ತಾಳಿ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು: ಕೊನೆ ಕ್ಷಣದಲ್ಲಿ ಮುರಿದು ಬಿದ್ದ ಮದುವೆ
ಹಾಸನದಲ್ಲಿ ನಡೆದ ಮದುವೆಯೊಂದರಲ್ಲಿ ಅನಿರೀಕ್ಷಿತ ಘಟನೆ ನಡೆದಿದೆ. ತಾಳಿ ಕಟ್ಟುವ ಸಮಯದಲ್ಲಿ ವಧು ಮದುವೆಯನ್ನು ನಿರಾಕರಿಸಿದ್ದಾರೆ. ಬೇರೆ ಯುವಕನನ್ನು ಪ್ರೀತಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ವಧುವಿನ ಈ ನಿರ್ಧಾರದಿಂದ ವರನ ಕುಟುಂಬಸ್ಥರಿಗೆ ಆಘಾತ ಉಂಟಾಗಿದೆ. ಕೊನೆ ಕ್ಷಣದಲ್ಲಿ ಮದುವೆ ಮುರಿದುಬಿದ್ದಿದೆ. ವಿಡಿಯೋ ನೋಡಿ.
ಹಾಸನ, ಮೇ 23: ತಾಳಿ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ವಧು ಹೊರ ನಡೆದಿರುವಂತಹ ಘಟನೆ ನಗರದ ಶ್ರೀಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆಂದು ವಧು ಮದುವೆ (marriage) ನಿರಾಕರಿಸಿದ್ದಾರೆ. ಹಾಸನ ತಾಲೂಕಿನ ಬೂವನಹಳ್ಳಿ ಗ್ರಾಮದ ಯುವತಿ ಹಾಗೂ ಆಲೂರು ತಾಲೂಕಿನ ಯುವಕನ ಜೊತೆ ಮದುವೆ ನಿಶ್ಚಯವಾಗಿತ್ತು. ಮುಹೂರ್ತದ ವೇಳೆ ಪ್ರಿಯಕರನಿಂದ ಯುವತಿಗೆ ದೂರವಾಣಿ ಕರೆ ಬಂದಿದ್ದು, ತಕ್ಷಣವೇ ಮದುವೆ ಬೇಡ ಎಂದು ಯುವತಿ ನಿರಾಕರಿಸಿದ್ದಾರೆ. ಯುವತಿ ಹಠ ಮಾಡಿದ್ದಕ್ಕೆ ವರ ಕೂಡ ನನಗೂ ಈ ಮದುವೆ ಬೇಡ ಎಂದಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: May 23, 2025 12:20 PM