ಅವ್ರು ದಾಳಿ ನಿಲ್ಲಿಸಿದ್ರೆ ನಾವು ನಿಲ್ಲಿಸ್ತೀವಷ್ಟೆ, ಕದನ ವಿರಾಮ ಒಪ್ಪಂದವಾಗಿಲ್ಲ: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್
Iran-Israel Conflict: ಇಸ್ರೇಲ್ ಹಾಗೂ ಇರಾನ್ ನಡುವೆ ಕದನ ವಿರಾಮದ ಕುರಿತು ಯಾವುದೇ ಒಪ್ಪಂದವಾಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಈಗ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಭಾರತ-ಪಾಕಿಸ್ತಾನ ನಡುವಿನ ಸಂಘರ್ಷದ ಸಮಯದಲ್ಲಿ ಕೂಡ ತನ್ನ ಮಧ್ಯಸ್ಥಿಕೆಯಿಂದಲೇ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಹೇಳಿದ್ದರು. ಆದರೆ ಭಾರತ ಅದನ್ನು ನಿರಾಕರಿಸಿತ್ತು.ಇಸ್ರೇಲ್ ಮೊದಲು ತನ್ನ ದಾಳಿಯನ್ನು ನಿಲ್ಲಿಸಬೇಕಾಗುತ್ತದೆ. ಇಸ್ರೇಲ್ ತನ್ನ ಕಡೆಯಿಂದ ದಾಳಿಯನ್ನು ನಿಲ್ಲಿಸಿದರೆ, ಇರಾನ್ ಕೂಡ ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ ಎಂದು ಸಚಿವ ಅಬ್ಬಾಸ್ ಹೇಳಿದ್ದಾರೆ.

ಇರಾನ್, ಜೂನ್ 24: ಇಸ್ರೇಲ್ ದಾಳಿ ನಿಲ್ಲಿಸಿದ್ರೆ ನಾವು ನಿಲ್ಲಿಸ್ತೀವಷ್ಟೆ, ಯಾವುದೇ ಕದನ ವಿರಾಮ ಒಪ್ಪಂದವಾಗಿಲ್ಲ ಎಂದು ಇರಾನ್(Iran) ವಿದೇಶಾಂಗ ಸಚಿವ ಅಬ್ಬಾಸ್ ಸ್ಪಷ್ಟನೆ ನೀಡಿದ್ದಾರೆ. ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಅವರ ಹೇಳಿಕೆ ಬೆನ್ನಲ್ಲೇ ಅಬ್ಬಾಸ್ ಸ್ಪಷ್ಟನೆ ಬಂದಿದೆ.
ಕತಾರ್ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಬಳಿಕ, ಇಸ್ರೇಲ್ ಹಾಗೂ ಇರಾನ್ ಸಂಪೂರ್ಣ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದರೆ ಇಸ್ರೇಲ್ ಮತ್ತು ಇರಾನ್ ತಕ್ಷಣವೇ ಯಾವುದೇ ಕದನ ವಿರಾಮವನ್ನು ಒಪ್ಪಿಕೊಂಡಿಲ್ಲ, ಟೆಹ್ರಾನ್ ಹಾಗೂ ಇತರೆ ನಗರಗಳ ಮೇಲೆ ದಾಳಿಯನ್ನು ಮುಂದುವರೆಸಿವೆ.
ಟ್ರಂಪ್ ಅವರ ಹೇಳಿಕೆಯ ಬಗ್ಗೆ ಇಸ್ರೇಲಿ ಮಿಲಿಟರಿ ಪ್ರತಿಕ್ರಿಯಿಸಲು ನಿರಾಕರಿಸಿತು ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯು ಕೂಡ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಇಸ್ರೇಲ್ ಮೊದಲು ತನ್ನ ದಾಳಿಯನ್ನು ನಿಲ್ಲಿಸಬೇಕಾಗುತ್ತದೆ. ಇಸ್ರೇಲ್ ತನ್ನ ಕಡೆಯಿಂದ ದಾಳಿಯನ್ನು ನಿಲ್ಲಿಸಿದರೆ, ಇರಾನ್ ಕೂಡ ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ ಎಂದು ಸಚಿವ ಅಬ್ಬಾಸ್ ಹೇಳಿದ್ದಾರೆ.
ಮತ್ತಷ್ಟು ಓದಿ: Israel-Iran Conflict: ಇಸ್ರೇಲ್ ಮತ್ತು ಇರಾನ್ ನಡುವೆ ಕದನ ವಿರಾಮ ಘೋಷಣೆ, ಇಲ್ಲೂ ಟ್ರಂಪ್ ಮಧ್ಯಸ್ಥಿಕೆಯೇ?
ಅಬ್ಬಾಸ್ ತಮ್ಮ ಪೋಸ್ಟ್ನಲ್ಲಿ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.ಇಸ್ರೇಲ್ ಇರಾನ್ ಮೇಲೆ ಯುದ್ಧವನ್ನು ಪ್ರಾರಂಭಿಸಿದೆ ಮತ್ತು ನಾವು ಮೊದಲು ದಾಳಿ ಮಾಡಿಲ್ಲ ಎಂದು ಇರಾನ್ ಪದೇ ಪದೇ ಸ್ಪಷ್ಟಪಡಿಸಿದೆ. ಇಲ್ಲಿಯವರೆಗೆ ಯಾವುದೇ ಕದನ ವಿರಾಮ ಅಥವಾ ಮಿಲಿಟರಿ ಕಾರ್ಯಾಚರಣೆಗಳ ಅಂತ್ಯದ ಬಗ್ಗೆ ಯಾವುದೇ ಒಪ್ಪಂದವಾಗಿಲ್ಲ. ಆದಾಗ್ಯೂ, ಇಸ್ರೇಲ್ ಆಡಳಿತವು ಇರಾನಿನ ಜನರ ವಿರುದ್ಧದ ಆಕ್ರಮಣವನ್ನು ನಿಲ್ಲಿಸಿದರೆ, ನಾಮಗೂ ಕೂಡ ಈ ದಾಳಿಯನ್ನು ಮುಂದುವರೆಸುವ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಚಿವ ಅಬ್ಬಾಸ್ ಪೋಸ್ಟ್
As Iran has repeatedly made clear: Israel launched war on Iran, not the other way around.
As of now, there is NO “agreement” on any ceasefire or cessation of military operations. However, provided that the Israeli regime stops its illegal aggression against the Iranian people no…
— Seyed Abbas Araghchi (@araghchi) June 24, 2025
ಹಾಗೆಯೇ ಎರಡನೇ ಪೋಸ್ಟ್ನಲ್ಲಿ ಇಸ್ರೇಲ್ಗೆ ತಕ್ಕ ಪ್ರತಿಕ್ರಿಯೆ ನೀಡಲು ನಮ್ಮ ಸಶಸ್ತ್ರ ಪಡೆ ಮಿಲಿಟರಿ ಕಾಯರ್ಯಚರಣೆಯನ್ನು ಬೆಳಗಿನ ಜಾವ ನಾಲ್ಕು ಗಂಟೆಯವರೆಗೆ ನಡೆಸಿತು. ಮಂಗಳವಾರ ಮಧ್ಯರಾತ್ರಿಯಿಂದ ಮೊದಲ ಹಂತದ ಕದನ ವಿರಾಮ ಆರಂಭವಾಗಲಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆ ಸಮಯದಲ್ಲಿ ಇರಾನ್ ದಾಳಿಗಳನ್ನು ನಿಲ್ಲಿಸುತ್ತದೆ . ಇಸ್ರೇಲ್ ಸಹ ದಾಳಿಗಳನ್ನು ನಿಲ್ಲಿಸುತ್ತದೆ.
ಈ ಯುದ್ಧವು ಸಂಪೂರ್ಣವಾಗಿ ಮುಗಿದಿದೆ ಎಂದು ಪರಿಗಣಿಸಲಾಗುತ್ತದೆ. ಈ 12 ದಿನಗಳ ಯುದ್ಧವನ್ನು ಕೊನೆಗೊಳಿಸಿದ್ದಕ್ಕಾಗಿ ಇರಾನ್ ಮತ್ತು ಇಸ್ರೇಲ್ ಅನ್ನು ಅಭಿನಂದಿಸುವುದಾಗಿ ಟ್ರಂಪ್ ಹೇಳಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:37 am, Tue, 24 June 25








