ಎಪಿಸೋಡ್ ಸಾಕಷ್ಟು ಗಮನ ಸೆಳೆದಿತ್ತು.

ಪವಿ ಪೂವಪ್ಪ ಫ್ಯಾಷನ್ ಡಿಸೈನರ್. ಅವರು ಬಿಗ್ ಬಾಸ್ಗೆ ಕಾಲಿಟ್ಟು ಸಾಕಷ್ಟು ಗಮನ ಸೆಳೆದರು. ಅವರ ಬ್ರೇಕಪ್ ವಿಚಾರ ಈಗ ಸಾಕಷ್ಟು ಚರ್ಚೆಯಲ್ಲಿ ಇದೆ. ಅವರು ಏಕೆ ಬ್ರೇಕಪ್ ಮಾಡಿಕೊಂಡೆ ಎಂಬ ವಿಚಾರವನ್ನು ಹೇಳಿದ್ದಾರೆ.

ಡಿಜೆ ಮ್ಯಾಡಿ ಎಂಬುವವರ ಜೊತೆ ಪವಿ ಪೂವಪ್ಪ ಅವರು ಕಳೆದ ಐದು ವರ್ಷಗಳಿಂದ ರಿಲೇಶನ್ಶಿಪ್ನಲ್ಲಿ ಇದ್ದರು. ಇವರು ಶೀಘ್ರವೇ ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದು ಸುಳ್ಳಾಗಿದೆ. ‘ಬ್ರೇಕಪ್ ಆಗಿದೆ’ ಎಂದು ಪವಿ ಹೇಳಿದ್ದಾರೆ.

‘ಪಬ್ಲಿಕ್ಸ್ ನೆಕ್ಸ್ಟ್’ ಹೆಸರಿನ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪವಿ ಪೂವಪ್ಪ, ‘ಐದು ವರ್ಷಗಳಿಂದ ಜೊತೆಗೆ ಇದ್ದೇವೆ. ನನ್ನ ನಾಯಿಯಿಂದ ಅವರಿಗೆ ತೊಂದರೆ ಆಯ್ತು. ಮದುವೆ ಆದ್ಮೇಲೆ ನಾಯಿ ಸಾಕೋಕೆ ಒಪ್ಪಿಗೆ ಇಲ್ಲ ಎಂದರು. ಸಣ್ಣ ವಿಚಾರಕ್ಕೂ ಬೇಸರ ಆಗುತ್ತದೆ. ಅದಕ್ಕೆ ಹಿಂದೆ ಸರಿದೆ’ ಎಂದಿದ್ದಾರೆ ಅವರು.

ಪವಿ ಪೂವಪ್ಪ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಪವಿ ಪೂವಪ್ಪ ಅವರು ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಈಗ ಓಪನ್ ಆಗಿ ತಮ್ಮ ಬಾಯ್ಫ್ರೆಂಡ್ ಬಗ್ಗೆ ಹೇಳಿಕೊಂಡಿದ್ದಾರೆ.
Published On - 12:53 pm, Tue, 17 December 24



















