AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಗ್ಲೆಂಡ್‌ ವಿರುದ್ಧ ಶರವೇಗದ ಶತಕ ಸಿಡಿಸಿದ ಜಿಂಬಾಬ್ವೆಯ ಬ್ರಿಯಾನ್ ಬೆನೆಟ್

ಇಂಗ್ಲೆಂಡ್‌ ವಿರುದ್ಧ ಶರವೇಗದ ಶತಕ ಸಿಡಿಸಿದ ಜಿಂಬಾಬ್ವೆಯ ಬ್ರಿಯಾನ್ ಬೆನೆಟ್

ಪೃಥ್ವಿಶಂಕರ
|

Updated on:May 23, 2025 | 9:16 PM

Brian Bennett's Explosive Century: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆಯ ಬ್ರಿಯಾನ್ ಬೆನೆಟ್ ಅವರು 97 ಎಸೆತಗಳಲ್ಲಿ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಇದು ಜಿಂಬಾಬ್ವೆ ಪರ ಅತಿ ವೇಗದ ಟೆಸ್ಟ್ ಶತಕವಾಗಿದ್ದು, ಇಂಗ್ಲೆಂಡ್‌ನಲ್ಲಿ ಶತಕ ಬಾರಿಸಿದ ಎರಡನೇ ಜಿಂಬಾಬ್ವೆ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಬೆನೆಟ್ ಅವರ ಈ ಸಾಧನೆಯು 25 ವರ್ಷಗಳ ನಂತರ ಜಿಂಬಾಬ್ವೆಗೆ ಒಂದು ದೊಡ್ಡ ಗೆಲುವಾಗಿದೆ.

ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆಯ ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ ಸ್ಫೋಟಕ ಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಟ್ರೆಂಟ್ ಬ್ರಿಡ್ಜ್​ನಲ್ಲಿ ನಡೆಯುತ್ತಿರುವ ಈ ಟೆಸ್ಟ್‌ನಲ್ಲಿ ಬ್ರಿಯಾನ್ ಬೆನೆಟ್ ಕೇವಲ 97 ಎಸೆತಗಳಲ್ಲಿ ಶತಕ ಗಳಿಸಿ ಅನೇಕ ದಾಖಲೆಗಳನ್ನು ನಿರ್ಮಿಸಿದರು. ಜಿಂಬಾಬ್ವೆ ಪರ ಟೆಸ್ಟ್‌ನಲ್ಲಿ ಅತಿ ವೇಗದ ಶತಕ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಬ್ರಿಯಾನ್ ಬೆನೆಟ್ ಪಾತ್ರರಾಗಿದ್ದಾರೆ. ಅಲ್ಲದೆ ಇಂಗ್ಲೆಂಡ್‌ನಲ್ಲಿ ಶತಕ ಬಾರಿಸಿದ ಎರಡನೇ ಜಿಂಬಾಬ್ವೆ ಬ್ಯಾಟ್ಸ್‌ಮನ್ ಬ್ರಿಯಾನ್ ಬೆನೆಟ್.

200ನೇ ಇಸವಿಯ ಆರಂಭದಲ್ಲಿ, ಮುರ್ರೆ ಗುಡ್ವಿನ್ ಇಂಗ್ಲೆಂಡ್‌ನಲ್ಲಿ ಶತಕ ಗಳಿಸಿದ್ದರು. ಇದರರ್ಥ 25 ವರ್ಷಗಳ ನಂತರ ಜಿಂಬಾಬ್ವೆಯ ಬ್ಯಾಟ್ಸ್‌ಮನ್ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಶತಕ ಗಳಿಸಿದ್ದಾರೆ. ಜಿಂಬಾಬ್ವೆ ಪರ ಟೆಸ್ಟ್ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಬ್ರಿಯಾನ್ ಬೆನೆಟ್ ಪಾತ್ರರಾಗಿದ್ದಾರೆ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಎರಡನೇ ಶತಕವಾಗಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್​ನಲ್ಲಿ ಜಿಂಬಾಬ್ವೆಯ ಮೂವರು ಬ್ಯಾಟ್ಸ್‌ಮನ್‌ಗಳು ಮಾತ್ರ ಶತಕ ಬಾರಿಸಿದ್ದಾರೆ. ಮೊದಲ ಶತಕವನ್ನು 1996 ರಲ್ಲಿ ಆಂಡಿ ಫ್ಲವರ್ ಬಾರಿಸಿದರೆ, ಇದರ ನಂತರ, ಮರ್ರೆ ಗುಡ್ವಿನ್ 2000 ನೇ ಇಸವಿಯಲ್ಲಿ ಈ ಸಾಧನೆ ಮಾಡಿದ್ದರು. ಈಗ 2025 ರಲ್ಲಿ ಬ್ರಿಯಾನ್ ಬೆನೆಟ್ ಟೆಸ್ಟ್ ಶತಕ ಗಳಿಸಿದ್ದಾರೆ.

ಬ್ರಿಯಾನ್ ಬೆನೆಟ್ ಯಾರು?

ಬ್ರಿಯಾನ್ ಬೆನೆಟ್ ಒಬ್ಬ ಉದಯೋನ್ಮುಖ ಜಿಂಬಾಬ್ವೆ ಕ್ರಿಕೆಟಿಗರಾಗಿದ್ದು, ಅವರು ಜಿಂಬಾಬ್ವೆ ಪರ ಮೂರು ಸ್ವರೂಪಗಳಲ್ಲಿ ಆಡುತ್ತಾರೆ. ಈ ಆಟಗಾರ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದು, 2022 ರ ಅಂಡರ್-19 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ಪರ ಅತಿ ಹೆಚ್ಚು ರನ್ ಗಳಿಸಿದ್ದರು. ಈ ಪಂದ್ಯಾವಳಿಯಲ್ಲಿ, ಅವರು 6 ಪಂದ್ಯಗಳಲ್ಲಿ 273 ರನ್ ಗಳಿಸಿದರು, ಇದರಲ್ಲಿ ಮೂರು ಅರ್ಧಶತಕಗಳು ಸೇರಿದ್ದವು.

Published on: May 23, 2025 09:15 PM