ಬಲದಿಂದ ಮಾತ್ರ ಶಾಂತಿ ಸ್ಥಾಪಿಸಲು ಸಾಧ್ಯ, ಇರಾನ್ ಮೇಲೆ ಅಮೆರಿಕದ ದಾಳಿಗೆ ನೆತನ್ಯಾಹು ಸಂತಸ
US Strikes on Iran: ಇರಾನ್‌ನ ಮೂರು ಪರಮಾಣು ತಾಣಗಳ ಮೇಲೆ ಬಾಂಬ್ ದಾಳಿ ನಡೆಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ "ದಿಟ್ಟ ನಿರ್ಧಾರ"ವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ಶ್ಲಾಘಿಸಿದ್ದು , ಇದು ಇತಿಹಾಸದ ಹಾದಿಯನ್ನು ಬದಲಾಯಿಸುತ್ತದೆ ಎಂದು ಹೇಳಿದ್ದಾರೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫೋರ್ಡೊ, ನಟಾಂಜ್ ಮತ್ತು ಎಸ್ಫಹಾನ್ ಸೇರಿದಂತೆ ಇರಾನ್‌ನ ಮೂರು ಪರಮಾಣು ತಾಣಗಳ ಮೇಲೆ ಯುಎಸ್ ಸೈನ್ಯವು ತನ್ನ ಅತ್ಯಂತ ಯಶಸ್ವಿ ದಾಳಿಯನ್ನು ಪೂರ್ಣಗೊಳಿಸಿದೆ ಎಂದು ಹೇಳಿಕೊಂಡಿದ್ದಾರೆ.

ಜೆರುಸಲೇಂ, ಜೂನ್ 22: ಬಲದಿಂದ ಮಾತ್ರ ಶಾಂತಿ ಸ್ಥಾಪಿಸಲು ಸಾಧ್ಯ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ಹೇಳಿದ್ದಾರೆ. ಅಮೆರಿಕವು ಇರಾನ್ ಮೇಲೆ ನಡೆಸಿದ ವಾಯು ದಾಳಿ ಕುರಿತು ನೆತನ್ಯಾಹು ಸಂತಸ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದಲ್ಲಿ ನೇರವಾಗಿ ಅಮೆರಿಕ ಎಂಟ್ರಿ ಕೊಟ್ಟಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫೋರ್ಡೊ, ನಟಾಂಜ್ ಮತ್ತು ಎಸ್ಫಹಾನ್ ಸೇರಿದಂತೆ ಇರಾನ್‌ನ ಮೂರು ಪರಮಾಣು ತಾಣಗಳ ಮೇಲೆ ಯುಎಸ್ ಸೈನ್ಯವು ತನ್ನ ಅತ್ಯಂತ ಯಶಸ್ವಿ ದಾಳಿಯನ್ನು ಪೂರ್ಣಗೊಳಿಸಿದೆ ಎಂದು ಹೇಳಿಕೊಂಡಿದ್ದಾರೆ.
ಈ ಕ್ರಮದ ನಂತರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕಕ್ಕೆ ಧನ್ಯವಾದ ಅರ್ಪಿಸಿದರು. ಅಮೆರಿಕ ನಿಜವಾಗಿಯೂ ವಿಶಿಷ್ಟವಾಗಿದೆ. ಭೂಮಿಯ ಮೇಲಿನ ಯಾವುದೇ ದೇಶ ಮಾಡಲು ಸಾಧ್ಯವಾಗದ ಕೆಲಸವನ್ನು ಅದು ಮಾಡಿದೆ ಎಂದು ಹೇಳಿದ್ದಾರೆ.
ಆಪರೇಷನ್ ರೈಸಿಂಗ್ ಲಯನ್‌ನಲ್ಲಿ ಇಸ್ರೇಲ್ ನಿಜವಾಗಿಯೂ ಅದ್ಭುತವಾದ ಕೆಲಸಗಳನ್ನು ಮಾಡಿದೆ, ಆದರೆ ಇರಾನ್‌ನ ಪರಮಾಣು ಕೇಂದ್ರಗಳ ವಿರುದ್ಧದ ಕಾರ್ಯಾಚರಣೆಯಲ್ಲಿ, ಅಮೆರಿಕ ನಿಜವಾಗಿಯೂ ಎಲ್ಲವನ್ನೂ ಮೀರದ ಕೆಲಸಗಳನ್ನು ಮಾಡಿದೆ. ಭೂಮಿಯ ಮೇಲಿನ ಯಾವುದೇ ದೇಶವು ಮಾಡಲಾಗದ ಕೆಲಸವನ್ನು ಅದು ಮಾಡಿದೆ ಎಂದು ಅವರು ಹೇಳಿದರು. ಒಂದೊಮ್ಮೆ ನೀವು ಕೂಡ ಇಷ್ಟಕ್ಕೆ ಸುಮ್ಮನಾದರೆ ಸರಿ ಏನಾದರೂ ಪ್ರತೀಕಾರ ತೀರಿಸಿಕೊಳ್ಳಲು ಬಯಸಿದರೆ ಇದಕ್ಕಿಂತ ದೊಡ್ಡ ದಾಳಿಯನ್ನು ಎದುರಿಸಬೇಕಾದೀತು ಎಂದು ಟ್ರಂಪ್ ಇರಾನ್ಗೆ ಎಚ್ಚರಿಕೆ ನೀಡಿದ್ದಾರೆ.
ಮತ್ತಷ್ಟು ಓದಿ: US Strikes on Iran: ಇರಾನ್ ಮೇಲೆ ದಾಳಿ ಮಾಡಿ ಮೈಕ್ ಎದುರು ಶಾಂತಿ ಮಂತ್ರ ಜಪಿಸಿದ ಟ್ರಂಪ್
ಇರಾನ್ ಮೇಲೆ ಅಮೆರಿಕದ ದಾಳಿಯ ನಂತರ ಇಸ್ರೇಲ್ ಹೈ ಅಲರ್ಟ್‌ನಲ್ಲಿದೆ. ಇರಾನ್ ಮುಂದೇನು ಮಾಡಬಹುದು ಎಂದು ಗಮನಿಸುತ್ತಿದೆ. ಇರಾನ್‌ನ ಫೋರ್ಡೊ, ನತಾನ್ಸ್, ಇಸ್ಹಾನ್ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. ದೊಡ್ಡ ನಷ್ಟ ಆಗಿಲ್ಲ ಅಂತ ಇರಾನ್ ಹೇಳಿಕೊಂಡಿದೆ. ಆದರೆ ಫೋರ್ಡೊ ಪರಮಾಣು ಕೇಂದ್ರ ನಾಶ ಆಗಿದೆ ಅಂತ ಟ್ರಂಪ್ ಹೇಳಿದ್ದಾರೆ.
ದಾಳಿ ಯಶಸ್ವಿಯಾಗಿದೆ, ಮತ್ತೆ ದಾಳಿ ಮಾಡಲ್ಲ ಅಂತ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಬಿ2 ಬಾಂಬರ್‌ಗಳನ್ನ ಬಳಸಿ ಯುಎಸ್ ದಾಳಿ ಮಾಡಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ರಾನ್‌ನಲ್ಲಿ ಇದುವರೆಗೆ ಕನಿಷ್ಠ 657 ಜನರು ಸಾವನ್ನಪ್ಪಿದ್ದಾರೆ, ಇದರಲ್ಲಿ 263 ನಾಗರಿಕರು ಸೇರಿದ್ದಾರೆ ಮತ್ತು 2,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ರತೀಕಾರವಾಗಿ, ಇರಾನ್ ಇಸ್ರೇಲ್ ಮೇಲೆ 450 ಕ್ಷಿಪಣಿಗಳು ಮತ್ತು 1,000 ಡ್ರೋನ್‌ಗಳನ್ನು ಹಾರಿಸಿದೆ, ಇದರ ಪರಿಣಾಮವಾಗಿ ಕನಿಷ್ಠ 24 ಜನರು ಸಾವನ್ನಪ್ಪಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ








