Health Tips: ಚಳಿಗಾಲದಲ್ಲಿ ರಾತ್ರಿ ಸಾಕ್ಸ್ ಹಾಕಿಕೊಂಡು ಮಲಗುತ್ತೀರಾ?; ಆ ಅಭ್ಯಾಸ ಬಿಟ್ಟುಬಿಡಿ
ಸಾಕ್ಸ್ ಧರಿಸುವುದರಿಂದ ದೇಹದ ಉಷ್ಣತೆ ವೇಗವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಅಲ್ಲದೆ, ಕೆಲವರಿಗೆ ಅಸ್ವಸ್ಥತೆ ಸಹ ಉಂಟಾಗುತ್ತದೆ. ಸಾಕ್ಸ್ ಧರಿಸುವುದರಿಂದ ದೀರ್ಘಕಾಲದವರೆಗೆ ರಕ್ತನಾಳಗಳಲ್ಲಿ ಒತ್ತಡದಿಂದಾಗಿ ಉಸಿರಾಟದ ಸಮಸ್ಯೆಯೂ ಉಂಟಾಗಬಹುದು.
ಚಳಿಗಾಲದಲ್ಲಿ (Winter) ಚಳಿಯಿಂದ ರಕ್ಷಿಸಿಕೊಳ್ಳಲು ಕೆಲವರು ದಪ್ಪನೆಯ ಸಾಕ್ಸ್ (Socks) ಧರಿಸಿಕೊಂಡು ಮಲಗುತ್ತಾರೆ. ನೀವು ಕೂಡ ರಾತ್ರಿ ಮಲಗುವಾಗ ಬೆಚ್ಚಗಾಗಲಿ ಎಂದು ಸಾಕ್ಸ್ ಹಾಕಿಕೊಂಡು ಮಲಗುವವರಾದರೆ ಆ ಅಭ್ಯಾಸವನ್ನು ಆದಷ್ಟು ಬೇಗ ಬಿಡುವುದು ಒಳ್ಳೆಯದು. ರಾತ್ರಿ ಸಾಕ್ಸ್ ಹಾಕಿಕೊಂಡು ಮಲಗುವುದರಿಂದ ದೇಹದಲ್ಲಿ ರಕ್ತ ಪರಿಚಲನೆಯಲ್ಲಿ (Blood Circulation) ಸಮಸ್ಯೆ ಉಂಟಾಗುತ್ತದೆ. ಸಾಕ್ಸ್ ಧರಿಸುವುದರಿಂದಾಗಿ ದೇಹದ ಉಷ್ಣತೆಯು ವೇಗವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಅಲ್ಲದೆ, ಕೆಲವರಿಗೆ ಅಸ್ವಸ್ಥತೆ ಸಹ ಉಂಟಾಗುತ್ತದೆ. ಸಾಕ್ಸ್ ಧರಿಸುವುದರಿಂದ ದೀರ್ಘಕಾಲದವರೆಗೆ ರಕ್ತನಾಳಗಳಲ್ಲಿ ನಿರಂತರ ಒತ್ತಡದಿಂದಾಗಿ ಉಸಿರಾಟದ ಸಮಸ್ಯೆಯೂ (Breathing Problem) ಉಂಟಾಗಬಹುದು.
ರಾತ್ರಿಯಲ್ಲಿ ಸಾಕ್ಸ್ ಧರಿಸಿ ಮಲಗುವುದರಿಂದ ಆಗುವ ಅನಾನುಕೂಲಗಳು ಹೀಗಿವೆ:
1. ರಕ್ತ ಸಂಚಲನದಲ್ಲಿ ಅಡಚಣೆ: ನೀವು ರಾತ್ರಿಯಲ್ಲಿ ಬಿಗಿಯಾದ ಅಥವಾ ದಪ್ಪವಾದ ಸಾಕ್ಸ್‌ಗಳನ್ನು ಧರಿಸಿ ಮಲಗುತ್ತಿದ್ದರೆ ಅದರಿಂದಾಗಿ ಪಾದಗಳ ನಡುವೆ ನಿಮ್ಮ ರಕ್ತ ಪರಿಚಲನೆಯು ನಿಂತುಹೋಗಬಹುದು. ನಿಮ್ಮ ಪಾದಗಳಲ್ಲಿ ಜುಮ್ಮೆನಿಸಬಹುದು ಅಥವಾ ಒತ್ತಡವೂ ಉಂಟಾಗಬಹುದು.
2. ನೈರ್ಮಲ್ಯದ ಸಮಸ್ಯೆ: ನೀವು ದಿನವಿಡೀ ಸಾಕ್ಸ್ ಧರಿಸಿ ತಿರುಗಾಡಿದರೆ ಮತ್ತು ಅದೇ ಸಾಕ್ಸ್ ಅನ್ನು ಧರಿಸಿಕೊಂಡು ಮಲಗಿದರೆ ಧೂಳು ಮತ್ತು ಕೊಳಕಿನಿಂದ ನಿಮ್ಮ ಚರ್ಮದಲ್ಲಿ ಅಲರ್ಜಿ ಉಂಟಾಗಬಹುದು.
ಇದನ್ನೂ ಓದಿ: Healthy Oils: ಚಳಿಗಾಲದಲ್ಲಿ ಕರಿದ ಆಹಾರ ತಿನ್ನುವ ಆಸೆಯೇ? ಆದರೆ ಹೈ ಕೊಲೆಸ್ಟ್ರಾಲ್ ಇದೆ, ಹೀಗೆ ಮಾಡಿ
3. ಮಿತಿಮೀರಿದ ಸಮಸ್ಯೆ: ರಾತ್ರಿ ಹೊತ್ತಿನಲ್ಲಿ ಮಲಗುವುದು ಮತ್ತು ಸಾಕ್ಸ್ ಧರಿಸುವುದರಿಂದ ದೇಹ ಅತಿಯಾಗಿ ಬಿಸಿಯಾಗಬಹುದು. ಇದರಿಂದ ನಿಮ್ಮ ದೇಹದ ಉಷ್ಣತೆ ಹೆಚ್ಚುತ್ತದೆ. ಈ ಕಾರಣದಿಂದಾಗಿ ಅಸ್ವಸ್ಥತೆಯ ಸಮಸ್ಯೆ ಕೂಡ ಉಂಟಾಗಬಹುದು.
4. ಹೃದಯದ ಮೇಲೆ ಪರಿಣಾಮ ಬೀರುತ್ತದೆ: ಬಿಗಿಯಾದ ಸಾಕ್ಸ್ ಧರಿಸಿ ಮಲಗಿದರೆ ಪಾದದ ರಕ್ತನಾಳಗಳ ಮೇಲೆ ಒತ್ತಡ ಬೀಳುತ್ತದೆ. ಹೃದಯಕ್ಕೆ ರಕ್ತ ಪಂಪ್ ಮಾಡುವಲ್ಲಿ ಸಮಸ್ಯೆ ಉಂಟಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಹೃದಯವನ್ನು ಪಂಪ್ ಮಾಡಲು ಹೆಚ್ಚಿನ ಬಲ ಬೀಳಬೇಕಾಗುತ್ತದೆ. ಇದರಿಂದಾಗಿ ಹೃದಯಕ್ಕೆ ತೊಂದರೆ ಆಗಬಹುದು.
ಇದನ್ನೂ ಓದಿ: Asthma: ಚಳಿಗಾಲದಲ್ಲಿ ಉಲ್ಬಣಗೊಳ್ಳುವ ಅಸ್ತಮಾ ತಡೆಗಟ್ಟಲು ವೈದ್ಯರ ಸಲಹೆ ಇಲ್ಲಿದೆ
ನೀವು ರಾತ್ರಿಯಲ್ಲಿ ಸಾಕ್ಸ್ ಧರಿಸುವುದಾದರೆ ಈ ವಿಷಯಗಳನ್ನು ನೆನಪಿನಲ್ಲಿಡಿ:
– ರಾತ್ರಿ ಹೊತ್ತಿನಲ್ಲಿ ಸಡಿಲವಾದ ಕಾಟನ್ ಸಾಕ್ಸ್‌ಗಳನ್ನು ಮಾತ್ರ ಧರಿಸಿ.
– ಯಾವಾಗಲೂ ಸ್ವಚ್ಛ ಮತ್ತು ತೊಳೆದ ಸಾಕ್ಸ್ ಮಾತ್ರ ಧರಿಸಿ ಮಲಗಿ.
– ಮಕ್ಕಳಿಗೆ ಎಂದಿಗೂ ಬಿಗಿಯಾದ ಸಾಕ್ಸ್ ಹಾಕಿ ಮಲಗುವಂತೆ ಮಾಡಬೇಡಿ.
– ಸಾಕ್ಸ್ ಧರಿಸುವ ಮೊದಲು ಪಾದಗಳನ್ನು ಸರಿಯಾಗಿ ಮಸಾಜ್ ಮಾಡಿ.