Kick Day 2023: ಮಾಜಿ ಪ್ರೇಮಿಯನ್ನು ನಿಮ್ಮ ಜೀವನದಿಂದ ಹೇಗೆ ದೂರು ಮಾಡುವುದು? ಇಲ್ಲಿದೆ ಟಿಪ್ಸ್

ಈ ಆಂಟಿ-ವ್ಯಾಲೆಂಟೈನ್ಸ್ ವೀಕ್‌ನಲ್ಲಿ ನೀವು ತೊಂದರೆಗೀಡಾದ ನಿಮ್ಮ ಮಾಜಿ ಪ್ರೇಮಿಯಿಂದ ದೂರವಾಗಲು ಹಾಗೂ ಅವರನ್ನು ನಿಮ್ಮ ಜೀವನದಿಂದ ಹೊರಹಾಕಲು ತಜ್ಞರು ಕೆಲವೊಂದು ಸಲಹೆ ನೀಡಿದ್ದಾರೆ.

Kick Day 2023: ಮಾಜಿ ಪ್ರೇಮಿಯನ್ನು ನಿಮ್ಮ ಜೀವನದಿಂದ ಹೇಗೆ ದೂರು ಮಾಡುವುದು? ಇಲ್ಲಿದೆ ಟಿಪ್ಸ್
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Feb 16, 2023 | 12:34 PM

ಆಂಟಿ-ವ್ಯಾಲೆಂಟೈನ್ಸ್ ವೀಕ್‌ನಲ್ಲಿ (Anti-Valentine’s) ನೀವು ತೊಂದರೆಗೀಡಾದ ನಿಮ್ಮ ಮಾಜಿ ಪ್ರೇಮಿಯಿಂದ ದೂರವಾಗಲು ಹಾಗೂ ಅವರನ್ನು ನಿಮ್ಮ ಜೀವನದಿಂದ ಹೊರಹಾಕಲು ತಜ್ಞರು ಕೆಲವೊಂದು ಸಲಹೆ ನೀಡಿದ್ದಾರೆ. ಆಂಟಿ ವ್ಯಾಲೆಂಟೈನ್ಸ್ ವೀಕ್ ಫೆಬ್ರವರಿ 15ರಿಂದ ಸ್ಲ್ಯಾಪ್ ಡೇ ಜೊತೆಗೆ ಪ್ರಾರಂಭವಾಗುತ್ತದೆ. ಮತ್ತು ಕಿಕ್ ಡೇಯನ್ನು ಆಂಟಿ ವ್ಯಾಲೆಂಟೈನ್ಸ್ ಡೇಯ ಎರಡನೇ ದಿನವಾದ ಫೆಬ್ರವರಿ 16ರಂದು ಆಚರಿಸಲಾಗುತ್ತದೆ. ಕಿಕ್ ಡೇ ದಿನದಂದು ಜನರು ತಮ್ಮ ಹಿಂದಿನ ಸಂಬಂಧದ ಎಲ್ಲಾ ನೆನಪುಗಳನ್ನು ತೊಡೆದುಹಾಕಲು ಪ್ರಯತ್ನಿಸುತ್ತಾರೆ. ಮಾಜಿ ಸಂಗಾತಿಯ ನೆನಪು, ಉಡುಗೊರೆಗಳು ನಮಗೆ ಭಾನವಾತ್ಮಕ ಯಾತನೆಯನ್ನು ಉಂಟುಮಾಡುತ್ತದೆ. ಈ ನೋವಿನಿಂದ ಹೊರ ಬಂದು ಹೊಸ ಸುಂದರವಾದ ಜೀವನವನ್ನು ಕಟ್ಟಿಕೊಳ್ಳಲು ಈ ಕಿಕ್ ಡೇ ಯು ಅವಕಾಶ ಕಲ್ಪಿಸುತ್ತಿದೆ.

ನೀವು ನಿಮ್ಮ ಪ್ರೇಮ ಸಂಬಂಧವನ್ನು ಕೊನೆಗೊಳಿಸಿ, ಹೊಸ ಜೀವನವನ್ನು ನಡೆಸಲು ಸಿದ್ಧರಿರುವಿರಿ. ಆದರೆ ಒಂದು ಸಮಸ್ಯೆಯೆಂದರೆ ಅವಳು ಅಥವಾ ಅವನು ನಿಮ್ಮನ್ನು ಬಿಡಲು ಸಿದ್ಧರಿಲ್ಲ. ಸಂಬಂಧವು ಮುಗಿದಿದೆ ಎಂದು ನೀವು ಸ್ಪಷ್ಟವಾಗಿ ತಿಳಿದಿರಬೇಕು. ಇದರಿಂದ ನೀವು ಮತ್ತೊಮ್ಮೆ ಅವರ ಜೀವನದಲ್ಲಿ ಬರಲು ಸಾಧ್ಯವಿಲ್ಲ ಎಂದು ಅವಳು/ಅವನು ಭಾವಿಸುತ್ತಾರೆ” ಎಂದು ಮನಸ್ಥಲಿಯ ಸಂಸ್ಥಾಪಕಿ ಹಾಗೂ ಹಿರಿಯ ಮನೋವೈದ್ಯೆ ಡಾ. ಜ್ಯೋತಿ ಕಪೂರ್ ಹೇಳುತ್ತಾರೆ.

ಡಾ. ಜ್ಯೋತಿ ಕಪೂರ್ ಅವರ ಕೆಲವು ಸುಲಭ ಸಲಹೆಗಳು ಇಲ್ಲಿವೆ:

ಬ್ರೇಕ್‌ಅಪ್ ಆದ ನಂತರ ಮನಸ್ಸನ್ನು ದೃಢವಾಗಿ ಇಟ್ಟುಕೊಳ್ಳಿ: ಸಂಬಂಧದಲ್ಲಿ ಬ್ರೇಕ್‌ಅಪ್‌ಗೆ ಮುಖ್ಯ ಕಾರಣ ಅವರಿಗೆ ನೀವು ಇಷ್ಟ ಇಲ್ಲ ಎಂಬುದು. ಹಾಗಾಗಿ ಸಂಬಂಧ ಮುರಿದು ಬಿದ್ದ ಸಂದರ್ಭದಲ್ಲಿ ಆದಷ್ಟು ಅವರೊಂದಿಗಿನ ಸಂಪರ್ಕವನ್ನು ತಪ್ಪಿಸಿ. ಸ್ವತಂತ್ರವಾಗಿ ಜೀವನ ನಡೆಸಬಲ್ಲೆ ಎನ್ನುವ ದೃಢ ನಿರ್ಧಾರವನ್ನು ತೆಗೆದುಕೊಳ್ಳಿ.

ನಿಮ್ಮ ಮಾಜಿ ಪ್ರೇಮಿಯೊಂದಿಗೆ ಅನಗತ್ಯ ಸಂವಹನವನ್ನು ನಿಲ್ಲಿಸಿ: ನೀವು ಅವರ ಜೊತೆ ಸಂಪರ್ಕದಲ್ಲಿದ್ದರೆ, ಅವರು ನಿಮ್ಮನ್ನು ಮರಳಿ ಪಡೆಯುವ ಅವಕಾಶವಿದೆ ಎಂದು ಅವರು ನಂಬುತ್ತಾರೆ. ಹಾಗಾಗಿ ನೀವು ಮೊಬೈನ್‌ನಲ್ಲಿ ಕರೆ ಮಾಡುವುದಾಗಿರಲಿ ಅಥವಾ ಮೆಸೆಜ್ ಮಾಡುವುದನ್ನು ಮೊದಲು ನಿಲ್ಲಿಸಿ.

ಇದನ್ನೂ ಓದಿ:ಇಂದು Breakup Day, ಪ್ರೇಮಿಗಳ ವಿರೋಧಿ ದಿನ ಯಾಕೆ ಗೊತ್ತಾ?

ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ: ಬ್ರೇಕ್‌ಅಪ್ ಕೆಲವೊಮ್ಮೆ ಮಾನಸಿಕ ಕಿನ್ನತೆಯನ್ನು ಉಂಟುಮಾಡಬಹುದು. ನೀವು ಆದಷ್ಟು ನಿಮ್ಮ ಮಾಜಿ ಪ್ರೇಮಿಯ ನೆನಪಿನಿಂದ ಹೊರ ಬರಲು ಪ್ರಯತ್ನಿಸಿ ಇದಕ್ಕಾಗಿ ನಿಮ್ಮ ಆಪ್ತ ಸ್ನೇಹಿತರ ಸಹಾಯವನ್ನು ತೆಗೆದುಕೊಳ್ಳಿ ಅಥವಾ ಮಾನಸಿಕ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿ.

ನಿಮ್ಮ ದಿನಚರಿಯನ್ನು ಬದಲಿಸಿ: ನೀವು ಪ್ರೀತಿಯಲ್ಲಿದ್ದಾಗ ಭೇಟಿ ನೀಡುತ್ತಿದ್ದಂತಹ ಸ್ಥಳಗಳಿಗೆ ಹೋಗುವುದನ್ನು ನಿಲ್ಲಿಸಿ. ಇದು ನಿಮಗೆ ಅವರ ನೆನಪನ್ನು ಮತ್ತೆ ಮರುಕಳಿಸಬಹುದು. ಹೊಸ ಸ್ಥಳಗಳನ್ನು ಅನ್ವೇಷಿಸಿ ಹಾಗೂ ಇದು ಹೊಸ ಭಾವನೆಯನ್ನು ಮೂಡಿಸುತ್ತದೆ, ಮನಸ್ಸನ್ನು ನಿರಾಳವಾಗಿಸುತ್ತದೆ. ಆದಷ್ಟು ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಸಮಯವನ್ನು ಕಳೆಯಿರಿ.

ಸಾಮಾಜಿಕ ಮಾಧ್ಯವನ್ನು ಆದಷ್ಟು ಖಾಸಗಿಯಾಗಿಟ್ಟುಕೊಳ್ಳಿ: ನಿಮ್ಮ ಮಾಜಿ ಪ್ರೇಮಿಯು ನಿಮ್ಮ ಸಂಪರ್ಕ ಪಡೆಯಲು ಸೋಷಿಯಲ್ ಮೀಡಿಯಾಗಳಲ್ಲಿ ಮೆಸೆಜ್ ಮಾಡಬಹುದು. ನೀವು ದೂರವಿರಬೇಕು ಎಂದು ಒಮ್ಮೆ ನಿರ್ಧರಿಸಿದ ಮೇಲೆ ಮಾಜಿ ಪ್ರೇಮಿಯ ಸಂಪರ್ಕವನ್ನು ಎಂದಿಗೂ ಪಡೆಯಬೇಡಿ.

ತಪ್ಪಿತಸ್ಥ ಭಾವನೆ ಬೇಡ: ಯಾವುದೋ ಒಂದು ಕೆಟ್ಟ ಕಾರಣದಿಂದ ನೀವು ನಿಮ್ಮ ಮಾಜಿ ಪ್ರೇಮಿಯಿಂದ ದೂರವಾಗಿರಬಹುದು. ಇದು ನೀವು ಮಾಡಿರುವಂತಹ ದೊಡ್ಡ ತಪ್ಪು ಎಂದು ನೀವು ಭಾವಿಸಬಾರದು. ತಪ್ಪಿತಸ್ಥ ಭಾವನೆಯನ್ನು ಬದಿಗಿಟ್ಟು ನಿಮ್ಮ ನಿರ್ಧಾರದ ಸರಿಯಾದದ್ದು ಎಂದು ನಂಬಿರಿ.

Published On - 12:34 pm, Thu, 16 February 23