AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ ದೊಡ್ಡ ತಪ್ಪು ಮಾಡಿದೆ, ತಕ್ಕ ಶಿಕ್ಷೆ ಅನುಭವಿಸಲಿದೆ: ಇರಾನ್ ಸುಪ್ರೀಂ ನಾಯಕ ಖಮೇನಿ

ಅಮೆರಿಕವು ಇರಾನ್ ಮೇಲೆ ದಾಳಿ ನಡೆಸಿ ದೊಡ್ಡ ತಪ್ಪು ಮಾಡಿದೆ, ಮುಂದಿನ ದಿನಗಳಲ್ಲಿ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಇರಾನ್ ಸುಪ್ರೀಂ ನಾಯಕ ಆಯತೊಲ್ಲಾ ಖಮೇನಿ ಹೇಳಿದ್ದಾರೆ. ಶತ್ರುಗಳ ಧೈರ್ಯಶಾಲಿ ಪ್ರಚೋದನೆಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಪ್ರತಿಜ್ಞೆ ಮಾಡಿದರು. ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದ ಬಳಿಕ ಮೊದಲ ಬಾರಿಗೆ ಖಮೇನಿ ಪ್ರತಿಕ್ರಿಯಿಸಿದ್ದಾರೆ.

ಅಮೆರಿಕ ದೊಡ್ಡ ತಪ್ಪು ಮಾಡಿದೆ, ತಕ್ಕ ಶಿಕ್ಷೆ ಅನುಭವಿಸಲಿದೆ: ಇರಾನ್ ಸುಪ್ರೀಂ ನಾಯಕ ಖಮೇನಿ
ಖಮೇನಿ
ನಯನಾ ರಾಜೀವ್
|

Updated on: Jun 23, 2025 | 8:58 AM

Share

ಇರಾನ್, ಜೂನ್ 23: ಅಮೆರಿಕ(America)ವು ಇರಾನ್(Iran)​​ನ ಪರಮಾಣು ಘಟಕಗಳ ಮೇಲೆ ನಡೆಸಿದ ದಾಳಿಯನ್ನು ಇರಾನ್ ಸುಪ್ರೀಂ ನಾಯಕ ಆಯತೊಲ್ಲಾ ಖಮೇನಿ ತೀವ್ರವಾಗಿ ಖಂಡಿಸಿದ್ದಾರೆ. ಇಸ್ರೇಲ್ ಹಾಗೂ ಅಮೆರಿಕಕ್ಕೆ ಕಠಿಣ ಮತ್ತು ಸೂಕ್ತ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಶತ್ರುಗಳ ಧೈರ್ಯಶಾಲಿ ಪ್ರಚೋದನೆಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಪ್ರತಿಜ್ಞೆ ಮಾಡಿದರು. ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದ ಬಳಿಕ ಮೊದಲ ಬಾರಿಗೆ ಖಮೇನಿ ಪ್ರತಿಕ್ರಿಯಿಸಿದ್ದಾರೆ.

1979ರ ಇಸ್ಲಾಮಿಕ್ ಕ್ರಾಂತಿ ಬಳಿಕ ಇರಾನ್ ವಿರುದ್ಧದ ಅತ್ಯಂತ ಗಂಭೀರ ಪಾಶ್ಚಿಮಾತ್ಯ ಮಿಲಿಟರಿ ಕ್ರಮ ಇದಾಗಿದೆ.ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ಅಮೆರಿಕ ಇದೀಗ ನೇರವಾಗಿ ಭಾಗಿಯಾಗಿದ್ದು ಇರಾನ್ ನಲ್ಲಿನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ಮಾಡಿದೆ. ಅಮೆರಿಕ ದಾಳಿ ಬೆನ್ನಲ್ಲೇ ಕೆರಳಿರುವ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ನಿರ್ಧಾರಕ್ಕೆ ಬಂದಿದೆ.

ಜಾಗತಿಕ ತೈಲ ಮತ್ತು ಅನಿಲ ಸಾಗಣೆಗೆ ಪ್ರಮುಖ ಜಲಮಾರ್ಗವನ್ನು ಮುಚ್ಚುವುದು ಇನ್ನೂ ಅಂತಿಮವಾಗಿಲ್ಲ. ವಿಶ್ವದ ತೈಲ ಮತ್ತು ಅನಿಲದ ಸುಮಾರು 20 ಪ್ರತಿಶತವು ಹಾರ್ಮುಜ್ ಜಲಸಂಧಿಯ ಮೂಲಕ ಹೋಗುತ್ತದೆ. ಇರಾನಿನ ಶಾಸಕರು ಮತ್ತು ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕಮಾಂಡರ್ ಎಸ್ಮಾಯಿಲ್ ಕೊಸಾರಿ, ಯಂಗ್ ಜರ್ನಲಿಸ್ಟ್ ಕ್ಲಬ್‌ಗೆ ಜಲಸಂಧಿಯನ್ನು ಮುಚ್ಚುವುದು ಕಾರ್ಯಸೂಚಿಯಲ್ಲಿದೆ ಮತ್ತು ಅಗತ್ಯವಿದ್ದಾಗಲೆಲ್ಲಾ ಮಾಡಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ
Image
ಇರಾನ್ ಮೇಲೆ ನಡೆಸಿದ ದಾಳಿಯ ವಾರ್​​ರೂಂನಲ್ಲೇ ಕುಳಿತು ವೀಕ್ಷಿಸಿದ್ದ ಟ್ರಂಪ್
Image
ಬಲದಿಂದ ಮಾತ್ರ ಶಾಂತಿ ಸ್ಥಾಪಿಸಲು ಸಾಧ್ಯ, ನೆತನ್ಯಾಹು ಸಂತಸ
Image
ಟ್ರಂಪ್ ಹೆಸರನ್ನು ನೋಬೆಲ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ ಪಾಕಿಸ್ತಾನ
Image
ನೇಪಾಳ, ಶ್ರೀಲಂಕಾ ನಾಗರಿಕರ ಸ್ಥಳಾಂತರಕ್ಕೆ ಭಾರತ ಸಿದ್ಧತೆ

ಮತ್ತಷ್ಟು ಓದಿ: US Strikes on Iran: ಇರಾನ್ ಮೇಲೆ ದಾಳಿ ಮಾಡಿ ಮೈಕ್ ಎದುರು ಶಾಂತಿ ಮಂತ್ರ ಜಪಿಸಿದ ಟ್ರಂಪ್

ಅಮೆರಿಕವು ಇರಾನ್‌ ಮೇಲೆ ದಾಳಿ ನಡೆಸಿದ ಕೆಲವೇ ಘಂಟೆಗಳಲ್ಲಿ ಇರಾನ್‌ ದೇಶವು ಇಸ್ರೇಲ್‌ ವಿರುದ್ದ ದಾಳಿ ನಡೆಸಿದೆ. ಆಪರೇಷನ್‌ ರೈಸಿಂಗ್‌ ಲಯನ್‌ ಹೆಸರಿನಲ್ಲಿ ಇಸ್ರೇಲ್‌ ದೇಶವು ಇರಾನ್‌ ಮೇಲೆ ದಾಳಿ ನಡೆಸಿದ ಬಳಿಕ ಯುದ್ಧ ಆರಂಭವಾಯಿತು. ಇರಾನ್‌ ಕೂಡಾ ಬಳಿಕ ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದೀಗ ಯುದ್ಧಕ್ಕೆ ಅಮೆರಿಕ ಕೂಡಾ ಎಂಟ್ರಿಯಾಗಿದೆ. ಇರಾನ್‌ ನ ಮೂರು ಪರಮಾಣು ನೆಲೆಗಳ ಮೇಲೆ ಶನಿವಾರ ತಡರಾತ್ರಿ ಅಮೆರಿಕ ದಾಳಿ ನಡೆಸಿದೆ. ಫಾರ್ಡೋ, ನತಾಂಜ್‌, ಇಸ್ಫಹಾನ್‌ ಮೇಲೆ ಅಮೆರಿಕ ದಾಳಿ ನಡೆಸಿದೆ.

ಇದು ಆರಂಭವಷ್ಟೇ, ಇನ್ನೂ ಕೆಲವು ಗುರಿಗಳು ಬಾಕಿ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಆಪರೇಷನ್‌ ಮಿಡ್‌ನೈಟ್‌ ಹ್ಯಾಮರ್ ಹೆಸರಿನ ಮಿಲಿಟರಿ ಕಾರ್ಯಾಚರಣೆ ನಡೆಸುವ ಮೂಲಕ, ಇರಾನ್‌ ವಿರುದ್ಧ ಇಸ್ರೇಲ್‌ ಸಾರಿರುವ ಯುದ್ಧವನ್ನು ಅಮೆರಿಕ ಅಧಿಕೃತವಾಗಿ ಪ್ರವೇಶಿಸಿದಂತಾಗಿದೆ. ಇರಾನ್‌ ಮೇಲೆ ಭೀಕರ ದಾಳಿ ನಡೆಸಿದ ಕೆಲ ಹೊತ್ತಿನ ನಂತರ, ಮಾತನಾಡಿದ ಡೊನಾಲ್ಡ್‌ ಟ್ರಂಪ್,ರಾತ್ರೋರಾತ್ರಿ ನಡೆದ ದಾಳಿಗಳಲ್ಲಿ, ಇರಾನ್‌ ಪ್ರಮುಖ ಪರಮಾಣು ಘಟಕಗಳನ್ನು ನಾಶ ಮಾಡಿದ್ದೇವೆ. ಇದು ಸೇನೆಗೆ ಸಂದ ಅದ್ಭುತ ಯಶಸ್ಸು ಎಂದು ಹೇಳಿದರು.

ಇರಾನ್‌ ಮೇಲೆ ದಾಳಿ ಮಾಡಬೇಕೇ? ಬೇಡವೇ ಎಂಬ ಬಗ್ಗೆ ನಿರ್ಣಯ ಕೈಗೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೂ.20ರಂದು 2 ವಾರಗಳ ಸಮಯ ಬಯಸಿದ್ದರು. ಆದರೆ, ಇದಾಗಿ ಎರಡೇ ದಿನದಲ್ಲಿ ಇರಾನ್‌ನ 3 ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ಬಾಂಬ್‌ ದಾಳಿ ನಡೆಸಿದೆ. ಕೇವಲ 48 ಗಂಟೆ ಯಲ್ಲಿ ಬದಲಾದ ಟ್ರಂಪ್‌ ನಡೆಗೆ ಕಾರಣಗಳೇನು ಎಂಬ ಬಗ್ಗೆ ವಿಶ್ಲೇಷಣೆಗಳು ಶುರುವಾಗಿವೆ. ಇರಾನ್‌ ತನ್ನ ಪರಮಾಣುಗಳನ್ನು ಅಜ್ಞಾತ ಸ್ಥಳಗಳಿಗೆ ಸ್ಥಳಾಂತರಿಸುವುದನ್ನು ತಡೆಯಲು ಅಮೆರಿಕ ಈ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಜೂ.19 ಮತ್ತು 20ರಂದು ಫೋರ್ಡೋ ಅಣು ಸ್ಥಾವರದ ಬಳಿಯ ಅಸಾಮಾನ್ಯ ಚಟುವಟಿಕೆಗಳನ್ನು ತೋರಿಸುವ ಉಪಗ್ರಹ ಚಿತ್ರಗಳು ಲಭ್ಯವಾಗಿದ್ದವು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ