Asthma: ಚಳಿಗಾಲದಲ್ಲಿ ಉಲ್ಬಣಗೊಳ್ಳುವ ಅಸ್ತಮಾ ತಡೆಗಟ್ಟಲು ವೈದ್ಯರ ಸಲಹೆ ಇಲ್ಲಿದೆ

ಚಳಿಗಾಲವು ನಮ್ಮ ಉಸಿರಾಟದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಮತ್ತು ನಮ್ಮಲ್ಲಿ ಹೆಚ್ಚಿನವರಿಗೆ ಇದು ಗಂಟಲು ನೋವು ಹಾಗೂ ಅಸ್ತಮಾದಿಂದ ಬಳಲುತ್ತಿರುವವರಿಗೆ ಮೂಗಲ್ಲಿ ಸ್ರವಿಸುವಿಕೆಗೂ ಕಾರಣವಾಗಬಹುದು.

Asthma: ಚಳಿಗಾಲದಲ್ಲಿ ಉಲ್ಬಣಗೊಳ್ಳುವ ಅಸ್ತಮಾ ತಡೆಗಟ್ಟಲು ವೈದ್ಯರ ಸಲಹೆ ಇಲ್ಲಿದೆ
ಸಾಂದರ್ಭಿಕ ಚಿತ್ರ Image Credit source: google image
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 09, 2023 | 6:50 PM

ಚಳಿಗಾಲವು ನಮ್ಮ ಉಸಿರಾಟದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಮತ್ತು ನಮ್ಮಲ್ಲಿ ಹೆಚ್ಚಿನವರಿಗೆ ಇದು ಗಂಟಲು ನೋವು ಹಾಗೂ ಅಸ್ತಮಾದಿಂದ ಬಳಲುತ್ತಿರುವವರಿಗೆ ಮೂಗಲ್ಲಿ ಸ್ರವಿಸುವಿಕೆಗೂ ಕಾರಣವಾಗಬಹುದು. ಈ ಅಸ್ತಮಾ ಪ್ರಚೋದಕವನ್ನು ತಡೆಗಟ್ಟುವ ಕ್ರಮಗಳು ಇಲ್ಲಿವೆ. ಚಳಿಗಾಲದಲ್ಲಿ ಉಂಟಾಗುವ ಶೀತ ಹವಮಾನದಿಂದಾಗಿ ಉಸಿರಾಟದ ಪರಿಸ್ಥಿತಿ ಹದಗೆಡುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಅಸ್ತಮಾವನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಪಲ್ಮನರಿ ಮೆಡಿಸಿನ್ ವಿಭಾಗದ ಹಿರಿಯ ಸಲಹೆಗಾರ ಹಾಗೂ ವಿಭಾದ ಮುಖ್ಯಸ್ಥರಾದ ಡಾ. ಅರ್ಜುನ್ ಖನ್ನಾ ಹೇಳುತ್ತಾರೆ, ಅಸ್ತಮಾವು ಶ್ವಾಸನಾಳಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಅವುಗಳನ್ನು ಕಿರಿದಾಗಿಸುತ್ತದೆ. ಮತ್ತು ಉಸಿರಾಟದ ತೊಂದರೆ, ಉಬ್ಬಸ ಮತ್ತು ಕೆಮ್ಮುವಿಗೆ ಇದು ಕಾರಣವಾಗುತ್ತದೆ. ಕೆಲವು ಪ್ರಚೋದಕಗಳಿಗೆ ಪ್ರತಿಕ್ರಿಯೆಯಾಗಿ ಅಸ್ತಮಾ ರೋಗಿಗಳಿಗೆ ಶೀತ ಗಾಳಿಯು ಸಾಮಾನ್ಯ ಪ್ರಚೋದಕವಾಗಿದೆ.

ತಣ್ಣನೆಯ ಗಾಳಿಗೆ ನೇರ ಮತ್ತು ನಿರಂತರವಾದ ಒಡ್ಡುವಿಕೆಯು ಅಸ್ತಮಾ ರೋಗಿಗಳ ಈಗಾಗಲೇ ದುರ್ಬಲವಾದ ಶ್ವಾಸನಾಳದ ಹಾದಿಯನ್ನು ಮುಚ್ಚಲು ಕಾರಣವಾಗುತ್ತದೆ. ಈ ಕಾರಣದಿಂದಾಗಿ ಅವರು ಉಲ್ಬಣಗೊಂಡ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. ಮತ್ತು ಅಸ್ತಮಾ ದಾಳಿಗೆ ಹೆಚ್ಚಾಗಿ ಗುರಿಯಾಗುತ್ತಾರೆ. ವಾಸ್ತವವಾಗಿ ಶೀತ ಗಾಳಿಗೆ ಒಡ್ಡಿಕೊಳ್ಳುವುದರಿಂದ ವಾಯುಮಾರ್ಗಗಳಲ್ಲಿ ಹಿಸ್ಟಮೈನ್‍ಗಳ ಉತ್ಪಾದನೆಯ ಕಾರಣದಿಂದಾಗಿ ಅಲರ್ಜಿಗೆ ಸಂಬಂಧಿಸಿದ ಅಸ್ತಮಾ ಕೂಡಾ ಉಂಟಾಗಬಹುದು. ಆದ್ದರಿಂದ ಮೊದಲ ಹಂತವಾಗಿ ತಡೆಗಟ್ಟುವ ಕ್ರಮಗಳನ್ನು ಅನುಸರಿಸಬೇಕು. ಅವುಗಳೆಂದರೆ ಫ್ಲೂ ಲಸಿಕೆಯನ್ನು ಮಡೆಯುವುದು, ಮುಖಕ್ಕೆ ಮಾಸ್ಕ್ ಧರಿಸುವುದು, ವೈದ್ಯರ ಶಿಫಾರಸಿನ ಮೇರೆಗೆ ಇನ್ಹೆಲರ್ ಮತ್ತು ವೈದ್ಯರು ಸೂಚಿಸಿದಂತೆ ನಿಯಮಿತ ಇನ್ಹಲೇಷನ್ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು.

ಇದನ್ನು ಓದಿ;Asthma: ಅಸ್ತಮಾ ರೋಗಿಗಳು ಮಳೆಗಾಲದಲ್ಲಿ ಮರೆತೂ ಕೂಡ ಇವುಗಳನ್ನು ತಿನ್ನಬೇಡಿ

ಗುರುಗ್ರಾಮ್‍ನ ಮಣಿಪಾಲ್ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರದ ಸಲಹೆಗಾರ ಡಾ. ಪಿಯೂಷ್ ಗೋಯೆಲ್ ಪ್ರಕಾರ, ಅಸ್ತಮಾ ಹೊಂದಿರುವ ರೋಗಿಗಳ ಕಾಯಿಲೆ ಅನೇಕ ಕಾರಣಗಳಿಂದ ಉಲ್ಬಣಗೊಳ್ಳಬಹುದು. ಕಾಲೋಚಿತವಾಗಿ ವೈರಲ್ ಸೋಂಕು ಹಾಗೂ ಜ್ವರ ಅಸ್ತಮಾವನ್ನು ಹದಗೆಡಿಸುತ್ತದೆ. ಎರಡನೆಯದಾಗಿ ಹೆಚ್ಚಿನ ಮಾಲಿನ್ಯ ಮಟ್ಟಗಳ ಕಾರಣದಿಂದಾಗಿ ಅಸ್ತಮಾ ಉಲ್ಬಣಗೊಳ್ಳಬಹುದು. ಇದರ ತಡೆಗಟ್ಟುವಿಕೆಗಾಗಿ ಚಳಿಗಾಲದ ಆರಂಭದ ಮೊದಲು ವಾರ್ಷಿಕ ಇನ್ಫ್ಲುಯೆನ್ಝ ವಾಕ್ಸಿನೇಷನ್ ನೀಡುವುದು ಅಗತ್ಯವಾಗಿದೆ. ಶ್ವಾಸಕೋಶದ ಕಾಯಿಲೆ ಹಾಗೂ ಇತರ ಕೊಮೊರ್ಬಿಡಿಟಿಗಳ ರೋಗ ಲಕ್ಷಣ ಹೊಂದಿರುವ ಮಕ್ಕಳು ಹಾಗೂ ವಯಸ್ಕರರು ಮುಖಕ್ಕೆ ಮಾಸ್ಕ್ ಧರಿಸುವುದು ಹಾಗೂ ಕೈಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:50 pm, Mon, 9 January 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ