ಶ್ವಾನಗಳು ನಿಮ್ಮ ಭವಿಷ್ಯ ಹೇಳುತ್ತೆ, ಅದು ಹೇಗೆ? ಜ್ಯೋತಿಷಿ ವಿ. ಗಜಾನನ ಭಟ್ ಹೇಳೋದೇನು?
ಶ್ವಾನ ಎಂದರೆ ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ. ಬಹುತೇಕರು ತಮ್ಮ ಮನೆಯಲ್ಲಿ ಶ್ವಾನವನ್ನು ಸಾಕುತ್ತಾರೆ. ಹೌದು, ಒಂದು ತುತ್ತಿನ ಅನ್ನದ ಋಣಕ್ಕಾಗಿ ಜೀವನ ಪರ್ಯಂತ ಮನೆಮಾಲೀಕನಿಗೆ ಋಣಿಯಾಗಿರುತ್ತೆ ಈ ಶ್ವಾನ. ಈ ಮೂಕ ಪ್ರಾಣಿಗಳ ಶುದ್ಧ ಹಾಗೂ ನಿಷ್ಕಲ್ಮಶ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಮಕ್ಕಳಿಲ್ಲದೇ ಅದೆಷ್ಟೋ ದಂಪತಿಗಳು ಈ ಶ್ವಾನವನ್ನೇ ತಮ್ಮ ಮಕ್ಕಳಂತೆ ಸಾಕುವುದಿದೆ. ಆದರೆ ಈ ಶ್ವಾನಗಳು ನಡೆದುಕೊಳ್ಳುವ ರೀತಿಯಿಂದಲೂ ನಿಮ್ಮ ಜೀವನದಲ್ಲಿ ಎದುರಾಗುವ ಒಳಿತು ಕೆಡುಕುಗಳ ಬಗ್ಗೆ ತಿಳಿದುಕೊಳ್ಳಬಹುದಂತೆ, ಈ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ನಿಯತ್ತು ಎಂದರೆ ಮೊದಲು ನೆನಪಾಗುವುದೇ ಈ ಶ್ವಾನ (dog). ಸ್ವಾಮಿ ನಿಷ್ಠೆಗೆ ಹೆಸರುವಾಸಿಯಾದ ಪ್ರಾಣಿಯಾಗಿದ್ದು, ಈ ಮೂಕ ಪ್ರಾಣಿಗಳ ಜೊತೆಗೆ ಒಳ್ಳೆಯ ಒಡನಾಟ ಬೆಳೆಸಿಕೊಂಡವರೇ ಹೆಚ್ಚು. ಮನೆಯ ಸದಸ್ಯರಂತೆ ಇರುವ ಈ ಶ್ವಾನವೂ ಕೂಡ ನಿಮ್ಮ ಭವಿಷ್ಯ (future) ವನ್ನು ಹೇಳುತ್ತದೆ ಎಂದರೆ ನೀವು ನಂಬುತ್ತೀರಾ. ಹೌದು ನಿಮ್ಮ ಜೀವನದಲ್ಲಿ ಎದುರಾಗುವ ಒಳ್ಳೆಯ ಹಾಗೂ ಕೆಟ್ಟ ಘಟನೆಗಳ ಬಗ್ಗೆ ಈ ಶ್ವಾನವು ಸುಳಿವು ನೀಡುತ್ತದೆಯಂತೆ. ಅದೇಗೆ ಅಂತೀರಾ? ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ.
ಸಾಮಾನ್ಯವಾಗಿ ನೀವು ಎಲ್ಲಿಗಾದರೂ ಹೊರಟು ನಿಂತಾಗ ಮನೆಯ ನಾಯಿ ದೇಹವನ್ನು ಕೆರೆದುಕೊಳ್ಳುವುದು ಹಾಗೂ ಕಿವಿಯನ್ನು ಅಲ್ಲಾಡಿಸುತ್ತಿದ್ದರೆ ನೀವು ಹೋಗುವ ಕೆಲಸವೂ ಯಾವುದೇ ಅಡೆತಡೆಯಿಲ್ಲದೇ ಆಗುತ್ತದೆ. ನಿಮ್ಮ ಪ್ರಯಾಣವೂ ಸುಖಕರವಾಗಿರುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಶ್ವಾನವೂ ಇದ್ದಕ್ಕಿದ್ದಂತೆ ವಿಚಿತ್ರವಾಗಿ ವರ್ತಿಸಿದರೆ ಅದಕ್ಕೆ ನೈಸರ್ಗಿಕ ವಿಕೋಪ ಸಂಭವಿಸುತ್ತದೆ ಎನ್ನುವ ಸುಳಿವು ಅದಕ್ಕೆ ಸಿಕ್ಕಿರಬಹುದು. ಹೀಗಾಗಿ ಈ ಬಗ್ಗೆ ನೀವು ಹೆಚ್ಚು ಜಾಗರೂಕರಾಗಿರಬೇಕು.

ಕೆಲವೊಮ್ಮೆ ಶ್ವಾನಗಳು ನಿಮ್ಮ ಹತ್ತಿರ ಬಂದು ಮೈಮೇಲೆ ಹಾರುತ್ತದೆ. ಇಲ್ಲದಿದ್ದರೆ ನಿಮ್ಮ ಕೈ ಕಾಲುಗಳ ವಾಸನೆ ನೋಡುವುದನ್ನು ನೀವು ಗಮನಿಸಿದ್ದೀರಬಹುದು. ಮನೆಯ ಮುದ್ದಿನ ನಾಯಿಯೂ ನಿಮ್ಮ ಎಡಮೊಣಕಾಲಿನ ಹತ್ತಿರ ಬಂದು ನಿಮ್ಮ ವಾಸನೆ ನೋಡಿದರೆ ಇದರರ್ಥ ನಿಮ್ಮ ಜೀವನದಲ್ಲಿ ಅಭಿವೃದ್ಧಿಯಾಗುತ್ತದೆ. ಸಂಪತ್ತು, ಸಮೃದ್ಧಿಯೂ ತಾನಾಗಿ ಬರುತ್ತದೆ ಎನ್ನುವುದರ ಸೂಚಕವಾಗಿದೆ.
ನೀವು ಯಾವುದೋ ಕೆಲಸಕ್ಕೆಂದು ಹೊರಟು ನಿಂತಿದ್ದಾಗ ನಿಮ್ಮ ಕಣ್ಣಮುಂದೆ ನಾಯಿಯೊಂದು ತನ್ನ ಬಾಯಿಯಲ್ಲಿ ಆಹಾರ ಅಥವಾ ತಿಂಡಿ ತಿನಿಸುಗಳನ್ನು ಕಚ್ಚಿಕೊಂಡು ಓಡುತ್ತಿದ್ದರೆ ಅದು ಶುಭದ ಸಂಕೇತವಂತೆ. ನಿಮ್ಮ ದಿನವೂ ಸಂತೋಷದಿಂದ ಕೂಡಿರುತ್ತದೆ. ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುತ್ತೀರಿ ಎಂದರ್ಥ. ಕೃಷಿಕನು ನೇಗಿಲು ಹೊತ್ತೊಯ್ಯುವಾಗ ಎಡಭಾಗದಲ್ಲಿ ಇಲ್ಲದಿದ್ದರೆ ಮನೆಗೆ ಬರುವಾಗ ಬಲಭಾಗದಲ್ಲಿ ನಾಯಿ ಕಂಡರೆ ಉತ್ತಮ ಇಳುವರಿ ಪಡೆಯುತ್ತೀರಿ ಎನ್ನುವ ನಂಬಿಕೆಯಿದೆ.

“ಶ್ವಾನಗಳು ನಿಮ್ಮ ಭವಿಷ್ಯ ಹೇಳುತ್ತದೆ ಹಾಗೂ ಜೀವನದಲ್ಲಿ ಘಟಿಸಬಹುದಾದ ಘಟನೆಗಳ ಬಗ್ಗೆ ಸೂಚನೆ ನೀಡುತ್ತವೆ ಎನ್ನುವ ಬಗ್ಗೆ ಜ್ಯೋತಿಷ್ಯದಲ್ಲಿ ಯಾವುದೇ ಉಲ್ಲೇಖವಿಲ್ಲ. ಶ್ವಾನಗಳು ನಡೆದುಕೊಳ್ಳುವ ರೀತಿ ಒಳಿತು ಕೆಡುಕಗಳ ಬಗ್ಗೆ ಈ ಬಹಿರಂಗಪಡಿಸುತ್ತವೆಯಂತೆ ಎನ್ನುವುದು ಆಡುಮಾತಿನಲ್ಲಿ ಬಂದಿರುವಂತಹದ್ದು, ಇದೊಂದು ನಂಬಿಕೆಯಾಗಿದೆ. ಈ ರೀತಿ ವಿಚಾರಗಳನ್ನು ನಂಬುವುದು ಆ ವ್ಯಕ್ತಿಯ ನಂಬಿಕೆಗೆ ಬಿಟ್ಟದ್ದು. ಈ ರೀತಿ ಘಟಿಸಲುಬಹುದು, ಘಟಿಸದೇ ಇರಬಹುದೆಂದು ಜ್ಯೋತಿಷಿ ವಿ. ಗಜಾನನ ಭಟ್ ಹೇಳುತ್ತಾರೆ.
ಇದನ್ನೂ ಓದಿ :ಮಳೆಗಾಲದಲ್ಲಿ ಕಪ್ಪೆಗಳು ಮನೆಯೊಳಗೆ ಬಂದ್ರೆ ಅದೃಷ್ಟ ಖುಲಾಯಿಸುತ್ತಾ?
ನೀವೇನಾದ್ರೂ ನಾಯಿಗಳು ಜಗಳ ಮಾಡುವುದನ್ನು ನೋಡಿದರೆ ಅದು ಒಳ್ಳೆಯದಲ್ಲವಂತೆ. ನಾಯಿಗಳ ಹಿಂಡು ಜಗಳ ಮಾಡುವುದನ್ನು ನೋಡಿದರೆ ತೊಂದರೆಗೆ ಸಿಲುಕಿಕೊಳ್ಳುತ್ತೀರಿ. ಅಷ್ಟೇ ಅಲ್ಲದೇ ನಿಮ್ಮವರು ನಿಮ್ಮನ್ನು ಸಂಕಷ್ಟಕ್ಕೆ ಈಡು ಮಾಡುತ್ತಾರೆ. ಒಂದು ವೇಳೆ ಈ ರೀತಿ ದೃಶ್ಯ ಕಂಡರೆ ನೀವು ಎಚ್ಚರಿಕೆಯಿಂದಿರುವುದು ಬಹಳ ಮುಖ್ಯ. ರಾತ್ರಿ ವೇಳೆ ನಾಯಿಗಳು ಅಳುತ್ತಿದ್ದರೆ, ಏನೋ ತೊಂದರೆ ಕಾದಿದೆ ಎಂದರ್ಥ. ನಾಯಿಗಳು ವಿಚಿತ್ರವಾಗಿ ಕೂಗುತ್ತಿದ್ದರೆ ಅದು ಹಣಕಾಸಿನ ನಷ್ಟದ ಸೂಚನೆಯಾಗಿದೆ ಎನ್ನುವ ನಂಬಿಕೆಯಿದೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








