Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs KKR: ಸೋತ ಬಳಿಕ ಕೆಕೆಆರ್ ಮಾಲೀಕ ಶಾರುಖ್ ಜೊತೆ ಹೆಜ್ಜೆ ಹಾಕಿದ ಕೊಹ್ಲಿ

ಕೆಕೆಆರ್ ವಿರುದ್ಧ ಆರ್​ಸಿಬಿ ತಂಡವು ಹೀನಾಯವಾಗಿ ಸೋತ ಬಳಿಕ ವಿರಾಟ್ ಕೊಹ್ಲಿ ಮೈದಾನದಲ್ಲಿಯೇ ಕೆಕೆಆರ್ ತಂಡದ ಮಾಲೀಕ ಶಾರುಖ್ ಖಾನ್ ಜೊತೆ ಸಖತ್ ಆಗಿ ಸ್ಟೆಪ್ ಹಾಕಿರುವ ವಿಡಿಯೋ ವೈರಲ್ ಆಗಿದೆ.

RCB vs KKR: ಸೋತ ಬಳಿಕ ಕೆಕೆಆರ್ ಮಾಲೀಕ ಶಾರುಖ್ ಜೊತೆ ಹೆಜ್ಜೆ ಹಾಕಿದ ಕೊಹ್ಲಿ
ಕೊಹ್ಲಿ-ಎಸ್​ಆರ್​ಕೆ
Follow us
ಮಂಜುನಾಥ ಸಿ.
|

Updated on: Apr 07, 2023 | 6:21 PM

ನಿನ್ನೆ (ಏಪ್ರಿಲ್ 06) ರಂದು ನಡೆದ ಐಪಿಎಲ್ 2023 (IPL 2023) ನ ಕೆಕೆಆರ್ vs ಆರ್​ಸಿಬಿ (KKR vs RCB) ಪಂದ್ಯದಲ್ಲಿ ಆರ್​ಸಿಬಿ ತಂಡವು ಹೀನಾಯ ಸೋಲುಂಡಿದೆ. ಶಾರುಖ್ ಖಾನ್ ಒಡೆತನದ ಕೆಕೆಆರ್ ತಂಡ ಗೆದ್ದು ಬೀಗಿದೆ. ಕೊಲ್ಕತ್ತದಲ್ಲಿ ನಡೆದ ಈ ಪಂದ್ಯ ನೋಡಲು ನಟ ಶಾರುಖ್ ಖಾನ್ (Shah Rukh Khan) ಖುದ್ದು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಪಂದ್ಯ ಗೆದ್ದ ಬಳಿಕ ಡ್ರೆಸ್ಸಿಂಗ್ ರೂಮ್​ಗೆ ತೆರಳಿ ತಮ್ಮ ತಂಡದ ಆಟಗಾರರ ಜೊತೆ ಸಮಯ ಕಳೆದರು, ಅವರೊಟ್ಟಿಗೆ ಮೋಜು ಮಾಡಿದರು, ಆಟಗಾರರನ್ನು ಮುಂದಿನ ಪಂದ್ಯಾವಳಿಗೆ ಹುರಿದುಂಬಿಸಿದರು. ಇದರ ಜೊತೆಗೆ ಆರ್​ಸಿಬಿ ತಂಡದವರನ್ನು ಭೇಟಿ ಮಾಡಿ ಶುಭ ಕೋರಿದರು. ಅದರಲ್ಲಿಯೂ ಶಾರುಖ್ ಖಾನ್, ವಿರಾಟ್ ಕೊಹ್ಲಿಯನ್ನು (Virat Kohli) ಭೇಟಿಯಾಗಿ ಅವರೊಟ್ಟಿಗೆ ಡ್ಯಾನ್ಸ್ ಸ್ಟೆಪ್ ಸಹ ಹಾಕಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

ಪಂದ್ಯ ಮುಗಿದ ಬಳಿಕ ಮೈದಾನಕ್ಕೆ ಬಂದ ನಟ ಶಾರುಖ್ ಖಾನ್ ಅಲ್ಲಿಯೇ ಇದ್ದ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಂಡು ಕೆಲ ಸಮಯ ಮಾತನಾಡಿ ಆ ಬಳಿಕ ವಿರಾಟ್ ಕೊಹ್ಲಿಗೆ ತಮ್ಮ ಇತ್ತೀಚೆಗಿನ ಸೂಪರ್ ಹಿಟ್ ಪಠಾಣ್ ಸಿನಿಮಾದ ಸ್ಟೆಪ್​ಗಳನ್ನು ಹೇಳಿಕೊಡಲು ಯತ್ನಿಸಿದರು. ವಿರಾಟ್ ಕೊಹ್ಲಿ, ಶಾರುಖ್ ಸ್ಟೆಪ್ ಅನ್ನು ನಕಲು ಮಾಡಲು ಯತ್ನಿಸಿ ವಿಫಲರಾದರು. ಈ ಇಬ್ಬರು ಲೆಜೆಂಡ್​ಗಳು ಒಟ್ಟಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸೋತ ಎದುರಾಳಿ ತಂಡದೊಟ್ಟಿಗೆ ಶಾರುಖ್ ಖಾನ್​ರ ಸೌಹಾರ್ಧ ಗುಣ ಹಾಗೂ ವಿರಾಟ್ ಕೊಹ್ಲಿಯ ಕ್ರೀಡಾ ಸ್ಪೂರ್ತಿಯನ್ನು ಕ್ರಿಕೆಟ್ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಮೈದಾನದಲ್ಲಿ ಸದಾ ಸ್ಪರ್ಧಾತ್ಮಕವಾಗಿ ಆಡುವ, ಎದುರಾಳಿಗಳ ಮೇಲೆ ಸವಾರಿ ಮಾಡಲು ಯತ್ನಿಸುವ ವಿರಾಟ್ ಕೊಹ್ಲಿ ಪಂದ್ಯ ಮುಗಿದ ಬಳಿಕ ಎದುರಾಳಿ ತಂಡದೊಟ್ಟಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳುತ್ತಾರೆ. ಇನ್ನು ಶಾರುಖ್ ಖಾನ್ ಸಹ ಆಟಗಾರರನ್ನು ಗೌರವಿಸುವ ವ್ಯಕ್ತಿತ್ವದವರಾಗಿದ್ದು, ಬಹುತೇಕ ಎಲ್ಲ ಕ್ರಿಕೆಟಿಗರೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ವಿರಾಟ್ ಕೊಹ್ಲಿಯೊಟ್ಟಿಗೆ ಶಾರುಖ್ ಖಾನ್​ಗೆ ತುಸು ಹೆಚ್ಚೇ ಗೆಳೆತನವಿದೆ.

ಅದೇ ದಿನ ಕೆಕೆಆರ್ ತಂಡದೊಟ್ಟಿಗೆ ಶಾರುಖ್ ಖಾನ್ ಮೋಜು ಮಾಡಿರುವ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಗೆದ್ದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ತಂಡದ ಎಲ್ಲರೂ ಒಟ್ಟಿಗೆ ಕೆಕೆಆರ್​ನ ಧ್ಯೇಯ ವಾಕ್ಯ ಹೇಳಲು ಸೇರಿದ್ದರು. ಆಗ ಶಾರುಖ್ ಖಾನ್, ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡಿದ ರಿಂಕು ಮೊದಲು ಹೇಳಲಿ ನಾವು ಅವನನ್ನು ಫಾಲೋ ಮಾಡೋಣ ಎಂದಿದ್ದಾರೆ. ಆದರೆ ರಿಂಕು, ಅಯ್ಯೋ ಅದು ಇಂಗ್ಲೀಷ್​ನಲ್ಲಿದೆ ನನಗೆ ಬರೊಲ್ಲ ಎನ್ನುತ್ತಾರೆ. ಬಳಿಕ ಎಲ್ಲರೂ ಒಟ್ಟಿಗೆ ಕೆಕೆಆರ್ ಧ್ಯೇಯವಾಕ್ಯವನ್ನು ಹೇಳಿದ್ದಾರೆ. ಕೊನೆಗೆ ಆಟಗಾರನೊಬ್ಬ ಶಾರುಖ್ ಖಾನ್ ಸೇರಿದಂತೆ ಎಲ್ಲರ ಮೇಲೆ ಕೂಲ್​ಡ್ರಿಂಕ್ ಚೆಲ್ಲಿದ್ದಾನೆ. ಈ ವಿಡಿಯೋ ಸಹ ಇದೀಗ ವೈರಲ್ ಆಗಿದೆ.

ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ 8 ವಿಕೆಟ್​ಗಳ ಭರ್ಜರಿ ಜಯ ಗಳಿಸಿದ್ದ ಆರ್​ಸಿಬಿ ತಂಡ ಎರಡನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 81 ರನ್​ಗಳ ಬೃಹತ್ ಅಂತರದಿಂದ ಸೋಲು ಕಂಡಿತು. ಆರ್​ಸಿಬಿಯ ಮುಂದಿನ ಪಂದ್ಯವು ಲಖನೌ ಸೂಪರ್ ಜಾಯಿಂಟ್ಸ್ ವಿರುದ್ಧ ಏಪ್ರಿಲ್ 10 ರಂದು ನಡೆಯಲಿದೆ. ಇನ್ನು ಕೆಕೆಆರ್ ತಂಡದವು ಏಪ್ರಿಲ್ 9 ರಂದು ಗುಜರಾತ್ ತಂಡದವರನ್ನು ಎದುರಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು