AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತ್ಯೇಕ ಘಟನೆ: ಬಾತ್‌ರೂಂನಲ್ಲೇ ಯುವತಿಗೆ ಹೃದಯಾಘಾತ, ನಿಂತಲ್ಲೇ ಕುಸಿದು ಬಿದ್ದು ಯುವಕ ಸಾವು

ಚಿಕ್ಕ ವಯಸ್ಸಿನವರಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿಂದೆಲ್ಲಾ 40 ವರ್ಷಕ್ಕಿಂತ ಹೆಚ್ಚಿರುವವರೆಗೆ ಮಾತ್ರ ಹೃದಯಘಾತವಾಗುತ್ತಿತ್ತು. ಆದ್ರೆ, ಇತ್ತೀಚೆಗೆ ಚಿಕ್ಕ ಮಕ್ಕಳೂ ಸಹ ನಿಂತಲೇ ಕೂತಲ್ಲೇ ಕುಸಿದುಬಿದ್ದು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಪೂಕರವೆಂಬಂತೆ ಎರಡು ಪ್ರತ್ಯೇಕ ಘಟನೆಗಳಲ್ಲಿ ಹಾಸನ ಹಾಗೂ ಬೆಂಗಳೂರಿನಲ್ಲಿ ಯುವಕ, ಯುವತಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಪ್ರತ್ಯೇಕ ಘಟನೆ: ಬಾತ್‌ರೂಂನಲ್ಲೇ ಯುವತಿಗೆ ಹೃದಯಾಘಾತ, ನಿಂತಲ್ಲೇ ಕುಸಿದು ಬಿದ್ದು ಯುವಕ ಸಾವು
Sandhya And Abhishek
ಮಂಜುನಾಥ ಕೆಬಿ
| Updated By: ರಮೇಶ್ ಬಿ. ಜವಳಗೇರಾ|

Updated on:May 22, 2025 | 2:30 PM

Share

ಹಾಸನ/ಬೆಂಗಳೂರು, (ಮೇ 22): ಹಾಸನ (Hassan) ಜಿಲ್ಲೆಯ ಎರಡು ಪ್ರತ್ಯೇಕ ಘಟನೆಗಳಲ್ಲಿ ಯುವಕ, ಯುವತಿ ಹೃದಯಾಘಾತದಿಂದ (Cardiac Arrest) ಸಾವನ್ನಪ್ಪಿದ್ದಾರೆ. ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ಯುವತಿ ಸಂಧ್ಯಾ (19) ಹಾಗೂ ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ಯುವಕ ಅಭಿಷೇಕ್ ಹೃದಯಾಘಾತಕ್ಕೆ (Heart Attack) ಬಲಿಯಾಗಿದ್ದಾರೆ. ಸಂಧ್ಯಾ ಬಾತ್​ರೂಮ್​ನಲ್ಲೇ ಕುಸಿದುಬಿದ್ದು, ಸಾವನ್ನಪ್ಪಿದ್ದರೆ, ಕ್ಯಾಬ್​ ಚಾಲಕನಾಗಿದ್ದ ಅಭಿಷೇಕ್, ಬೆಂಗಳೂರಿನಲ್ಲಿ ನಿಂತಲ್ಲೇ ಏಕಾಏಕಿ ಕುಸಿದುಬಿದ್ದು ಕೊನೆಯುಸಿರೆಳೆದಿದ್ದಾರೆ.

ಬಾತ್‌ರೂಂನಲ್ಲಿ ಯುವತಿಗೆ ಹೃದಯಾಘಾತ

ಹಾಸನ : ಹೃದಯಾಘಾತದಿಂದ ಯುವತಿ ಸಾವನ್ನಪ್ಪಿದ ಘಟನೆ ಹೊಳೆನರಸೀಪುರ (Holenarasipur) ಪಟ್ಟಣದಲ್ಲಿ ನಡೆದಿದೆ. ಸಂಧ್ಯಾ (19) ಮೃತ ಯುವತಿ. ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ನಿವಾಸಿಗಳಾದ ವೆಂಕಟೇಶ್-ಪೂರ್ಣಿಮ ದಂಪತಿ ಪುತ್ರಿ ಸಂಧ್ಯಾ ಅಂತಿಮ ವರ್ಷದ ಡಿಪ್ಲೊಮಾ ಮುಗಿಸಿದ್ದಳು. ಬಾತ್‌ರೂಂಗೆ ತೆರಳಿದ್ದ ವೇಳೆ ಸಂಧ್ಯಾ ಕುಸಿದು ಬಿದ್ದಿದ್ದಾಳೆ. ಕೂಡಲೇ ಬಾತ್‌ರೂಂ ಬಾಗಿಲು ಒಡೆದು ಪೋಷಕರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದರು. ಆದರೆ ಅಷ್ಟು ಹೊತ್ತಿಗೆ ಸಂಧ್ಯಾಳ ಜೀವ ನಿಂತಿತ್ತು.

ಇದನ್ನೂ ಓದಿ: ಆನೇಕಲ್: ಸೂಟ್​ಕೇಸ್​ನಲ್ಲಿ ಅಪರಿಚಿತ ಬಾಲಕಿಯ ಶವ ಪತ್ತೆ

ಬೆಂಗಳೂರಿನಲ್ಲಿ ಹಾಸನ ಯುವಕ ಸಾವು

ಕ್ಯಾಬ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅರಕಲಗೂಡು (Arakalagudu) ಯುವಕನೊಬ್ಬ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ ಘಟನೆ ಬೆಂಗಳೂರಿನ (Bengaluru) ಬಸವೇಶ್ವರ ನಗರದಲ್ಲಿ ನಡೆದಿದೆ. ಮೃತನನ್ನು ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ಅಭಿಷೇಕ್‌ (19) ಎಂದು ಗುರುತಿಸಲಾಗಿದೆ. ಯುವಕ, ಗ್ರಾಮದ ಅನಸೂಯ ಹಾಗೂ ರಾಮಕೃಷ್ಣ ದಂಪತಿ ಪುತ್ರ ಎಂದು ತಿಳಿದು ಬಂದಿದೆ.

ಇದನ್ನೂ ಓದಿ
Image
ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಪ್ರಕರಣದ ಎ3 ಪೊಲೀಸಪ್ಪನ ಮಗ ಪರಾರಿ
Image
ಪತಿಯನ್ನೇ ಕೊಂದು ಪಕ್ಕದ ಮನೆಯವನ ಮೇಲೆ ಆರೋಪ ಹಾಕಿದ್ದ ಮಹಿಳೆ ಅರೆಸ್ಟ್
Image
ಮಹಿಳೆಯ ಪ್ರೇಮಿಯಿಂದಲೇ ಆಕೆಯ 2 ವರ್ಷದ ಮಗು ಮೇಲೆ ಅತ್ಯಾಚಾರ, ಕೊಲೆ
Image
ಅನಾಥವಾಗಿ ಬಿದ್ದಿದ್ದ ಮಗುವನ್ನು ಸಾಕಿದ ಮಹಿಳೆ ಆ ಮಗಳಿಂದಲೇ ಕೊಲೆಯಾದ ಕತೆ!

ಅಭಿಷೇಕ್ ಬಸವೇಶ್ವರ ನಗರದಲ್ಲಿ ನಿಂತಿದ್ದ ಜಾಗದಲ್ಲೇ ಕುಸಿದು ಬಿದ್ದಿದ್ದ. ಆತನನ್ನು ನೋಡಿದ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದ್ರೆ, ಮಾರ್ಗ ಮಧ್ಯೆಯೇ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಮೃತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:29 pm, Thu, 22 May 25