Working Out While Fasting: ಉಪವಾಸದ ಸಮಯದಲ್ಲೂ ನೀವು ವರ್ಕ್​ ಔಟ್​ ಮಾಡುತ್ತೀರಾ? ಹಾಗಿದ್ದರೆ ಈ ಸಲಹೆ ಪಾಲಿಸಿ

ನೀವು ಉಪವಾಸ ಮಾಡುವಾಗ ವ್ಯಾಯಾಮ ಮಾಡಲು ಬಯಸಿದರೆ, ಈ ಕೆಳಗಿನ ತಜ್ಞರ ಸಲಹೆಗಳನ್ನು ಪಾಲಿಸಿ. ಉಪವಾಸ ಮಾಡುವಾಗ ವ್ಯಾಯಾಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

Working Out While Fasting: ಉಪವಾಸದ ಸಮಯದಲ್ಲೂ ನೀವು ವರ್ಕ್​ ಔಟ್​ ಮಾಡುತ್ತೀರಾ? ಹಾಗಿದ್ದರೆ ಈ ಸಲಹೆ ಪಾಲಿಸಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷತಾ ವರ್ಕಾಡಿ

Updated on:Jan 10, 2023 | 11:04 AM

ಸಾಕಷ್ಟು ಜನರು ಉಪವಾಸ(Fasting)ದ ಸಮಯದಲ್ಲಿ ದಿನ ಪೂರ್ತಿ ನೀರು ಕೂಡ ಕುಡಿಯುವುದಿಲ್ಲ. ಅಂತಹ ಸಮಯದಲ್ಲಿ ವ್ಯಾಯಾಮ(Workout) ಮಾಡುವುದು ಎಷ್ಟು ಸೂಕ್ತ. ಇದು ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಆದ್ದರಿಂದ ನೀವು ಉಪವಾಸ ಮಾಡುವಾಗ ವ್ಯಾಯಾಮ ಮಾಡಲು ಬಯಸಿದರೆ, ಈ ಕೆಳಗಿನ ತಜ್ಞರ ಸಲಹೆಗಳನ್ನು ಪಾಲಿಸಿ. ಸಾಕಷ್ಟು ತಮ್ಮ ತೂಕ ನಷ್ಟ ಹಾಗೂ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಯೋಗ, ವ್ಯಾಯಮದಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ಅಂತಹ ಸಮಯದಲ್ಲಿ ಸರಿಯಾದ ನಿಮ್ಮ ಆಹಾರಕ್ರಮವು ಕೂಡ ಅಗತ್ಯವಾಗಿರುತ್ತದೆ. ಆದ್ದರಿಂದ ಉಪವಾಸದ ಸಮಯದಲ್ಲಿ ವ್ಯಾಯಮವನ್ನು ಮಾಡುವುದು ಉತ್ತಮ. ಆದರೆ ನೀವು ಸರಿಯಾಗಿ ಸಮಯವನ್ನು ನಿಗದಿಪಡಿಸಬೇಕಿದೆ ಅಷ್ಟೇ.

ಸಮಯ ನಿಗದಿಪಡಿಸಿಕೊಳ್ಳಿ:

ನೀವು ಪ್ರತಿ ದಿನ ಮಾಡುವ ವ್ಯಾಯಮ ಮತ್ತು ಉಪವಾಸದ ಸಮಯದಲ್ಲಿ ಮಾಡುವ ವ್ಯಾಯಮಗಳ ಸಮಯದಲ್ಲಿ ದೇಹದ ಕ್ರಿಯೆಯು ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಉಪವಾಸದ ಸಮಯದಲ್ಲಿ ದೇಹವು ಬೇಗ ದಣಿಯುತ್ತದೆ. ಜೊತೆಗೆ ನೀರು ಕಡಿಮೆ ಅಥವಾ ಕುಡಿಯದೇ ಇರುವುದರಿಂದ ದೇಹವು ತೇವಾಂಶ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ನಿಮ್ಮ ವ್ಯಾಯಮದ ಅವಧಿಯನ್ನು ವಿಶೇಷವಾಗಿ ಉಪವಾಸದ ಸಮಯದಲ್ಲಿ ಕಡಿಮೆ ಮಾಡಿ. ವ್ಯಾಯಮದ ಅವಧಿಯು 40- 60 ನಿಮಿಷಗಳ ನಡುವೆ ಇರಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ದೇಹದ ತೇವಾಂಶ:

ಉಪವಾಸದ ಸಮಯದಲ್ಲಿ ದೇಹದಲ್ಲಿ ಜಲಸಂಚಯನ ಕಡಿಮೆ ಇರುವುದರಿಂದ ವ್ಯಾಯಾಮದ ಸಮಯದಲ್ಲಿ ನಿಮ್ಮನ್ನು ಹೈಡ್ರೀಕರಿಸಿದಂತೆ ನೋಡಿಕೊಳ್ಳಿ, ಅದು ನಿಮ್ಮನ್ನು ದುರ್ಬಲಗೊಳಿಸುತ್ತದೆ ಮತ್ತು ಸೆಳೆತವನ್ನು ಉಂಟುಮಾಡಬಹುದು.

ನಿಮ್ಮ ಆರೋಗ್ಯ ಕಡೆಗಣಿಸದಿರಿ:

ಉಪವಾಸದ ಸಮಯದಲ್ಲಿ ಆಹಾರವನ್ನು ತಿನ್ನದೇ ಇರುವುದರಿಂದ ದೇಹ ಬೇಗ ದಣಿಯುತ್ತದೆ. ಆದ್ದರಿಂದ ನಿಮಗೆ ಆಯಾಸ, ತಲೆನೋವು ಅಥವಾ ಶಕ್ತಿ ಕಡಿಮೆಯೆನಿಸಿದರೆ ವ್ಯಾಯಮ ನಿಲ್ಲಿಸುವುದು ಉತ್ತಮ. ಆದ್ದರಿಂದ ನಿಮ್ಮ ದೇಹ ಯಾವ ರೀತಿ ನಿಮಗೆ ಪ್ರೋತ್ಸಾಹಿಸುತ್ತದೆ ಎಂದು ತಿಳಿದುಕೊಳ್ಳುವುದು ಅಗತ್ಯ.

ಇದನ್ನೂ ಓದಿ: ಚಳಿಗಾಲದಲ್ಲಿ ರಾತ್ರಿ ಸಾಕ್ಸ್​ ಹಾಕಿಕೊಂಡು ಮಲಗುತ್ತೀರಾ?; ಆ ಅಭ್ಯಾಸ ಬಿಟ್ಟುಬಿಡಿ

ಮುಂಜಾನೆ ವ್ಯಾಯಮ ಮಾಡುವುದು ಉತ್ತಮ:

ಉಪವಾಸದ ಸಮಯ ಸಂಜೆ ದೇಹದವು ಸಾಕಷ್ಟು ದಣಿದಿರುತ್ತದೆ ಮತ್ತು ಹಸಿವಿನಿಂದ ಕೂಡಿರುತ್ತದೆ. ಅಂತಹ ಸಮಯದಲ್ಲಿ ವ್ಯಾಯಮ ಮಾಡುವುದು ಸೂಕ್ತವಲ್ಲ. ಆದ್ದರಿಂದ ಬೆಳಗ್ಗಿನ ವ್ಯಾಯಮ ಮಾಡುವುದು ಉತ್ತಮವಾಗಿದೆ.

ಉಪವಾಸದ ಸಮಯದಲ್ಲಿ ವ್ಯಾಯಾಮ ಮಾಡುವುದು ಉತ್ತಮ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಇದು ನಿಮ್ಮ ದೇಹದ ಬೆಳವಣಿಗೆಯ ಹಾರ್ಮೋನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ಜೀವಕೋಶದ ದುರಸ್ತಿ, ಚಯಾಪಚಯ ಕ್ರಿಯೆ ಮತ್ತು ಸ್ನಾಯುವಿನ ಬೆಳವಣಿಗೆ ಸಹಾಯಕವಾಗಿದೆ ಎಂದು ತಿಳಿದುಬಂದಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 11:03 am, Tue, 10 January 23