Ajay Devgn: ಪ್ರೀತಿಯಿಂದ ಕೈ ಮುಟ್ಟಲು ಬಂದ ಅಭಿಮಾನಿ; ಸಿಟ್ಟಾದ ಅಜಯ್ ದೇವಗನ್ ಮಾಡಿದ್ದೇನು?
Ajay Devgn Viral Video: ‘ಇಂಥ ಹೀರೋಗಳ ಸಿನಿಮಾವನ್ನು ನೋಡಲೇಬೇಡಿ’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ವೈರಲ್ ಆದ ವಿಡಿಯೋ ಕುರಿತು ಪರ-ವಿರೋಧದ ಚರ್ಚೆ ನಡೆಯುತ್ತಿದೆ.
ನಟ ಅಜಯ್ ದೇವಗನ್ (Ajay Devgn) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಸಿನಿಮಾಗಳನ್ನು ಎಂಜಾಯ್ ಮಾಡುವ ಅಪಾರ ಸಂಖ್ಯೆಯ ಜನರಿದ್ದಾರೆ. ಒಮ್ಮೆಯಾದರೂ ಅವರನ್ನು ನೇರವಾಗಿ ನೋಡಬೇಕು ಎಂಬುದು ಅಭಿಮಾನಿಗಳ ಆಸೆ. ಅದನ್ನು ಈಡೇರಿಸಿಕೊಳ್ಳಲು ಭಾನುವಾರ (ಏಪ್ರಿಲ್ 2) ಅವಕಾಶ ಸಿಕ್ಕಿತ್ತು. ಏ.2ರಂದು ಅಜಯ್ ದೇವಗನ್ ಜನ್ಮದಿನ (Ajay Devgn Birthday). ಆ ಪ್ರಯುಕ್ತ ಅವರು ಮುಂಬೈನ ತಮ್ಮ ನಿವಾಸದ ಎದುರು ಅಭಿಮಾನಿಗಳನ್ನು ಭೇಟಿ ಮಾಡಿದರು. ಆದರೆ ಈ ವೇಳೆ ವ್ಯಕ್ತಿಯೊಬ್ಬರು ನಡೆದುಕೊಂಡ ರೀತಿ ಅಜಯ್ ದೇವಗನ್ಗೆ ಸರಿ ಎನಿಸಲಿಲ್ಲ. ಆ ಸಂದರ್ಭದ ವಿಡಿಯೋ ವೈರಲ್ (Ajay Devgn Viral Video) ಆಗಿದೆ. ಅದನ್ನು ನೋಡಿ ಅಭಿಮಾನಿಗಳ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಅಜಯ್ ದೇವಗನ್ ಮನೆ ಎದುರು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಎಲ್ಲರೂ ಮುಗಿಬಿದ್ದು ಅವರಿಗೆ ಜನ್ಮದಿನದ ಶುಭಾಶಯ ಕೋರಲು ಪ್ರಯತ್ನಿಸಿದರು. ಅಭಿಮಾನಿಗಳ ಗುಂಪಿನಲ್ಲಿ ಇದ್ದ ವ್ಯಕ್ತಿಯೊಬ್ಬ ಸೆಲ್ಫಿ ತೆಗೆದುಕೊಳ್ಳುವಾಗ ಅಜಯ್ ದೇವಗನ್ ಅವರ ಕೈ ಹಿಡಿದುಕೊಂಡ. ಅದು ಅಜಯ್ ದೇವಗನ್ಗೆ ಸರಿ ಎನಿಸಲಿಲ್ಲ. ಕೂಡಲೇ ಅವರು ತಮ್ಮ ಕೈಯನ್ನು ರಭಸವಾಗಿ ಬಿಡಿಸಿಕೊಂಡರು.
ಇದನ್ನೂ ಓದಿ: ರಿಮೇಕ್ ಮಾಡಿ ಕೈ ಸುಟ್ಟುಕೊಂಡ ಅಜಯ್ ದೇವಗನ್; ಹೀನಾಯ ಪರಿಸ್ಥಿತಿಯಲ್ಲಿ ‘ಭೋಲಾ’ ಸಿನಿಮಾ ಕಲೆಕ್ಷನ್
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ಕಂಡು ಕೆಲವರು ಗರಂ ಆಗಿದ್ದಾರೆ. ‘ಇಷ್ಟೆಲ್ಲ ಸೊಕ್ಕು ಇರುವ ನಟರನ್ನು ಜನರು ಯಾಕೆ ಭೇಟಿ ಮಾಡಬೇಕು’ ಎಂದು ಅನೇಕರು ಪ್ರಶ್ನಿಸಿದ್ದಾರೆ. ‘ಕೇವಲ ಕೈ ಮುಟ್ಟಿದ್ದಕ್ಕೆ ಇಂಥ ವರ್ತನೆ. ಅಭಿಮಾನಿಗಳೇನೂ ಇವರ ಆಸ್ತಿ ಕಿತ್ತುಕೊಂಡಿಲ್ಲ’ ಎಂದು ಕೂಡ ಕೆಲವರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Bholaa: ‘ನೀವು ಪದೇಪದೇ ಟಬು ಜತೆ ಸಿನಿಮಾ ಮಾಡೋದು ಯಾಕೆ?’: ನೇರ ಪ್ರಶ್ನೆಗೆ ಅಜಯ್ ದೇವಗನ್ ಉತ್ತರ
ಬಾಲಿವುಡ್ ನಟರ ಟೈಮ್ ಚೆನ್ನಾಗಿಲ್ಲ. ಅಜಯ್ ದೇವಗನ್ ಅವರಿಗೂ ಈ ಮಾತು ಅನ್ವಯ. ಅವರು ನಟಿಸಿ, ನಿರ್ದೇಶಿಸಿರುವ ‘ಭೋಲಾ’ ಸಿನಿಮಾ ಹೇಳಿಕೊಳ್ಳುವಷ್ಟು ಕಲೆಕ್ಷನ್ ಮಾಡಿಲ್ಲ. ಆ ಟೆನ್ಷನ್ ಅಜಯ್ ದೇವಗನ್ ಅವರಿಗೆ ಇದೆ. ಅದರ ನಡುವೆಯೂ ಅಭಿಮಾನಿಗಳನ್ನು ಭೇಟಿ ಮಾಡಿದ ಅವರು ಕೊಂಚ ಗರಂ ಆಗಿ ನಡೆದುಕೊಂಡಿದ್ದಾರೆ.
View this post on Instagram
‘ಇಂಥ ಹೀರೋಗಳ ಸಿನಿಮಾವನ್ನು ನೋಡಲೇಬೇಡಿ. ಆಗ ಅವರೇ ಬಂದು ಜನರ ಬಳಿ ಸೆಲ್ಫಿ ತೆಗೆದುಕೊಳ್ಳಲು ಶುರುಮಾಡುತ್ತಾರೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಈ ವೈರಲ್ ವಿಡಿಯೋ ಕುರಿತು ಪರ-ವಿರೋಧದ ಚರ್ಚೆ ನಡೆಯುತ್ತಿದೆ.
2022ರಲ್ಲಿ ಅಜಯ್ ದೇವಗನ್ ಅವರು ಮಲಯಾಳಂನ ‘ದೃಶ್ಯಂ 2’ ಚಿತ್ರವನ್ನು ಬಾಲಿವುಡ್ಗೆ ರಿಮೇಕ್ ಮಾಡಿ ಗೆದ್ದಿದ್ದರು. ಆದರೆ ಈ ವರ್ಷ ಅವರಿಗೆ ರಿಮೇಕ್ ಸೂತ್ರ ಫಲ ನೀಡಿಲ್ಲ. ತಮಿಳಿನ ‘ಕೈದಿ’ ಚಿತ್ರವನ್ನು ಹಿಂದಿಯಲ್ಲಿ ‘ಭೋಲಾ’ ಶೀರ್ಷಿಕೆಯಡಿ ರಿಮೇಕ್ ಮಾಡಿ ಅವರು ಕೈ ಸುಟ್ಟುಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.