Video: ನೀವು ನೀರು ನಿಲ್ಲಿಸಿದ್ರೆ, ನಾವು ನಿಮ್ಮ ಉಸಿರು ನಿಲ್ಲಿಸ್ತೇವೆಂದು ನಾಲಿಗೆ ಹರಿಬಿಟ್ಟ ಪಾಕ್ ಅಧಿಕಾರಿ
ಅತ್ತ ತಿನ್ನಲು ಅನ್ನವಿಲ್ಲದೆ, ಇತ್ತ ಕುಡಿಯಲು ನೀರಿಲ್ಲದೆ ಹತಾಶ ಸ್ಥಿತಿಯಲ್ಲಿರುವ ಪಾಕಿಸ್ತಾನದ ಅಧಿಕಾರಿಗಳು ಭಾರತೀಯರ ಉಸಿರುನಿಲ್ಲಿಸುವ ಮಾತನಾಡಿದ್ದಾರೆ. ಆದರೆ ಹೋರಾಡಲು ಅವರಲ್ಲಿ ತ್ರಾಣ ಉಳಿದಿದೆಯೇ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ನ ಅಧಿಕಾರಿಯೊಬ್ಬರು ದೊಡ್ಡದಾಗಿ ಭಾಷಣ ಮಾಡಿದ್ದು, ಭಾರತೀಯರ ಸಾಮೂಹಿಕ ಹತ್ಯೆಗೆ ಕರೆ ನೀಡಿದ್ದಾರೆ. ನೀವು ನಮ್ಮ ನೀರು ನಿಲ್ಲಿಸಿದರೆ ನಾವು ನಿಮ್ಮ ಉಸಿರೇ ನಿಲ್ಲಿಸುತ್ತೇವೆ ಎಂದು ಧಮ್ಕಿ ಹಾಕಿದ್ದಾರೆ.
ಇಸ್ಲಾಮಾಬಾದ್, ಮೇ 23: ಅತ್ತ ತಿನ್ನಲು ಅನ್ನವಿಲ್ಲದೆ, ಇತ್ತ ಕುಡಿಯಲು ನೀರಿಲ್ಲದೆ ಹತಾಶ ಸ್ಥಿತಿಯಲ್ಲಿರುವ ಪಾಕಿಸ್ತಾನದ ಅಧಿಕಾರಿಗಳು ಭಾರತೀಯರ ಉಸಿರುನಿಲ್ಲಿಸುವ ಮಾತನಾಡಿದ್ದಾರೆ. ಆದರೆ ಹೋರಾಡಲು ಅವರಲ್ಲಿ ತ್ರಾಣ ಉಳಿದಿದೆಯೇ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.
ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ನ ಅಧಿಕಾರಿ ಅಹ್ಮದ್ ಷರೀಫ್ ಚೌಧರಿ ದೊಡ್ಡದಾಗಿ ಭಾಷಣ ಮಾಡಿದ್ದು, ಭಾರತೀಯರ ಸಾಮೂಹಿಕ ಹತ್ಯೆಗೆ ಕರೆ ನೀಡಿದ್ದಾರೆ. ನೀವು ನಮ್ಮ ನೀರು ನಿಲ್ಲಿಸಿದರೆ ನಾವು ನಿಮ್ಮ ಉಸಿರೇ ನಿಲ್ಲಿಸುತ್ತೇವೆ ಎಂದು ಧಮ್ಕಿ ಹಾಕಿದ್ದಾರೆ. ಆದರೆ ಅಮಾಯಕರ ಪ್ರಾಣ ತೆಗೆದರೆ ಪರಿಣಾಮ ಏನಾಗುತ್ತೆ ಎಂದು ಪಾಕಿಸ್ತಾನ ಇಷ್ಟು ಬೇಗ ಮರೆತಿದೆಯೇ ಅಥವಾ ಬುದ್ಧಿ ಭ್ರಮಣೆಯಾಗಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಜಲ ವಿವಾದಗಳು , ವಿಶೇಷವಾಗಿ ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದಂತೆ, ಬಹಳ ಹಿಂದಿನಿಂದಲೂ ಉದ್ವಿಗ್ನತೆ ಇತ್ತು. ಆದರೆ ಪಹಲ್ಗಾಮ್ ದಾಳಿ ಬಳಿಕ ಭಾರತ ಸಿಂಧೂ ನದಿ ನೀರನ್ನು ತಡೆಹಿಡಿದಿದೆ ಇದಕ್ಕೆ ಪಾಕಿಸ್ತಾನ ಕೋಪಗೊಂಡಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

