ಅಮೆರಿಕ ನಡೆಸಿದ ದಾಳಿಯಿಂದ ಪರಮಾಣು ಸೋರಿಕೆಯಾಗಿಲ್ಲ: ಇರಾನ್ ಸ್ಪಷ್ಟನೆ
ನೀವು ಆರಂಭಿಸಿದ್ದೀರಿ ನಾವು ಕೊನೆಗೊಳಿಸುತ್ತೇವೆ ಎಂದು ಇರಾನ್ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ. ಅಮೆರಿಕ ಸೇನೆಯು ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಇದಾದ ಬಳಿಕ ಇರಾನ್ ಮೊದಲ ಪ್ರತಿಕ್ರಿಯೆ ನೀಡಿದ್ದು, ಅಮೆರಿಕ ದಾಳಿಯಿಂದ ನಮಗೆ ಹೆಚ್ಚಿನ ನಷ್ಟವಾಗಿಲ್ಲ. ಪರಮಾಣು ಸೋಕಿಕೆಯಾಗಿಲ್ಲ. ದಾಳಿಗೂ ಮುನ್ನವೇ ಪರಮಾಣು ಕೇಂದ್ರಗಳನ್ನು ಸ್ಥಳಾಂತರಿಸಲಾಗಿತ್ತು ಎಂದು ಹೇಳಿದೆ.

ಇರಾನ್, ಜೂನ್ 22: ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಪರಮಾಣು ಸೋರಿಕೆಯಾಗಿಲ್ಲ ಎಂದು ಇರಾನ್(Iran) ಸ್ಪಷ್ಟಪಡಿಸಿದೆ. ದಾಳಿ ವೇಳೆ ಪರಮಾಣು ಸೋರಿಕೆಯಾಗಿಲ್ಲ, ಮೂರು ಪರಮಾಣು ಕೇಂದ್ರಗಳನ್ನು ಮೊದಲೇ ಸ್ಥಳಾಂತರಿಸಲಾಗಿತ್ತು ಹಾಗಾಗಿ ಯಾವುದೇ ಪರಮಾಣು ಸೋರಿಕೆ ಸಂಭವಿಸಿಲ್ಲ ಎಂದು ಇರಾನ್ ಹೇಳಿದೆ. ಹಾಗೆಯೇ ಅಮೆರಿಕ ತಮ್ಮ ಮೇಲೆ ನಡೆಸಿದ ದಾಳಿಯನ್ನು ಇರಾನ್ ಖಂಡಿಸಿದ್ದು, ಇಂತಹ ದಾಳಿಗಳು ವಿಶ್ವದ ಶಾಂತಿಗೆ ಅಪಾಯಕಾರಿ. ಅಮೆರಿಕವು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ ಮಾಡಿದೆ ಎಂದು ಹೇಳಿದೆ.
ಅಮೆರಿಕದ ದಾಳಿಯನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದೆ. ನೀವು ದಾಳಿಯನ್ನು ಆರಂಭಿಸಿದ್ದೀರಿ ಆದರೆ ಇದನ್ನು ನಾವು ಅಂತ್ಯಗೊಳಿಸುತ್ತೇವೆ ಎಂದು ಸ್ಪಷ್ಟ ಎಚ್ಚರಿಕೆ ರವಾನಿಸಿದೆ. ಇರಾನ್‌ನ ಪರಮಾಣು ನೆಲೆಯಗಳ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯನ್ನು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ತೀವ್ರವಾಗಿ ಖಂಡಿಸಿದರು.
ಇರಾನಿನ ಪರಮಾಣು ತಾಣಗಳ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯ ನಂತರ ಮುನ್ನೆಚ್ಚರಿಕೆಯಾಗಿ ಇಸ್ರೇಲ್ ತನ್ನ ವಾಯುಪ್ರದೇಶವನ್ನು ಮುಚ್ಚಿದೆ ಎಂದು ಇಸ್ರೇಲ್ ವಿಮಾನ ನಿಲ್ದಾಣ ಪ್ರಾಧಿಕಾರ ಪ್ರಕಟಿಸಿದೆ. ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಸೇನೆಯು ವೈಮಾನಿಕ ದಾಳಿ ನಡೆದಿದೆ. ಈ ಕುರಿತು ಖುದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದು, ಇದೀಗ ಶಾಂತಿಯ ಸಮಯ ಎಂದಿದ್ದಾರೆ. ಒಂದೊಮ್ಮೆ ಈಗ ಶಾಂತಿ ಸ್ಥಾಪಿಸದಿದ್ದರೆ ಮತ್ತೊಮ್ಮೆ ದಾಳಿ ನಡೆಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಮತ್ತಷ್ಟು ಓದಿ: US Strikes on Iran: ಇರಾನ್ ಮೇಲೆ ದಾಳಿ ಮಾಡಿ ಮೈಕ್ ಎದುರು ಶಾಂತಿ ಮಂತ್ರ ಜಪಿಸಿದ ಟ್ರಂಪ್
ಈಗ ಅಮೆರಿಕ ಕೂಡ ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಬಹಿರಂಗವಾಗಿ ಸೇರಿಕೊಂಡಿದೆ. ಒಂದೊಮ್ಮೆ ಈಗ ಇರಾನ್ ಶಾಂತಿ ಕಾಪಾಡದೆ ಪ್ರತ್ಯುತ್ತರ ನೀಡಲು ಪ್ರಯತ್ನಿಸಿದರೆ ಸಂಪೂರ್ಣ ವಿನಾಶ ಮಾಡುವವರೆಗೂ ನಾವು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಸಾಮಾನ್ಯವಾಗಿ ಯಾವುದೇ ದೇಶಗಳು ತಮ್ಮ ಮೇಲೆ ಬೇರೆ ದೇಶಗಳು ದಾಳಿ ಮಾಡಿದಾಗ ನೋಡಿಕೊಂಡು ಶಾಂತವಾಗಿರಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿದೆ.
The US informed Israel in advance about the attack on Iran, and the mission was coordinated 🇺🇸🤝🇮🇱
Several 14-ton GBU-57 bombs were dropped on the Fordow facility. Shalom 🔥 pic.twitter.com/ixs6Sk8rEJ
— Mark Israel (@MarkIsrael710) June 22, 2025
ಬಲದಿಂದ ಮಾತ್ರ ಶಾಂತಿ ಸ್ಥಾಪಿಸಲು ಸಾಧ್ಯ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಅಮೆರಿಕವು ಇರಾನ್ ಮೇಲೆ ನಡೆಸಿದ ವಾಯು ದಾಳಿ ಕುರಿತು ನೆತನ್ಯಾಹು ಸಂತಸ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದಲ್ಲಿ ನೇರವಾಗಿ ಅಮೆರಿಕ ಎಂಟ್ರಿ ಕೊಟ್ಟಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫೋರ್ಡೊ, ನಟಾಂಜ್ ಮತ್ತು ಎಸ್ಫಹಾನ್ ಸೇರಿದಂತೆ ಇರಾನ್‌ನ ಮೂರು ಪರಮಾಣು ತಾಣಗಳ ಮೇಲೆ ಯುಎಸ್ ಸೈನ್ಯವು ತನ್ನ ಅತ್ಯಂತ ಯಶಸ್ವಿ ದಾಳಿಯನ್ನು ಪೂರ್ಣಗೊಳಿಸಿದೆ ಎಂದು ಹೇಳಿಕೊಂಡಿದ್ದಾರೆ.
ಈ ಕ್ರಮದ ನಂತರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕಕ್ಕೆ ಧನ್ಯವಾದ ಅರ್ಪಿಸಿದರು. ಅಮೆರಿಕ ನಿಜವಾಗಿಯೂ ವಿಶಿಷ್ಟವಾಗಿದೆ. ಭೂಮಿಯ ಮೇಲಿನ ಯಾವುದೇ ದೇಶ ಮಾಡಲು ಸಾಧ್ಯವಾಗದ ಕೆಲಸವನ್ನು ಅದು ಮಾಡಿದೆ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ








