Video: ಫ್ರಾನ್ಸ್: ಮ್ಯೂಸಿಕ್ ಫೆಸ್ಟಿವಲ್ನಲ್ಲಿ 140ಕ್ಕೂ ಅಧಿಕ ಜನರ ಮೇಲೆ ಸಿರಿಂಜ್ ದಾಳಿ
ಫ್ರಾನ್ಸ್ನಲ್ಲಿ ಪ್ರತಿ ವರ್ಷ ಏರ್ಪಡಿಸುವ ಫೇಟ್ ಡೆ ಲಾ ಎನ್ನುವ ಬೀದಿ ಸಂಗೀತ ಉತ್ಸವದಲ್ಲಿ 140ಕ್ಕೂ ಅಧಿಕ ಜನರ ಮೇಲೆ ಸಿರಿಂಜ್ ದಾಳಿ ನಡೆಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಘಟನೆಯ ನಂತರ, ಪೊಲೀಸರು 12 ಶಂಕಿತರನ್ನು ಬಂಧಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಶನಿವಾರ ಸಂಜೆ, ಫೇಟ್ ಡೆ ಲಾ ಮ್ಯೂಸಿಕ್ ಫೆಸ್ಟಿವಲ್ಗೆಂದು ಲಕ್ಷಾಂತರ ಮಂದಿ ಬೀದಿಯಲ್ಲಿ ನೆರೆದಿದ್ದರು.
ಪ್ಯಾರಿಸ್, ಜೂನ್ 24: ಫ್ರಾನ್ಸ್ನಲ್ಲಿ ಪ್ರತಿ ವರ್ಷ ಏರ್ಪಡಿಸುವ ಫೇಟ್ ಡೆ ಲಾ ಎನ್ನುವ ಬೀದಿ ಮ್ಯೂಸಿಕ್ ಫೆಸ್ಟಿವಲ್ನಲ್ಲಿ 140ಕ್ಕೂ ಅಧಿಕ ಜನರ ಮೇಲೆ ಸಿರಿಂಜ್ ದಾಳಿ ನಡೆಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಘಟನೆಯ ನಂತರ, ಪೊಲೀಸರು 12 ಶಂಕಿತರನ್ನು ಬಂಧಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಶನಿವಾರ ಸಂಜೆ, ಫೇಟ್ ಡೆ ಲಾ ಮ್ಯೂಸಿಕ್ ಫೆಸ್ಟಿವಲ್ಗೆಂದು ಲಕ್ಷಾಂತರ ಮಂದಿ ಬೀದಿಯಲ್ಲಿ ನೆರೆದಿದ್ದರು.
ಈ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು 140ಕ್ಕೂ ಹೆಚ್ಚಿನ ಜನರ ಮೇಲೆ ಸಿರಿಂಜ್ನಿಂದ ಹಲ್ಲೆ ನಡೆಸಿದ್ದಾರೆ. ಆ ಸಿರಿಂಜ್ಗಳಲ್ಲಿ ಯಾವ ಮಾದರಿಯ ಔಷಧಗಳಿತ್ತು ಎಂಬುದನ್ನು ಇನ್ನೂ ಪತ್ತೆ ಹಚ್ಚಬೇಕಿದೆ. ಕೆಲವರಿಗೆ ಹೊಟ್ಟೆ, ಕೆಲವರಿಗೆ ಕೈ, ಕೆಲವರಿಗೆ ಬೆನ್ನು ಹೀಗೆ ಸಿಕ್ಕ ಸಿಕ್ಕಲ್ಲಿ ಸಿರಿಂಜ್ ಚುಚ್ಚಲಾಗಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ