- Kannada News Photo gallery Valentine's Day 2023: Valentine's Day Gift Ideas For Your Loved Ones, Details In Kannada
Valentine’s Day 2023: ಈ ವರ್ಷ ವ್ಯಾಲೆಂಟೈನ್ಸ್ ಡೇಗೆ ಏನು ಗಿಫ್ಟ್ ಕೊಡುವುದು ಎಂದು ಯೋಚಿಸುತ್ತಿದ್ದೀರಾ? ಟಾಪ್ ಗಿಫ್ಟ್ ಐಡಿಯಾಗಳು ಇಲ್ಲಿವೆ
ವ್ಯಾಲೆಂಟೈನ್ಸ್ ಡೇ ಉಡುಗೊರೆಯೊಂದಿಗೆ ನೀವು ಎಷ್ಟು ಕಾಳಜಿ ವಹಿಸುತ್ತೀರಿ ಎಂಬುದನ್ನು ನಿಮ್ಮ ವಿಶೇಷ ವ್ಯಕ್ತಿಗೆ ತೋರಿಸುವ ದಿನವಾಗಿದೆ. ಆದ್ದರಿಂದ ನಿಮ್ಮವರನ್ನು ಮತ್ತಷ್ಟು ಖುಷಿಗೊಳಿಸುವ ಗಿಫ್ಟ್ ಐಡಿಯಾಗಳು ಇಲ್ಲಿವೆ.
Updated on:Feb 06, 2023 | 6:14 PM

ವ್ಯಾಲೆಂಟೈನ್ಸ್ ಡೇ ಉಡುಗೊರೆಯೊಂದಿಗೆ ನೀವು ಎಷ್ಟು ಕಾಳಜಿ ವಹಿಸುತ್ತೀರಿ ಎಂಬುದನ್ನು ನಿಮ್ಮ ವಿಶೇಷ ವ್ಯಕ್ತಿಗೆ ತೋರಿಸುವ ದಿನವಾಗಿದೆ. ಆದ್ದರಿಂದ ನಿಮ್ಮವರನ್ನು ಮತ್ತಷ್ಟು ಖುಷಿಗೊಳಿಸುವ ಗಿಫ್ಟ್ ಐಡಿಯಾಗಳು ಇಲ್ಲಿವೆ.

ಟೇಬಲ್ ಫೋಟೋ ಫ್ರೇಮ್: ನೀವು ನಿಮ್ಮ ಪ್ರೇಮಿಯೊಂದಿಗೆ ಕಳೆದ ಅಪೂರ್ಣ ಕ್ಷಣಗಳ ಫೋಟೋಗಳಿದ್ದರೆ ಅದನ್ನು ಟೇಬಲ್ ಫೋಟೋ ಫ್ರೇಮ್ ಮೂಲಕ ಅವರಿಗೆ ಉಡುಗೊರೆಯಾಗಿ ನೀಡಿ. ಇದು ಪ್ರತಿದಿನ ಅವರ ಮುಖದಲ್ಲೊಂದು ನಗು ಮೂಡಿಸಲು ಕಾರಣವಾಗಬಹುದು.

ನಿಮ್ಮ ಪ್ರೇಮಿಯಲ್ಲಿ ಖುಷಿಗೊಳಿಸಲು ದುಬಾರಿ ಉಡುಗೊರೆಗಳೇ ಬೇಕಾಗಿಲ್ಲ. ಬದಲಾಗಿ ಚಿಕ್ಕ ಉಡುಗೊರೆಗಳು ದುಬಾರಿ ಉಡುಗೊರೆಗಿಂತ ಹೆಚ್ಚಿನ ಸಂತೋಷ ನೀಡುತ್ತದೆ. ಆದ್ದರಿಂದ ಚಿಕ್ಕ ಕೀಚೈನ್ ಖರೀದಿಸಿ ಹಾಗೂ ಅದರಲ್ಲಿ ಸಂದೇಶವನ್ನು ಬರೆದು ಉಡುಗೊರೆಯಾಗಿ ನೀಡಿ. ಈ ಕೀಚೈನ್ ಪ್ರತಿದಿನ ಅವರೊಂದಿಗೆ ಇರುವುದರಿಂದ ನೀವು ಅವರೊಂದಿಗೆ ಇದ್ದಷ್ಟೇ ಖುಷಿ ನೀಡುತ್ತದೆ.

ಪ್ಲಾಟಿನಂ ಉಂಗುರ: ಪ್ರೇಮಿಗಳಿಗೆಂದೇ ಸುಂದರವಾಗಿ ವಿನ್ಯಾಸಗೊಳಿಸಲಾದ ಈ ಪ್ಲಾಟಿನಂ ಉಂಗುರವನ್ನು ಉಡುಗೊರೆಯಾಗಿ ನೀಡಿ. ಪ್ರತಿದಿನ ಧರಿಸಿರುವುದರಿಂದ ನೀವು ಸದಾ ನೆನಪಿನಲ್ಲಿಯೇ ಇರುತ್ತೀರಿ.

ಲೆದರ್ ಫಾರ್ಮಲ್ ಆಫೀಸ್ ಬ್ಯಾಗ್: ನಿಮ್ಮ ಪ್ರೇಮಿಗೆ ದಿನ ಬಳಕೆಯಲ್ಲಿ ಉಪಯೋಗವಾಗುವಂತಹ ಗಿಫ್ಟ್ಗಳನ್ನು ಆಯ್ಕೆ ಮಾಡಿ. ಲ್ಯಾಪ್‌ಟಾಪ್, ಡಾಕ್ಯುಮೆಂಟ್‌ಗಳು ಮತ್ತು ನೋಟ್‌ಬುಕ್ ಇಡಲು ಯೋಗ್ಯವಾದ ಈ ಲೆದರ್ ಫಾರ್ಮಲ್ ಆಫೀಸ್ ಬ್ಯಾಗ್ ಉಡುಗೊರೆಯಾಗಿ ನೀಡಿ. ಇದು ಖಂಡಿತವಾಗಿಯೂ ಅವರಿಗೆ ಇಷ್ಟವಾಗುತ್ತದೆ ಜೊತೆಗೆ ಪ್ರತಿ ದಿನ ಆ ಬ್ಯಾಗ್ ನೋಡಿದ ಕೂಡಲೇ ಅವರಿಗೆ ನಿಮ್ಮ ನೆನಪಾಗುವುದು.

ಚಿನ್ನದಿಂದ ಲೇಪಿತವಾದ ಲೋಹದಿಂದ ಮಾಡಲ್ಪಟ್ಟ ಬ್ಯೂಟಿಫುಲ್ ಗೋಲ್ಡ್ ರೋಸ್ನ್ನು ವ್ಯಾಲೆಂಟೈನ್ಸ್ ಡೇ ವಿಶೇಷ ಉಡುಗೊರೆಯಾಗಿ ನೀಡಿ. ಗುಲಾಬಿ ಪ್ರೀತಿ ಮತ್ತು ಸ್ನೇಹದ ಸಂಕೇತವಾಗಿರುವುದರಿಂದ ನಿಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಲು ಒಂದು ಉತ್ತಮವಾದ ಉಡುಗೊರೆಯಾಗಿದೆ.

ಈ ವಿಶೇಷ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಡಾರ್ಕ್ ಚಾಕೊಲೇಟ್, ಬ್ರೌನಿ, ಬಗೆಬಗೆಯ ಕುಕೀಸ್ ಬಿಸ್ಕೆಟ್, ನಟ್ಸ್ ಕಾಂಬೊ, ಡೆಕೋರ್ ಲೈಟ್ಸ್ ಲ್ಯಾಂಟರ್ನ್, ಕಾರ್ಡ್‌ಗಳನ್ನು ಹೊಂದಿರುವ ಹ್ಯಾಂಪರ್ನ್ನು ಉಡುಗೊರೆಯಾಗಿ ನೀಡಿ. ನೋಡಲು ಆಕರ್ಷಕವಾಗಿರುವುದರ ಜೊತೆಗೆ ಆರೋಗ್ಯಕರ ತಿಂಡಿಯೂ ಹೌದು.
Published On - 3:56 pm, Fri, 3 February 23




